AUM.. Ammana Diary is a diary of a Mother, not just me, but all the Mothers who are giving a little thought to raise their children in a healthy- peaceful environment. Thus, it becomes every Mother's diary!
In this channel I have been covering vast number of parenting topics. From what food to give, how to make them sleep better, dealing with temper tantrums, managing our own emotions etc.. Also narrated stories from mythology.
Being a mother of two sons (6 & 12 years) parenting has taught me a lot in these years which no other Universities in the world may not do even if I enrol for a lifetime!
I am Shreekala D.S, writer by profession, classical dancer by passion. Written book in Kannada, "Baalanti Purana" which consists of the postnatal experiences of a mother. Being a student of psychology, observing development of a child & trying to respond in a right way is what I love to do. Let our consciousness expand with the consciousness of the Universe as a Mother & as a human being.
Ammana Diary - ಅಮ್ಮನ ಡೈರಿ
Here is few clicks of 'Sakala Samskruti' Sambhrama happened recently. It is a 6 months workshop conducted for children where we conduct classes of theatre, dance, shloka, Yoga, Pranayama, Art & Craft, Katha Sessions, public speaking, concentration improvement sessions..
#sakalasamskruti #sakala_samskruti #sakalasamskruti_sambhrama
1 year ago | [YT] | 0
View 0 replies
Ammana Diary - ಅಮ್ಮನ ಡೈರಿ
Here is few clicks of 'Sakala Samskruti' Sambhrama happened recently. It is a 6 months workshop conducted for children where we conduct classes of theatre, dance, shloka, Yoga, Pranayama, Art & Craft, Katha Sessions, public speaking, concentration improvement sessions..
#sakalasamskruti #sakala_samskruti #sakalasamskruti_sambhrama
1 year ago | [YT] | 0
View 0 replies
Ammana Diary - ಅಮ್ಮನ ಡೈರಿ
Here is few clicks of 'Sakala Samskruti' Sambhrama happened recently. It is a 6 months workshop conducted for children where we conduct classes of theatre, dance, shloka, Yoga, Pranayama, Art & Craft, Katha Sessions, public speaking, concentration improvement sessions..
#sakalasamskruti #sakala_samskruti #sakalasamskruti_sambhrama
1 year ago | [YT] | 0
View 0 replies
Ammana Diary - ಅಮ್ಮನ ಡೈರಿ
Here is few clicks of 'Sakala Samskruti' Sambhrama happened recently. It is a 6 months workshop conducted for children where we conduct classes of theatre, dance, shloka, Yoga, Pranayama, Art & Craft, Katha Sessions, public speaking, concentration improvement sessions..
#sakalasamskruti #sakala_samskruti #sakalasamskruti_sambhrama
1 year ago | [YT] | 0
View 0 replies
Ammana Diary - ಅಮ್ಮನ ಡೈರಿ
ನಾನು ಯಾಕೆ ಕಥೆ ಹೇಳಬೇಕು?
****************
ನನ್ನ ತಂಗಿಯ ಮಗ ಪಾರ್ಥ ನಾಲ್ಕು ವರ್ಷದವ. ದಸರಾ ರಜೆಯಲ್ಲಿ ಊರು ಕಡೆಗಿದ್ದ. ‘ನವರಾತ್ರಿ ಕಥಾ’ ಸರಣಿಯ ಒಂಭತ್ತೂ ದಿವಸದ ಕಥೆಗಳನ್ನೂ ಬೆಳಿಗ್ಗೆಯೇ ಕೇಳುತ್ತಿದ್ದ. ಆದರೆ ಕೊನೆಯ ದಿನವಾದ ನಿನ್ನೆ ನೆಟ್ ವರ್ಕ್ ಇಲ್ಲದೆ ಇರುವ ಕಡೆ ಇದ್ದನಂತೆ. ಹೀಗಾಗಿ ಕಥೆ ಕೇಳಿಲ್ಲ ಎಂಬ ಚಡಪಡಿಕೆ ಅವನಿಗೆ. ಕೊನೆಗೆ ಹೋದ ನೆಂಟರ ಮನೆಯಲ್ಲಿ ವೈಫೈ ಇದೆಯಾ ಅಂತ ಕೇಳಿ, ಕಥೆಯನ್ನು ನೋಡಿದ ಮೇಲೆಯೇ ಸಮಾಧಾನವಾಯಿತಂತೆ!
ನಾನು ಕಥೆ ಹೇಳಲು ದೊಡ್ಡ ಪ್ರೇರಣೆ ಇವನಂತಹ ಮಕ್ಕಳು. ಈ ಡಿಜಿಟಲ್ ಕಂಟೆಂಟ್ ಕ್ರಿಯೇಶನ್ ಇದ್ಯಲ್ಲಾ.. ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ. ಯದ್ವಾ ತದ್ವಾ ಏಳು-ಬೀಳುಗಳ ತಾಣ. ಲಕ್ಷಾಂತರ ಜನ ವೀಡಿಯೋಗಳನ್ನ ಮಾಡುತ್ತಾರೆ. ಅದರ ಮಧ್ಯದಲ್ಲಿ ನಮ್ಮ ನಮ್ಮ ವಿಚಾರಧಾರೆಯನ್ನು ವೀಡಿಯೋ ಆಗಿ ಕೊಡುವಾಗ ಇರುವ ಸವಾಲು ಬಹಳ ದೊಡ್ಡದು. ಅರ್ಧ ಚಡ್ಡಿ ಹಾಕಿ ಕುಣಿಯುವ ವೀಡಿಯೋಗಳಿಗೆ ಬರುವಷ್ಟು ವ್ಯುವರ್ ಶಿಪ್ ಮೌಲ್ಯಯುತವಾದ ಸಂಗತಿಗಳಿಗೆ ಬರದು. Vlog ಎಂಬ ಹೆಸರಿನಲ್ಲಿ ತಾವು ಬೆಳಿಗ್ಗೆಯಿಂದ ಸಂಜೆಯ ತನಕ ಏನು ಮಾಡಿದ್ವಿ ಎಂಬುದನ್ನು ಹೇಳುತ್ತಾರೆ. ಲಕ್ಷಗಟ್ಟಲೆ ಜನ ಅದನ್ನು ಯಾಕಾಗಿ ನೋಡುತ್ತಾರೆ ಎಂಬುದು ನನಗಿನ್ನೂ ಅರ್ಥವಾಗಿಲ್ಲ. ಅವುಗಳ ಜೊತೆ ಒಳ್ಳೆಯದನ್ನು ಹೋಲಿಸಬೇಕು ಅಂತಲ್ಲ. ಆದರೆ ಯಾಕಿದು ಹೀಗೆ ಎಂದು ಖಂಡಿತ ಅನ್ನಿಸುತ್ತದೆ. ಇಂತಹ ವೀಡಿಯೋ ಮಾಡಲು ಅವರೆಲ್ಲಾ ಅಧ್ಯಯನ ಮಾಡಿರುವುದಿಲ್ಲ, ನನ್ನ ವೀಡಿಯೋದಲ್ಲಿ ಇವತ್ತು ಉತ್ತಮವಾದದ್ದನ್ನು ಏನು ಕೊಡಲಿ ಎಂದು ಯೋಚಿಸಿರುವುದಿಲ್ಲ, ತಯಾರಿಯಂತೂ ಇಲ್ಲವೇ ಇಲ್ಲ. ಹೀಗಿದ್ದರೂ ‘ಕಾಮನ್ ಆಡಿಯನ್ಸ್’ಗೆ ಇವೇ ಇಷ್ಟ ಆಗೋದು ಎಂಬ ಹೆಸರಿನಲ್ಲಿ ಒಂದು ರಾಶಿ ಜಂಕ್ ಗಳನ್ನು ಕೊಡುತ್ತಾ ಹೋಗುತ್ತಾರೆ. ‘ಕಾಮನ್ ಸೆನ್ಸ್’ ಇಲ್ಲದವರು ಅದನ್ನು ನೋಡುತ್ತಲೇ ಹೋಗುತ್ತಾರೆ.
