Saptashwa TV Kannada

Saptashwa Kannada is a dynamic online media portal that delivers engaging content across a wide spectrum of interests. From breaking news and in-depth movie reviews to lifestyle tips, gadget updates, and travel inspiration, it caters to the diverse tastes.


Saptashwa TV Kannada

ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಜೊತೆ ಮಾಂಡ್ರೆ ಸಪ್ತಪದಿ...

ಖ್ಯಾತ ನಿರ್ಮಾಪಕನ ಜೊತೆ ಸಪ್ತಪದಿ ತುಳಿದ ಶರ್ಮಿಳಾ ಮಾಂಡ್ರೆ
ಜೈಪುರದ ಸರೋದ ಪ್ಯಾಲೆಸ್ನಲ್ಲಿ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆ..
ಮದುವೆಯಲ್ಲಿ ಕನ್ನಡದ ರಮ್ಯಾ, ಧನ್ಯಾ ರಾಮ್ ಕುಮಾರ್, ಪೂರ್ಣಿಮಾ, ಕವಿತಾ ಲಂಕೇಶ್ ಸೇರಿದಂತೆ ಸೌತ್ ಇಂಡಿಯಾದ ಸ್ಟಾರ್ ಕಲಾವಿದರು ಭಾಗಿ..
ತಮಿಳಿನ ಖ್ಯಾತ ನಿರ್ಮಾಪಕ ಆಗಿರೋ ಸುಧನ್ ಸುಂದರಂ..

15 hours ago | [YT] | 1

Saptashwa TV Kannada

ಪವನ್ ಕಲ್ಯಾಣ್ ಬಲಗೈ ಭುಜಕ್ಕೆ ಶಸ್ತ್ರ ಚಿಕಿತ್ಸೆ

20 hours ago | [YT] | 1

Saptashwa TV Kannada

ಕ್ಯೂಟ್ ಆಗಿ ಸೆಲ್ಫಿಗೆ ಫೋಸ್ ಕೊಟ್ಟ ಮೋಹಕ ತಾರೆ ರಮ್ಯಾ

20 hours ago | [YT] | 1

Saptashwa TV Kannada

96 ಸಿನಿಮಾದಲ್ಲಿ ನಟಿಸಿದ್ದ ಜಾನಕಿ ಜತೆಗಿನ ಫೋಟೋ ಹಂಚಿಕೊಂಡ ತ್ರಿಷಾ ಕೃಷ್ಣನ್

20 hours ago | [YT] | 6

Saptashwa TV Kannada

ನಟ ಆರ್ಯ ವಿರುದ್ಧ ₹1.80 ಕೋಟಿ ವಂಚನೆ ಆರೋಪ!

ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟ ಆರ್ಯ ವಿರುದ್ಧ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ದುಬಾರಿ ಡಿಜಿಟಲ್ ಕ್ಯಾಮೆರಾಗಳು, ಲೈಟಿಂಗ್ ಯೂನಿಟ್‌ಗಳು ಸೇರಿದಂತೆ ಚಿತ್ರೀಕರಣಕ್ಕೆ ಬಳಸುವ ಉಪಕರಣಗಳನ್ನು ಬಾಡಿಗೆಗೆ ಪಡೆದು ಹಣ ಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ನಟ ಆರ್ಯ, ನಿರ್ಮಾಪಕ ವಿನೋದ್ ಹಾಗೂ ಪ್ರೊಡಕ್ಷನ್ ಹೌಸ್ ಪ್ರತಿನಿಧಿಗಳ ವಿರುದ್ಧ ದೂರು ದಾಖಲಾಗಿದ್ದು, ಸುಮಾರು ₹1.80 ಕೋಟಿಗೂ ಅಧಿಕ ಬಾಕಿ ಉಳಿದಿದೆ ಎಂದು ಕ್ಯಾಮೆರಾ ಉಪಕರಣಗಳನ್ನು ಬಾಡಿಗೆಗೆ ನೀಡಿದ ಸಂಸ್ಥೆ ದೂರಿನಲ್ಲಿ ತಿಳಿಸಿದೆ.

22 hours ago | [YT] | 2

Saptashwa TV Kannada

ನನ್ನ ಸಾ_ವಿಗೆ ಗಂಡ ಮತ್ತು ಅಕ್ಕನೇ ಕಾರಣ

ಗಂಡ ಹಾಗೂ ಗಂಡನ ಅಕ್ಕನಿಂದ ನಿರಂತರ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಮುನ್ನ ಬರೆದ ಡೆತ್ ನೋಟ್‌ನಲ್ಲಿ "ನನ್ನ ಸಾವಿಗೆ ನನ್ನ ಗಂಡ ಮತ್ತು ಗಂಡನ ಅಕ್ಕ ಕಾರಣ" ಎಂದು ಆರೋಪಿಸಿದ್ದಾರೆ. "ಅವರಿಂದ ಬದುಕುವ ಆಸೆಯೇ ಇಲ್ಲದಂತಾಗಿದೆ. ನಾನು ಸತ್ತರೆ ಅವರನ್ನು ಸುಮ್ಮನೇ ಬಿಡಬೇಡಿ ಅಮ್ಮ" ಎಂದು ತಾಯಿಯನ್ನು ಉಲ್ಲೇಖಿಸಿ ಬರೆದಿದ್ದಾರೆ.

22 hours ago | [YT] | 1

Saptashwa TV Kannada

ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

1 day ago | [YT] | 6

Saptashwa TV Kannada

ಭಾವಪೂರ್ಣ ಶ್ರದ್ಧಾಂಜಲಿ ಭಾರತೀಯ ಸಂಗೀತದ ಗಾನ ಕೋಗಿಲೆ ಇನ್ನಿಲ್ಲ..!

#SJanaki #RIPSJanaki #LegendarySinger #PlaybackSinger #IndianMusic #SouthIndianMusic #KannadaSongs #TamilSongs #TeluguSongs #MalayalamSongs #Mysuru #BreakingNews #MusicLegend #SaptashwaTV

1 day ago | [YT] | 9

Saptashwa TV Kannada

ಬರಪೀಡಿತ ಪ್ರದೇಶ ಗುರುತಿಸಲು ಗ್ರೌಂಡ್ ಸರ್ವೇ ಆರಂಭ



ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶಗಳನ್ನು ಗುರುತಿಸಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಸ್ಥಳ ಪರಿಶೀಲನೆ (Ground Truthing) ಪೂರ್ಣಗೊಳಿಸಿ, ಅಗತ್ಯ ಪ್ರಸ್ತಾವನೆಗಳನ್ನು ಪಡೆದು ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬರ ಪರಿಸ್ಥಿತಿಯ ಕುರಿತು ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಸತತ ಮೂರು ವಾರಗಳ ಕಾಲ ಮಳೆಯಾಗದೇ ಇರುವ, ಶೇಕಡಾ 60ಕ್ಕಿಂತ ಕಡಿಮೆ ಮಳೆಯಾಗಿರುವ ಹಾಗೂ ಸರ್ಕಾರ ನಿಗದಿಪಡಿಸಿರುವ ಇತರೆ ಮಾನದಂಡಗಳನ್ನು ಪೂರೈಸಿರುವ ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವ ಪ್ರಕ್ರಿಯೆ ನಡೆಯಲಿದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದ್ದಾರೆ.

3 days ago | [YT] | 0