ಇರಲಿ, ಇದು ಹೇಳಿ ಮುಗಿಯದ ಕಥೆ. ಇವೆಲ್ಲಾ ಸವಾಲುಗಳ ಮಧ್ಯೆಯೇ ‘ಅಮ್ಮನ ಡೈರಿ’ಯಲ್ಲಿ ‘ನವರಾತ್ರಿ ಕಥಾ’ ಸರಣಿಯನ್ನು ಮಾಡುವ ನಿರ್ಧಾರ ಮಾಡಿದೆ. ಒಂಭತ್ತು ದಿನಗಳು, ಒಂಭತ್ತು ಕಥೆಗಳು ಎಂಬ ಪರಿಕಲ್ಪನೆಯಡಿ ಭಾಗವತ, ಮಾರ್ಕಂಡೇಯ ಪುರಾಣ ಮತ್ತು ಕೆಲವು ನಿಖರವಾದ ಮೂಲಗಳಿಂದ ಆಯ್ದ ಕಥೆಗಳನ್ನು ಈ ಸರಣಿಯಲ್ಲಿ ಹೇಳಿದ್ದೇನೆ. ಮಾರ್ಕಂಡೇಯ ಪುರಾಣದ ‘ದೇವಿ ಮಹಾತ್ಮೈ’ ಅಥವಾ ‘ದೇವಿ ಸಪ್ತಶತಿ’ ಎಂದೇ ಪ್ರಸಿದ್ಧವಾದ ಇವುಗಳು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ ಎಂಬುದಕ್ಕೆ ಪಾರ್ಥನಂತಹ ಮಕ್ಕಳ ಪ್ರತಿಕ್ರಿಯೆಗಳೇ ನನಗೆ ಮಾಪನ.
ಈ ‘ನವರಾತ್ರಿ ಕಥಾ’ ಸರಣಿಗಾಗಿ ನನ್ನ ಜೊತೆಗೆ ಮುದ್ದಾದ ದೇವಿಯರನ್ನು ಕೂರಿಸಿಕೊಂಡಿದ್ದೆ. ಅವನಿ, ಸಮೃದ್ಧಿ, ಆದ್ಯಾ, ಘನಶ್ರೀ, ಸಾನ್ವಿ ಪುಟ್ಟಿಯರಿಗೆ ಕೃತಜ್ಞಳು. ಚೆಂದಗೆ ಅಲಂಕಾರ ಮಾಡಿ, ಆಯಾ ದಿನಕ್ಕೆ ತಕ್ಕುನಾಗಿ ಆಯಾ ಬಣ್ಣದ ಬಟ್ಟೆಗಳನ್ನು ಹೊಂದಿಸಿ ಕಳುಹಿಸಿದ ಅವರ ಅಮ್ಮಂದಿರಾದ Akshi Kulkarni, Anjali Hegde , Maithri Upadhya, Apoorva, Manjula ( Lakshmi Sagar Shettru MP ) ಇವರಿಗೆ ಧನ್ಯವಾದ.
ಈ ಕಥೆಗಳನ್ನು ಸುಮ್ಮನೆ ಹಾಗೇ ಗೋಡೆಯ ಬ್ಯಾಕ್ ಡ್ರಾಪ್ ನಲ್ಲಿ ಮಾಡಿ ಮುಗಿಸುವವಳಿದ್ದೆ ನಾನು. ಆಗ ನನ್ನ ಸ್ನೇಹಿತೆ ಅಪೂರ್ವ ಅವರು ಬಂದು, ‘ನಾನು ಡೆಕೋರೇಶನ್ ಮಾಡ್ತೀನಿ. ಚೆನ್ನಾಗಿರುತ್ತೆ’ ಎಂದು ಬಹಳ ಮುತುವರ್ಜಿಯಿಂದ ಚಂದದ ಗೋಡೆಯ ಅಲಂಕಾರ ಮಾಡಿದರು. ಇಡೀ ಫ್ರೇಮ್ ಚಂದಗಾಣಲು ಕಾರಣರಾದದ್ದಕ್ಕೆ ಅವರಿಗೆ ಧನ್ಯವಾದಗಳು.
ಎಲ್ಲವನ್ನೂ ನನ್ನಿಂದ ಮಾಡಿಸಿದ ಆ ಜಗನ್ಮಾತೆಗೆ ಭಕ್ತಿಪೂರ್ವಕ ನಮನಗಳು.
ಈ ಪ್ರಯತ್ನಕ್ಕೆ ಪ್ರೋತ್ಸಾಹ ಕೊಡುವ ಮನಸ್ಸಿದ್ದವರು ‘ಅಮ್ಮನಡೈರಿ’ ಯೂಟ್ಯೂಬ್ ಚಾನೆಲ್ ನೋಡಬಹುದು. ಅಥವಾ Ammana Diary FB Page ನೋಡಬಹುದು. ಇಂತಹ ಮೌಲ್ಯಯುತ ಕಥೆಗಳು ಇನ್ನಷ್ಟು ಜನರನ್ನು ತಲುಪುವುದು ಅವಶ್ಯಕವೂ ಹೌದು. ಹೀಗಾಗಿ ಶೇರ್ ಮಾಡಿದರೆ ಉತ್ತಮ. ಇನ್ನೇನೂ ಕೋರಿಕೆ ಇಲ್ಲ. ಈಗಾಗಲೇ ನೋಡಿ, ಮೆಚ್ಚಿದ ಎಲ್ಲರಿಗೂ ಧನ್ಯವಾದ.
#ನವರಾತ್ರಿಕಥಾ #ammanadiary #ammanakathe #shreekalads #ಅಮ್ಮನಡೈರಿ #9ದಿನ9ಕಥೆಗಳು #9days9stories #ಅಮ್ಮನಕಥೆ #devi_stories #ammanakathe
2 years ago | [YT] | 9
View 4 replies
Ammana Diary - ಅಮ್ಮನ ಡೈರಿ
50 ಎಪಿಸೋಡು ಪೂರ್ಣಗೊಳಿಸಿದ ಮಹದಾನಂದ..
ಅಮ್ಮನ ಡೈರಿ ಶುರು ಮಾಡುವಾಗ ಇದ್ದ ಒಂದು ಸ್ಪಷ್ಟತೆ ಏನೆಂದರೆ, ಇದು ನಿರಂತರ ಅಧ್ಯಯನ- ಓದನ್ನು ಬೇಡುವ ಕಾರ್ಯ. ಅದನ್ನು ಮಾಡುತ್ತಾ ಎಪಿಸೋಡ್ ಶೂಟ್- ಎಡಿಟ್ ಸುಲಭದ ಕಾರ್ಯವಲ್ಲ. ಕಷ್ಟವಿತ್ತಾ ಕೇಳಿದರೆ ಖಂಡಿತ ಹೌದು. ಆದರೆ ಬಹಳ ಬಹಳ ಇಷ್ಟ ಪಟ್ಟು ಮಾಡಿದ್ದೇನೆ.
ಇನ್ನಾದ್ರೂ ಅಮ್ಮನಡೈರಿ subscribe ಮಾಡದವರು ಹೋಗಿ ಅದೊಂದು ಬಟನ್ ಒತ್ತಿ ಬನ್ನಿ. ಶ್ರಮಕ್ಕೊಂಚೂರು ಪ್ರೋತ್ಸಾಹ ಸಿಕ್ಕಂತಾಗುತ್ತದೆ.
Subscribe button ಒತ್ತಲು charge ಆಗುವುದಿಲ್ಲ ಆಯ್ತಾ? ಫುಲ್ ಫ್ರೀ..
#ಅಮ್ಮನಡೈರಿ #50episode #ammanadiary #parentingkannada
2 years ago | [YT] | 2
View 0 replies
Ammana Diary - ಅಮ್ಮನ ಡೈರಿ
ರಕ್ಷಾಬಂಧನದ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲೊಂದು ಬರಹ..
******************************
ಭ್ರಾತೃ ಬಂಧದ ಸರಿಗಮಪ..
-ಶ್ರೀಕಲಾ ಡಿ.ಎಸ್
ಮೂವತ್ತು ವರುಷಗಳ ಹಿಂದಿನ ನನ್ನ ಬಾಲ್ಯದಲ್ಲಿ ಪ್ರತಿ ವರ್ಷ ಅಣ್ಣನಿಗೆ ತಪ್ಪದೆ ರಾಖಿ ಕಟ್ಟುತ್ತಿದೆ. ಆಗ ಸಿಗುತ್ತಿದ್ದದ್ದು ಎರಡು ಬಗೆಯದ್ದು. ಒಂದು ಮಾಮೂಲಿ ಚಿಕ್ಕ ಕುಚ್ಚಿರುವ ಕೇಸರಿ ಬಣ್ಣದ್ದು. ಇನ್ನೊಂದು ಉಣ್ಣೆಯ ಚಿಕ್ಕ ಉಂಡೆಯಂತಿರುತ್ತಿದ್ದ ಕೆಂಪು, ಹಳದಿ, ಕೇಸರಿ ಎಲ್ಲವೂ ಮಿಶ್ರವಾಗಿರುತ್ತಿದ್ದ, ಮುಟ್ಟಲು ಮೆತ್ತಗಿರುತ್ತಿದ್ದ ರಾಖಿ. ಇದನ್ನು ಕಟ್ಟುವುದಕ್ಕಿಂತ ನನ್ನ ಸಂಗ್ರಹದ ಪೆಟ್ಟಿಗೆಯೊಳಗೆ ಇಟ್ಟುಕೊಳ್ಳುವುದೇ ಜಾಸ್ತಿ ಖುಷಿಯಾಗಿತ್ತು. ರಕ್ಷಾಬಂಧನದ ದಿನ ಅಣ್ಣನನ್ನು ಬಿಟ್ಟರೆ ಬೇರಾರಿಗೂ ನಾನು ರಾಖಿ ಕಟ್ಟುತ್ತಿರಲಿಲ್ಲ. ನಮ್ಮ ಅಕ್ಕಪಕ್ಕದ ಮನೆಯ ಹುಡುಗಿಯರು ಬಂದು ನನ್ನಣ್ಣನಿಗೆ ಕಟ್ಟುವುದಾಗಲೀ, ನಾನು ಅವರ ಮನೆಯ ಸೋದರರಿಗೆ ಕಟ್ಟಿದ್ದಾಗಲೀ ಇಲ್ಲವೇ ಇಲ್ಲ. ಕಟ್ಟಬಾರದು ಅಂತಲ್ಲ, ಹಾಗೊಂದು ವಾಡಿಕೆಯೇ ಇರಲಿಲ್ಲ, ಅಷ್ಟೆ.
ಆದರೆ ಕಾಲೇಜಿಗೆ ಹೋಗುತ್ತಿದ್ದಂತೆಯೇ ರಕ್ಷಾಬಂಧನದ ಸ್ವರೂಪ ಬಹಳವೇ ಬದಲಾಗಿತ್ತು. ಸ್ನೇಹಿತೆಯರು ಪರ್ಸ್ ತುಂಬಾ ರಾಖಿ ಇಟ್ಟುಕೊಂಡಿರುತ್ತಿದ್ದರು. ಮಾತನಾಡಿಸುತ್ತಿದ್ದ ಎಲ್ಲಾ ಹುಡುಗರ ಕೈಗೂ ರಾಖಿ. ತಮ್ಮಿಷ್ಟದ ಹುಡುಗಿಯ ಎದುರು ಬರದೆ ಇರಲು ಆ ದಿನ ಹುಡುಗರು ಸಾಹಸ ಪಡುವುದು ಸರ್ವೇಸಾಮಾನ್ಯ ದೃಶ್ಯ! ಎಲ್ಲಾದರೂ ಅಪ್ಪಿತಪ್ಪಿ ಸಿಕ್ಕಿ ರಾಖಿ ಕಟ್ಟಿಬಿಟ್ಟರೆ ಎಂಬ ಆತಂಕಕ್ಕೆ ಒಳಗಾಗಿರುತ್ತಿದ್ದ ಕೆಲವರಂತೂ ಆ ದಿನ ಕಾಲೇಜಿನ ಉಸಾಬರಿಗೇ ಬರುತ್ತಿರಲಿಲ್ಲ!
ಈಗಿನ ರಕ್ಷಾಬಂಧನದ ಸಂಭ್ರಮವಂತೂ ಇನ್ನಷ್ಟು ಏರಿದೆ. ಸಾಲುಗಟ್ಟಿರುವ ಅಂಗಡಿಗಳಲ್ಲಿ ಬಣ್ಣ ಬೇಗಡೆಯ ಸಾವಿರಾರು ನಮೂನೆಯ ರಾಖಿಗಳು. ಎಲ್ಲರ ಕೈಗಳಲ್ಲೂ ಕಡಿಮೆ ಅಂದರೂ ಐದಾರು ರಾಖಿ ಇರುವಂತಾಗಿದೆ. ಜೊತೆಗೆ ಸೋದರಿಗೆ ಕೊಡಬೇಕಾದ ಉಡುಗೊರೆಯ ಲೆಕ್ಕಾಚಾರವೂ ವಾರಗಳ ಹಿಂದಿಂದ ಶುರುವಾಗಿರುತ್ತದೆ. ವ್ಯತ್ಯಾಸವೆಂದರೆ ಆಗೆಲ್ಲಾ ಮನೆತುಂಬಾ ಸೋದರ-ಸೋದರಿಯರೇ ಇದ್ದರೂ ಹಬ್ಬವೇ ಇರಲಿಲ್ಲ. ಈಗ ಒಬ್ಬೊಬ್ಬರೇ ಮಕ್ಕಳಿರುವ ಮನೆಗಳಲ್ಲಿ ಒಡಹುಟ್ಟಿದ ಅಣ್ಣ-ತಮ್ಮಂದಿರು ಇಲ್ಲ. ಆದರೂ ತಮ್ಮ ಸುತ್ತಲಿನ ಸಂಬಂಧಗಳಲ್ಲಿ ಈ ಬಾಂಧ್ಯವವನ್ನು ಕಂಡುಕೊಳ್ಳುತ್ತಾರೆ. ನೆರೆಹೊರೆಯವರು, ಸಂಬಂಧಿಕರು, ಸ್ನೇಹಿತರು, ಸೋಶಿಯಲ್ ಮೀಡಿಯಾ ಗೆಳೆಯರೆಲ್ಲರೂ ಅಣ್ಣ-ತಂಗಿಯರಾಗಿದ್ದಾರೆ. ಒಂದೇ ಫ್ಲೋರಿನಲ್ಲಿದ್ದರೂ ಇಷ್ಟು ದಿನ ಮಾತನಾಡಿಸದೆ ಇದ್ದ ಹುಡುಗನಿಗೆ ರಕ್ಷಾಬಂಧನದ ದಿನ ರಾಖಿ ಕಟ್ಟಿ “ಭಯ್ಯಾ..” ಎಂದು ಬಾಯ್ತುಂಬ ಕರೆಯುವ ಹೆಣ್ಣು ಮಕ್ಕಳನ್ನು ನಮ್ಮ ಅಪಾರ್ಟ್ಮೆಂಟಿನಲ್ಲೇ ನೋಡಿದ್ದೇನೆ.
ನನ್ನ ಸ್ನೇಹಿತೆಗೆ ಒಬ್ಬಳೇ ಮಗಳು. ಸಂಬಂಧಿಕರ ಮನೆಯ ಹುಡುಗನೇ ಪರಮಾಪ್ತ ಅಣ್ಣ. ಚಿಕ್ಕಂದಿನಿಂದ ಜೊತೆಗೇ ಆಡಿ, ಓಡಿ ಬೆಳೆದವರು. ತಮ್ಮೆಲ್ಲಾ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾರೆ. ರಕ್ಷಾಬಂಧನ ಬಂದರಂತೂ ಅದೆಷ್ಟು ಮುತುವರ್ಜಿಯಿಂದ ರಾಖಿಯನ್ನು ಖರೀದಿಸಿ, ಅವನಿಗೆ ಕಟ್ಟಲು ಉತ್ಸುಕಳಾಗಿರುತ್ತಾಳೆ. ಈಗ ಕಾಲೇಜು ಓದುತ್ತಿರುವ ಅವನಿಗೂ ಒಡಹುಟ್ಟಲ್ಲದ ತಂಗಿಯ ಮೇಲೆ ಅಷ್ಟೇ ಮಮಕಾರ. ಇಂತಹ ನಿಷ್ಕಳಂಕ ಸೋದರ ಪ್ರೀತಿ ನಮ್ಮ ಸಂಸ್ಕೃತಿಯಲ್ಲಿ, ಪ್ರತಿ ಮನೆಯಲ್ಲೂ ಕಾಣಸಿಗುತ್ತದೆ.
ಒಡಹುಟ್ಟನ್ನು ಮೀರಿ ಹುಟ್ಟುವ ಇಂತಹ ಬಾಂಧವ್ಯ ಗಟ್ಟಿಯಾದ ಸಂಗತಿ ನಮ್ಮ ಮನೆಯಲ್ಲೇ ಇದೆ. ನನ್ನಣ್ಣನ ರಾಖಿ ತಂಗಿ ಮತ್ತು ಅವರ ಕುಟುಂಬ ನಮ್ಮಿಡೀ ಕುಟುಂಬಕ್ಕೆ ಅದೆಷ್ಟು ಹತ್ತಿರವಾದರೆಂದರೆ ರಕ್ತಸಂಬಂಧಿಕರು ಎಂಬಷ್ಟೇ! ಮಂಗಳೂರಿನಲ್ಲಿದ್ದ ನಮ್ಮ ಮನೆಯ ಎಲ್ಲಾ ಶುಭ ಕಾರ್ಯಕ್ರಮಕ್ಕೆ ಬೆಂಗಳೂರಿಂದ ಎರಡು ದಿನ ಮೊದಲೇ ಬಂದು ಕಾರ್ಯಕ್ರಮ ಮುಗಿದ ನಂತರ ಎಲ್ಲವನ್ನೂ ಸೇರಿಸಿಕೊಟ್ಟು ವಾಪಾಸಾಗುತ್ತಿದ್ದರು. ರಾಖಿ ತಂಗಿ ಈಗ ಅಮೆರಿಕದಲ್ಲಿ ನೆಲೆಸಿದ್ದರೂ ಅವಳ ಅಪ್ಪ-ಅಮ್ಮನ ಜೊತೆಗಿನ ಬಾಂಧವ್ಯ ಇನ್ನೂ ನಮ್ಮ ಜೊತೆಗೆ ಹಾಗೇ ಇದೆ. ಇಂತಹ ಬಂಧ ಏರ್ಪಡಲು ಕಾರಣವೇ ರಕ್ಷಾಬಂಧನ..!
ದಾರಕ್ಕೆ ಸಂಸ್ಕೃತದಲ್ಲಿ `ಸೂತ್ರಂ’ ಎನ್ನುತ್ತಾರೆ. ಇದರ ಮೂಲ ಕ್ರಿಯಾಪದ ‘ಸೀವ್ಯತಿ’. ಅಂದರೆ, ಒಂದಕ್ಕೊಂದು ಸಂಪರ್ಕಿಸಲ್ಪಟ್ಟದ್ದು ಅಥವಾ ಜೊತೆಗೆ ಹಿಡಿದಿಡುವಂಥದ್ದು. ಎರಡು ವಸ್ತುಗಳ ಕಟ್ಟುವಿಕೆಯಲ್ಲಿ ದಾರವನ್ನು ಬಳಸುವುದು ಗೊತ್ತಿರುವಂಥದ್ದೇ. ಇಲ್ಲಿ ಅದೇನೇ ಕಷ್ಟ ಬಂದರೂ ಸಂಬಂಧಗಳ ನಡುವಿನ ಬಾಂಧವ್ಯ ಭದ್ರವಾಗಿರಬೇಕು ಎಂಬ ಸೂಚನೆ ಇದೆ. ರಕ್ತ ಸಂಬಂಧವೇ ಇಲ್ಲದ ಅದೆಷ್ಟೋ ಅಣ್ಣ-ತಂಗಿಯರು ಬಂಧ ಗಟ್ಟಿಯಾಗಿ ಉಳಿಯಲು ಒಂದು ಕಾರಣ ರಾಖಿಯಾಗಿದ್ದರೆ, ಮತ್ತೊಂದು ಅವರಿಗೇ ಗೊತ್ತಿಲ್ಲದೆ ಏರ್ಪಟ್ಟ ಪವಿತ್ರತೆಯ ಬಂಧವೂ ಹೌದು.
ಪವಿತ್ರತೆಯ ಬಂಧ…
ಸ್ವಭಾವತಃ ಮನುಷ್ಯ ಸ್ವತಂತ್ರವಾಗಿ ಇರುವುದನ್ನು ಬಯಸಿದರೂ ರಕ್ಷಾ‘ಬಂಧನ’ವನ್ನು ಇಷ್ಟಪಡುತ್ತಾನೆ. ಯಾಕೆ? ಪ್ರತಿ ಜೀವಕ್ಕೂ ಪ್ರೀತಿಯ ಸೆಲೆಯ ಜೊತೆಗೆ ನಿನ್ನೊಂದಿಗೆ ನಾನಿದ್ದೇನೆ ಎಂಬ ಸುರಕ್ಷತೆಯನ್ನು ಕೊಡುವ, ಭರವಸೆಯ ದನಿಯಾಗುವ ಜೀವದ ಅವಶ್ಯಕತೆಯೂ ಇದೆ. ಏನಿಲ್ಲವೆಂದರೂ ಆ ದಿನ ನಡೆದ ಘಟನೆಗಳನ್ನು ವಟವಟಿಸಿ ಹೇಳಿಕೊಳ್ಳಲು ಯಾರಾದರೂ ಬೇಕು ಎನ್ನಿಸುತ್ತದೆ. ಅದು ಅಪ್ಪ-ಅಮ್ಮ, ಅಣ್ಣ-ತಂಗಿ, ಪತಿ-ಪತ್ನಿ, ಮಕ್ಕಳು... ಯಾರೇ ಆಗಿರಬಹುದು. ರಕ್ಷಾಬಂಧನದಲ್ಲಿ ಯಾರು ರಕ್ಷೆಯನ್ನು ಕಟ್ಟುತ್ತಾರೋ ಅವರೀರ್ವರ ನಡುವೆ ಪವಿತ್ರತೆಯ ಬಂಧ ಏರ್ಪಡುತ್ತದೆ. ಸಮಸ್ಯೆಗಳೆದ್ದಾಗ ಎಷ್ಟೇ ಕಷ್ಟವಾದರೂ ಪರಿಹರಿಸುವ ಶಕ್ತಿಶಾಲಿ ಬಂಧ, ಕುಸಿದು-ಸೋತು ಕೂತಾಗ ಬಡಿದೆಬ್ಬಿಸುವ ಆಪ್ತವಾದ ಬಂಧ, ಸಂಕಟಗಳಿಗೆ ಸಮಾಧಾನ ಹೇಳುವ ಸಹನಾಮಯಿ ಬಂಧ, ನೋವಾದಾಗ ಖುಷಿಯ ದಾರಿಯನ್ನು ತೋರುವ ಸಂತಸದ ಬಂಧ, ದೌರ್ಬಲ್ಯಗಳನ್ನು ಬುದ್ಧಿ ಹೇಳಿ ತಿದ್ದುವ ಶಿಸ್ತಿನ ಬಂಧ, ಎಗ್ಗಿಲ್ಲದೆ ನುಗ್ಗುವ ಮನಸ್ಸಿಗೆ ಕಡಿವಾಣ ಹಾಕುವ ನಿಗ್ರಹ ಬಂಧ, ವಿರಸ-ಜಗಳಗಳಾದರೂ ಸೈರಿಸಿಕೊಳ್ಳುವ ಹೊಂದಾಣಿಕೆಯ ಬಂಧ, ಸಂಸ್ಕಾರವನ್ನು ರೂಪಿಸುವ ಪರಮ ಸುಸಂಸ್ಕೃತ ಬಂಧ. ಹೀಗಾಗಿ ರಾಖಿ ಎಂದರೆ ಫಳಫಳಿಸುವ ದಾರ ಕಟ್ಟುವುದಷ್ಟೇ ಅಲ್ಲ. ಒಬ್ಬರಿಗೊಬ್ಬರು ರಕ್ಷೆಯನ್ನು ಕೊಡುವುದೂ ಹೌದು. ಒಬ್ಬರಿಗೊಬ್ಬರು ಯಾಕೆ? ಸೋದರಿಯನ್ನು ಸೋದರ ರಕ್ಷಣೆ ಮಾಡಬೇಕಾದ್ದಲ್ಲವೇ? ಹೌದು, ಸಹಜವಾಗಿ ವಾಡಿಕೆಯಲ್ಲಿ ಇದೇ ನಿಜವಾಗಿದೆ. ಆದರೆ ಸೋದರಿಯ ಜವಾಬ್ದಾರಿಯೂ ಇರುತ್ತದಲ್ಲ.. ಅದು ಹೇಗೆ ಎಂಬುದನ್ನು ತಿಳಿಯಲು ನಮ್ಮ ಪುರಾಣಗಳಲ್ಲಿರುವ ಕೆಲವು ಕಥೆಗಳನ್ನು ನೋಡಬೇಕಾಗುತ್ತದೆ.
ಈ ಕಥೆಗಳು ಏನು ಹೇಳುತ್ತಿವೆ?
ರಕ್ಷಾಬಂಧನದ ಹಿನ್ನೆಲೆಯನ್ನು ತಿಳಿಸುವ ಹಲವಾರು ಕಥೆಗಳಿವೆ. ಶಿಶುಪಾಲನನ್ನು ಸಂಹರಿಸುವಾಗ ಸುದರ್ಶನ ಚಕ್ರದ ಕಾರಣದಿಂದ ಕೃಷ್ಣನ ತೋರು ಬೆರಳಿಗೆ ಗಾಯವಾಗಿ ರಕ್ತ ಸೋರುತ್ತದೆ. ಆಗ ಹಿಂದೆಮುಂದೆ ನೋಡದೆ ದ್ರೌಪದಿ ತನ್ನ ಸೀರೆಯ ಸೆರಗಂಚನ್ನೇ ಹರಿದು ಅವನಿಗೆ ಕಟ್ಟುತ್ತಾಳೆ. ಅವಳ ಕಾಳಜಿಯನ್ನು ಕಂಡು ಶ್ರೀಕೃಷ್ಣ ಸದಾ ಕಾಲ ಅವಳನ್ನು ರಕ್ಷಿಸುವ ವಚನ ನೀಡುತ್ತಾನೆ. ಆಮೇಲೆ ಕುರುಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವ ವೇಳೆಯಲ್ಲಿ ಕೃಷ್ಣ ಅಕ್ಷಯಾಂಬರವನ್ನು ಕರುಣಿಸಿ ಕಾಪಾಡುವುದು ಅತ್ಯಂತ ಪ್ರಸಿದ್ಧ ಕಥೆ. ಇಲ್ಲಿ ದ್ರೌಪದಿ ತನ್ನ ಅಣ್ಣನಿಗೂ ರಕ್ಷೆಯನ್ನು ಕೊಟ್ಟಿದ್ದಳು. ಆ ಕ್ರಿಯೆ ಎಷ್ಟು ಚಿಕ್ಕದು-ದೊಡ್ಡದು ಎನ್ನುವುದಕ್ಕಿಂತ ದ್ರೌಪದಿಯ ಭಾವ ಪ್ರಧಾನವಾಗುತ್ತದೆ.
ವೃತ್ರಾಸುರನ ವಿರುದ್ಧ ಇಂದ್ರ ಸೆಣಸಲು ಹೋಗುವಾಗ ಇಂದ್ರಾಣಿಯಾದ ಶಚೀದೇವಿ ರಕ್ಷೆಯನ್ನು ಕಟ್ಟುತ್ತಾಳೆ. ಅದರ ಪ್ರಭಾವದಿಂದಾಗಿ ಇಂದ್ರನಿಗೆ ಜಯ ಸಾಧ್ಯವಾಗುತ್ತದೆ ಎಂಬ ಸಂಗತಿ ಭವಿಷ್ಯ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಯುದ್ಧಕ್ಕೆ ಹೊರಟು ನಿಂತ ರಾಜರಿಗೆ ರಕ್ಷಾಬಂಧನ ಕಟ್ಟುವ ಸಂಗತಿಯೂ ತಿಳಿದದ್ದೇ. ಲಕ್ಷ್ಮೀದೇವಿಯು ಬಲಿ ಚಕ್ರವರ್ತಿಗೆ ರಕ್ಷಾಬಂಧನ ಕಟ್ಟುವುದಕ್ಕೂ ಮಹತ್ತರವಾದ ಉದ್ದೇಶವಿತ್ತು. ಹಾಗಿದ್ದರೆ ಸುಮ್ಮನೆ ಅವರೊಂದು ಬಣ್ಣಬಣ್ಣದ, ಸುಂದರವಾದ ದಾರವನ್ನು ಕಟ್ಟಿ ಕಳುಹಿಸುತ್ತಿದ್ದರೇ? ಅಂತಹ ಮಹತ್ವದ, ಜೀವವನ್ನೇ ಪಣಕ್ಕಿಡಬೇಕಾದ ಸಂದರ್ಭದಲ್ಲಿ ಕಟ್ಟುವ ರಕ್ಷೆ ನಿಜವಾಗಿಯೂ ರಕ್ಷೆ ಕೊಡುತ್ತಿದ್ದುದು ಕಟ್ಟಿಸಿಕೊಂಡವರಿಗೆ. ಹಾಗಾಗಲು ರಕ್ಷೆಯು ಕಟ್ಟುವ ಮೊದಲು ಪೂಜಿಸಲ್ಪಟ್ಟಿರಬೇಕು. ಕೆಲವು ಶ್ಲೋಕ/ಮಂತ್ರವನ್ನು ಕ್ರಮಬದ್ಧವಾಗಿ ಇಂತಿಷ್ಟು ಬಾರಿ ಹೇಳಿರಬೇಕು ಎಂಬುದನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಕಟ್ಟುವವರ ಹೊಣೆ ಎಷ್ಟು ದೊಡ್ಡದಿದೆ ಎಂಬುದು ಅರಿವಾಗುತ್ತದೆ.
ಈ ಕಥೆಗಳನ್ನು ಕೇಳುತ್ತಾ ಒಂದಂತೂ ಸ್ಪಷ್ಟವಾಗುತ್ತದೆ. ಇದು ಕೇವಲ ಸೋದರಿಯು ತನ್ನ ಸೋದರನಿಗೆ ಕಟ್ಟುವುದಷ್ಟಕ್ಕೇ ಸೀಮಿತವಾಗಿದ್ದಲ್ಲ. ಹಾಗೆಯೇ, ಒಂದು ದಿನದ ಅಂದ-ಚಂದಕ್ಕೆ ಮೀಸಲಾದದ್ದೂ ಅಲ್ಲ. ಹಾಗೆಂದು ಚಂದದ ರಾಖಿ ಖರೀದಿಸಬಾರದು ಎಂದಲ್ಲ. ಆಚರಿಸಬೇಕು ಎಂಬ ಉದ್ದೇಶಕ್ಕಷ್ಟೇ ಸೀಮಿತವಾಗಿ ಯಾಂತ್ರಿಕವಾದ ಕ್ರಿಯೆಯಾಗಿ ಎಲ್ಲರಿಗೂ ಕಟ್ಟಿಬಿಡುತ್ತೇನೆ ಎನ್ನುವುದಕ್ಕಿಂತ ಆಳಕ್ಕಿಳಿದು ಅರ್ಥ ತಿಳಿಯುವುದೇ ಮುಖ್ಯ.
ನನ್ನಪ್ಪನಿಗೆ ಎಂಟು ಮಂದಿ ಸೋದರ-ಸೋದರಿಯರು, ಅಮ್ಮನಿಗೆ ಆರು. ಆಗಿನ ತಲೆಮಾರಿನಲ್ಲಿ ನಾಲ್ಕೈದು ಮಕ್ಕಳಂತೂ ಮನೆಯಲ್ಲಿ ಖಾಯಂ. ಹಾಗಿದ್ದರೂ ರಾಖಿ ಕಟ್ಟಿಸಿಕೊಳ್ಳುವ ರಕ್ಷಾಬಂಧನವೇ ಅವರಿಗೆ ಗೊತ್ತಿರಲಿಲ್ಲ. ಸದ್ಯ ಅವರೆಲ್ಲರ ವಯಸ್ಸು ಅರವತ್ತು ದಾಟಿದ್ದರೂ ಈಗಲೂ ಎಂತಹ ಆಪ್ತತೆ! ಇಷ್ಟು ವರ್ಷಗಳಲ್ಲಿ ಕಷ್ಟ ಸುಖಗಳಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ ನಿಂತ ಪರಿಯನ್ನು ನೋಡಿದ್ದೇನೆ. ನಾನು ಚಿಕ್ಕವಳಿದ್ದಾಗಂತೂ ರಾಖಿ ಕಟ್ಟಿದ್ದಕ್ಕಾಗಿ ಅಣ್ಣನೇನೂ ಉಡುಗೊರೆ ಕೊಡುತ್ತಿರಲಿಲ್ಲ. ಹಾಗೊಂದಿದೆ ಎನ್ನುವುದೂ ಗೊತ್ತಿರಲಿಲ್ಲ!
ಎಲ್ಲಾ ರಕ್ಷೆಗಳ, ಉಡುಗೊರೆಗಳ ಮೀರಿ ಅಲ್ಲಿದ್ದದ್ದು ಅಪೇಕ್ಷೆಗಳ ಹಂಗಿಲ್ಲದ ಶುದ್ಧ ಭ್ರಾತೃ ಪ್ರೇಮ. ಸಂಬಂಧ ಗಟ್ಟಿಯಾಗಿ ಕೊನೆಯ ತನಕ ಉಳಿಯುವುದೂ ಹಾಗೇ. ಅದಕ್ಕೆ ಒಡಹುಟ್ಟೇ ಆಗಬೇಕೆಂದೇನೂ ಇಲ್ಲ!
2 years ago | [YT] | 3
View 2 replies
Ammana Diary - ಅಮ್ಮನ ಡೈರಿ
ಆಗಸ್ಟ್ 2ರ ರಾತ್ರಿ. 2017. ಬೆಂಗಳೂರಿಂದ ತಾಳಗುಪ್ಪಕ್ಕೆ ರೈಲಿನಲ್ಲಿ ನಾನು- ಅತ್ತೆ ಹೊರಟಿದ್ದೆವು. ನನಗೆ delivery date ಇನ್ನೂ 25 ದಿನಗಳಷ್ಟು ಮುಂದಿತ್ತು. ಈ ಎರಡನೇ ಗರ್ಭಿಣಿಯಲ್ಲಿ ದಿನ ತುಂಬುವುದೇ ಗೊತ್ತಾಗುವುದಿಲ್ಲ. ಮೊದಲ ಮಗುವಿನ ಜವಾಬ್ದಾರಿ, ಮನೆಗೆಲಸ, ಉದ್ಯೋಗ ಎಲ್ಲವನ್ನೂ ಮಾಡುತ್ತಾ ನೋಡ್ತಾ ನೋಡ್ತಾ ಒಂದು ಜೀವ ಎರಡಾಗುವ ಕಾಲ ಸನ್ನಿಹಿತವಾಗಿರುತ್ತದೆ.
ಮೊದಲದ್ದರಲ್ಲಿ ಹಾಗಲ್ಲ. 'ಗರ್ಭಿಣಿಯಂತೆ..' ಎಂದಾಗುತ್ತಿದ್ದಂತೆ ಕೈಗೊಬ್ರು, ಕಾಲಿಗೊಬ್ರು ಜನ ನಂಗಂತೂ.. ಒಂದೇ ಒಂದು ದಿನವೂ ಒಬ್ಬಳೇ ಇರುವಂತೆಯೇ ಇಲ್ಲ ಅಂತಾಗಿ ಅಮ್ಮ, ಅಜ್ಜಿ, ಅತ್ತೆ.. ಹೀಗೆ ಸಾಲುಗಟ್ಟಿ ನನ್ನ ಜೊತೆಗಿರುತ್ತಿದ್ದರು. ಅದು ಅವರ ಕಾಳಜಿ, ಪ್ರೀತಿ.. ಆಗ ನನಗೆ 24 ವಯಸ್ಸು. ಹೀಗಾಗಿ ಚಿಕ್ಕವಳು, ಅನುಭವವೂ ಸಾಲದು ಎಂದಿತ್ತು. ಅದು ನಿಜವೂ ಹೌದಾಗಿತ್ತು!
ನಂಗಂತೂ ಬಾಣಂತನ ಎಂದರೆ ಹೇಗಿರುತ್ತದೆ ಎಂಬ ಬಗ್ಗೆ ನಯಾಪೈಸೆಯಷ್ಟೂ ಅಂದಾಜಿರಲಿಲ್ಲ. ಅಷ್ಟು ಪೆದ್ದಿ! ಗರ್ಭಿಣಿಯಲ್ಲಿ ನನ್ನ ಲೆಕ್ಕಾಚಾರ ಹೇಗಿತ್ತಂದ್ರೆ.. ಮಗು ಹಡೆಯೋದು, ಮೂರು ತಿಂಗಳು ಹಾಲು ಕುಡಿಸೋದು, ಆಮೇಲೆ ಶಿಶುವನ್ನು ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟು ಉದ್ಯೋಗಕ್ಕೆ ಹೋಗೋದು! ಶಿಶು ಕೈಗೆ ಬಂದಾಗಲೇ ವಾಸ್ತವದ ಅರಿವಾಗಿದ್ದು.
ಬಾಣಂತನದ ವಿವರಗಳನ್ನು ಒಳಗೊಂಡ 'ಬಾಳಂತಿ ಪುರಾಣ'ದಂತಹ ಪುಸ್ತಕವನ್ನು ಬರೆಯುವ ಯೋಚನೆ ಕನಸಿನಲ್ಲೂ, ಅದರಾಚೆಗೂ, ಅದರದರಾಚೆಗೂ ಕಿಂಚಿತ್ತೂ ಸುಳಿಯುವಂಥದ್ದೂ ಆಗಿರಲಿಲ್ಲ ಆ ಕಾಲಕ್ಕೆ!
ಆದರೆ ಎರಡನೆಯದಕ್ಕಾಗುವಾಗ ನಾ ಹೇಳಿಬಿಟ್ಟಿದ್ದೆ. ನಾನು ತುಂಬಾ ಆರಾಮಾಗಿದ್ದೇನೆ. ಗರ್ಭಿಣಿಯ ಜೊತೆಗಿರೋದಕ್ಕೆ ಅಂತ ಊರಿನ ಕೆಲಸ ಬಿಟ್ಟು ಬರೋದು ಬೇಡ. ನನಗೇನೂ ಕಷ್ಟ ಆಗ್ತಿಲ್ಲ ಅಂತ. ಅಷ್ಟೊತ್ತಿಗೆ ನಮಗೂ ಸ್ವಲ್ಪ ಅನುಭವ ಜೊತೆಯಾಗಿರುತ್ತದಲ್ಲ. ದೊಡ್ಡ ಮಗನಿಗೆ ಶಾಲೆ ಹೆಚ್ಚಿಗೆ ತಪ್ಪದೆ ಇರಲಿ ಅನ್ನುವ ಕಾರಣಕ್ಕಾಗಿ ಎಂಟು ತಿಂಗಳು ತುಂಬಿದ ಮೇಲೇ ಊರಿಗೆ ಹೊರಟಿದ್ವಾ..
ಮಧ್ಯರಾತ್ರಿ ಕಳೆದು ಬೆಳಗಿನ ಮೂರಾಗುತ್ತಿದ್ದಂತೆ ನನಗೆ ಮೆಲ್ಲಗೆ ಹೊಟ್ಟೆ ನೋವು ಶುರು ಆಯ್ತು. ಹೌದು, ರೈಲಿನೊಳಗೇ! ಏನೋ ಮಾಮೂಲಿ ಇರುತ್ತೆ ಅಂದುಕೊಂಡ್ರೆ ಇಲ್ಲಾ.. ಇದು ಹೆಚ್ಚಾಗ್ತಾನೇ ಇದೆ. 5 ಗಂಟೆ ಹೊತ್ತಿಗಂತೂ ಇದು 100% delivery pain ಅಂತ ಗೊತ್ತಾಗಿಬಿಟ್ಟಿತ್ತು. ಸಾಗರ ಬರಲು ಇನ್ನೂ ಒಂದೂವರೆ ತಾಸು! ಇವತ್ತೇ delivery ಆದ್ರೆ ಇನ್ನು 4 ತಿಂಗಳು ಕಾಯಿಕಡುಬು ತಿನ್ನೋ ಹಾಗಿಲ್ವಲ್ಲಪ್ಪಾ ಅನ್ನೋದೇ ನನ್ನ ದೊಡ್ಡ ಚಿಂತೆಯಾಗಿತ್ತು ಆ ಹೊತ್ತಿಗೆ! ಯಾಕಂದ್ರೆ ಈ ಎಂಟು ತಿಂಗಳಲ್ಲಿ ಕಾಯಿಕಡುಬೊಂದು ತಿನ್ನಲು ಆಗಿರಲಿಲ್ಲ. ಹೇಗೂ ಊರಿಗೆ ಹೋದ ಮೇಲೆ deliveryಗೆ ಸುಮಾರು ದಿನ ಇರುತ್ತಲ್ಲ.. ನಿಂಗೆ ಕಾಯಿಕಡುಬು ಮಾಡಿಕೊಡ್ತೀನಿ ಅಂದಿದ್ರು ಅತ್ತೆ.
ನಿಮಿಷಗಳು ಗಂಟೆಗಳ ಲೆಕ್ಕದಲ್ಲಿ ಓಡೋದು ಎನ್ನುವುದರ ಅನುಭವ ಆಗಿದ್ದು ಆ ಒಂದೂವರೆ ಗಂಟೆಯಲ್ಲಿ ನೋಡಿ. ಅತ್ತೆ ಸಾಗರದ ಡಾಕ್ಟರ್ ಗೆ ಫೋನಾಯಿಸಿದರು. ರೈಲು ಇಳಿಯುತ್ತಿದ್ದಂತೆ ಕಾರ್ ಬಂದು ನಿಲ್ಲುವ ವ್ಯವಸ್ಥೆಯಾಯಿತು
ನನ್ನತ್ತೆ ಭಾರೀ ಗಟ್ಟಿಗಿತ್ತಿ. ಏನಾದ್ರೂ ನೋವು ಹೆಚ್ಚಾದ್ರೆ ಮಧ್ಯ ದಾರಿಯಲ್ಲೇ ಯಾವುದಾದ್ರೂ ಊರಿನ ಬಳಿ ಇಳಿದು delivery ಮಾಡಿಸೋಕೂ ಸೈ ಎಂಬಂತಿದ್ರು.
ಆದರೆ ಹಾಗೇನೂ ಆಗದೆ ಸಾಗರ ತಲುಪಿದ್ವಿ. ಹೆಜ್ಜೆ ಕಿತ್ತಿಡಲೂ ಕಷ್ಟವಾಗುತ್ತಿದ್ದ ಅಸಾಧ್ಯ ಹೊಟ್ಟೆ ನೋವು ಒಂದು ಬಿಟ್ಟರೆ 'ನೀರು ಒಡೆಯೋದು' ಇತ್ಯಾದಿ ಏನೂ ಆಗಿರಲಿಲ್ಲ. ನೇರವಾಗಿ ರೈಲ್ವೇ ನಿಲ್ದಾಣದಿಂದ ಆಸ್ಪತ್ರೆಗೆ ಹೋದ್ವಿ. ಮುಂದಿನ ಎರಡು ಗಂಟೆಯಲ್ಲಿ ಈ ನನ್ನ ಮಗರಾಯ ಹುಟ್ಟಿದ್ದ.. ಕಾಯಿಕಡುಬನ್ನು ಆಮೇಲೆ ನಾಲ್ಕು ತಿಂಗಳು ಬಿಟ್ಟು ತಿಂದೆ!
ಇವತ್ತಿಗೆ ಇದೆಲ್ಲಾ ಆಗಿ ಆರು ವರ್ಷ..
#ಸಂಪನ್ನರಾಮ #ಸಂಪನ್ನ #Sampanna_birthday
2 years ago | [YT] | 4
View 6 replies
Ammana Diary - ಅಮ್ಮನ ಡೈರಿ
Our son Sarthak V.Hegde singing devotional song in a program. Do watch.. Click the link..
https://youtu.be/yp_faSQGnaQ
@SarthakVHegde
2 years ago (edited) | [YT] | 0
View 0 replies
Ammana Diary - ಅಮ್ಮನ ಡೈರಿ
ಪರೀಕ್ಷೆಯ ಸಂದರ್ಭ ವಿಜಯ ಕರ್ನಾಟಕದಲ್ಲೊಂದು ಲೇಖನ...
*******
ಓದಿಗೆ ಮಕ್ಕಳನ್ನು ಅಣಿಗೊಳಿಸುವ ಪರಿ..
‘ಪರೀಕ್ಷೆಯ ಓದು’ ಜ್ಞಾನಾರ್ಜನೆಯ ಹಾದಿಯಲ್ಲಿನ ಒಂದು ಮಹತ್ವದ ಸಂಗತಿ. ಆದರೆ ಕೇವಲ ಓದುತ್ತಾ ಕುಳಿತಾಗಷ್ಟೇ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವೇ? ಹೇಗೆ ಗಿಡ ನೆಟ್ಟ ಮೇಲೆ ಹೂಬಿಡಲು ಸರಿಯಾದ ಮಣ್ಣು, ಗೊಬ್ಬರ, ಬೆಳಕು ಒಟ್ಟಾರೆ ವಾತಾವರಣದ ಸತ್ವಗಳ ಅವಶ್ಯಕತೆ ಇದೆಯೋ ಅದೇ ರೀತಿ ಓದುವಿಕೆ ಎನ್ನುವುದು ಜ್ಞಾನ ಸಂಪಾದನೆಯ ಬುಡಕ್ಕೆ ಹಾಕಿದ ಒಂದು ಸತ್ವ ಅಷ್ಟೆ. ಒಟ್ಟಂದದಲ್ಲಿ ಹೂವು ಅರಳಲು ಉಳಿದ ಹಲವಾರು ಸತ್ವಗಳನ್ನು ಪೂರೈಕೆ ಮಾಡುವ ದೊಡ್ಡ ಜವಾಬ್ದಾರಿ ಹೆತ್ತವರು ಮತ್ತು ಶಿಕ್ಷಕರ ಮೇಲಿದೆ. ಶಿಕ್ಷಕರು ಅದನ್ನು ಹೇಗೂ ಮಾಡುತ್ತಿದ್ದಾರೆ. ಇನ್ನು ಹೆತ್ತವರಾಗಿ ಸತ್ವವನ್ನು ಕೊಡಲು ನಾವೇನು ಮಾಡಬಹುದು ಎಂಬುದೇ ಪ್ರಶ್ನೆ.
ಶಾಲಾ ಕಲಿಕೆಯ ಗುರಿ ಅಂಕ ಸಾಧನೆಯೊಂದೇ ಅಲ್ಲ ಎಂಬ ದೃಷ್ಟಿಕೋನವನ್ನಿಟ್ಟುಕೊಂಡು ಮಕ್ಕಳು ಚೆನ್ನಾಗಿ ಓದಲು ಏನು ಮಾಡಬಹುದು ಎಂಬ ಕೆಳಗಿನ ಸಾಧ್ಯತೆಗಳನ್ನು ಗಮನಿಸಬಹುದು.
ಧನಾತ್ಮಕ ಮಾತಿನ ಸತ್ವ
-------------------------------
ಕೆಲ ಹೆತ್ತವರು ಪರೀಕ್ಷೆ ಹತ್ತಿರ ಬರುತ್ತಿದ್ದಂತೆ, ‘ಪರೀಕ್ಷೆಯಲ್ಲಿ ಫೇಲ್ ಆದ್ರೆ?’ ‘ನನ್ ಮಗಂಗೆ ಓದೋಕೇ ಇಷ್ಟಾನೇ ಇಲ್ಲ’ ಎನ್ನುತ್ತಾ ಸದಾ ಕಾಲ ನೆಗೆಟಿವ್ ಯೋಚನೆ ಮಾಡುವುದು, ಮಕ್ಕಳಿಗೂ ಅದನ್ನೇ ಹೇಳುವುದು, ಮನೆಗೆ ಬಂದವರ ಬಳಿಯೂ ಅದನ್ನೇ ಆಡುವುದು ಮಾಡುತ್ತಾರೆ. ಆಗ ಮಕ್ಕಳು ‘ತಾನು ಫೇಲ್ ಆದ್ರೆ?’ ಎಂಬ ಸಂದೇಹ-ಭಯದಲ್ಲೇ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಖಂಡಿತ ಮಾಡಬಾರದ ಸಂಗತಿ ಇದು. ಹೆತ್ತವರಾದ ನಾವು ಧನಾತ್ಮಕ ಚಿಂತನೆಯ ಸತ್ವವನ್ನು ಮಕ್ಕಳಿಗೆ ಎರೆಯಬೇಕು. ಮಾತಿನಿಂದಲೇ ಕಲಿಕೆಗೆ ಪ್ರೋತ್ಸಾಹಕರ ವಾತಾವರಣವನ್ನು ಸೃಷ್ಟಿಸಬಹುದು. ಮಕ್ಕಳ ವಿಶೇಷತೆಯನ್ನು ಗುರುತಿಸಿ ಹೇಳುವ ಕಾರ್ಯವನ್ನು ಕೇವಲ ಪರೀಕ್ಷಾ ಸಂದರ್ಭ ಮಾತ್ರವಲ್ಲ ಎಲ್ಲಾ ಕಾಲದಲ್ಲೂ ಮಾಡಬೇಕು.
ಸ್ವೀಕಾರ ಮನೋಭಾವವೆಂಬ ಸತ್ವ
--------------------------------------------
ಪ್ರತಿ ಮಗುವಿಗೂ ಅದರದ್ದೇ ಆದ ಕಲಿಕಾ ಸಾಮರ್ಥ್ಯ ಇದೆ ಎನ್ನುವುದನ್ನು ಮರೆಯಬಾರದು. ಐವತ್ತು ಅಂಕ ತೆಗೆಯುವ ಶಕ್ತಿ ಇರುವ ಮಕ್ಕಳಿಂದ ತೊಂಭತ್ತು ಅಂಕ ಯಾಕೆ ನಿರೀಕ್ಷಿಸಬೇಕು? ತನ್ನ ಬುದ್ಧಿಮತ್ತೆಗೆ ತಕ್ಕನಾಗಿ ಮಗು ಅಂಕ ಗಳಿಸುತ್ತದೆ. ಆ ಅಂಕ ಏನೇ ಆಗಿದ್ದರೂ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡರೆ ಒತ್ತಡ ಹೇರುವ ಅವಶ್ಯಕತೆ ಇರುವುದಿಲ್ಲ. ಒತ್ತಡ ಇಲ್ಲದಾದಾಗ ಕಲಿಕಾಭ್ಯಾಸ ಸರಾಗ.
ಸಮಯ ಪಾಲನೆಯೆಂಬ ಸತ್ವ
--------------------------------------
ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಯಾವ ಪರೀಕ್ಷೆಯೂ ಒತ್ತಡವಾಗದು. ಇದು ಪರೀಕ್ಷೆ ಇನ್ನೇನು ಶುರುವಾಗುತ್ತಿದೆ ಎನ್ನುವಾಗ ಆರಂಭಿಸಬೇಕಾದ ಸಮಯಪಾಲನೆ ಅಲ್ಲ. ನಿತ್ಯ ಅಂದರೆ ಬೇಸಿಗೆ ರಜೆಯಲ್ಲೂ ಇರಬೇಕಾದ ಸಮಯ ಪಾಲನೆ. ಬೆಳಿಗ್ಗೆ ಬೇಗ ಏಳುವುದರಿಂದ ತೊಡಗಿ ರಾತ್ರಿ ಮಲಗುವ ತನಕ ನಿತ್ಯದ ದಿನಚರಿಯನ್ನು ಶಿಸ್ತುಬದ್ಧವಾಗಿ ಇರಿಸಿಕೊಂಡರೆ ಜೀವನವೆಂಬ ಪರೀಕ್ಷೆಗೆ ಸದಾ ಸಿದ್ಧರಿದ್ದಂತೆ!
ಚೆನ್ನಾಗಿ ಓದಲು ಇನ್ನಷ್ಟು ಸತ್ವಗಳು
------------------------------------------
-ಪೌಷ್ಟಿಕ ಆಹಾರ ಸೇವನೆ ಮತ್ತು ಒಳ್ಳೆಯ ನಿದ್ರೆ ಇವೆರಡೂ ಮಕ್ಕಳಿಗೆ ಅತಿಮುಖ್ಯ. ಇವೆರಡರಿಂದ ಏಕಾಗ್ರತೆ, ಗ್ರಹಿಕೆ, ಸ್ಮರಣ ಶಕ್ತಿಯೂ ಬಲಗೊಳ್ಳುತ್ತದೆ.
-ಯೋಗ, ಪ್ರಾಣಾಯಾಮ, ಧ್ಯಾನದ ಅಭ್ಯಾಸವನ್ನು ಮಕ್ಕಳಿಗೆ ಕಲಿಸಿ, ನಿತ್ಯ ಮಾಡಲು ಪ್ರೋತ್ಸಾಹ.
-ಪಠ್ಯದ ಓದಿನ ಜೊತೆಗೆ ಇನ್ನಿತರ ಪುಸ್ತಕಗಳನ್ನು ಓದಲು ಉತ್ತೇಜನ ನೀಡಿದಾಗ ಸಾಮಾನ್ಯ ಜ್ಞಾನ, ಭಾಷೆ ಬೆಳೆಯುವ ಜೊತೆಗೆ ಲೋಕಾನುಭವ ಹೆಚ್ಚುತ್ತದೆ.
-ಕೇವಲ ಉರುಹೊಡೆದು ಓದಿದಾಗ ಅಂಕ ಸಿಕ್ಕೀತು. ಆದರೆ ವಿಷಯಜ್ಞಾನ ಸಿದ್ಧಿಸುವುದಿಲ್ಲ. ಓದಿನ ಉದ್ದೇಶ ವಿಷಯವನ್ನು ಚೆನ್ನಾಗಿ ಅರಿಯುವುದೇ ಆಗಿರಬೇಕು.
-ಲಲಿತ ಕಲೆ, ಕ್ರೀಡೆ ಅಥವಾ ಯಾವುದೇ ಪಠ್ಯೇತರ ಚಟುವಟಿಕೆಯೊಂದು ಮಕ್ಕಳಿಗೆ ಬೇಕೇ ಬೇಕು.
-ಪರೀಕ್ಷೆ ಅಂದ ಕೂಡಲೇ ಆಟ ಆಡಲು ಹೋಗುವುದೇ ಬೇಡ ಎನ್ನುವಂತಹ ಕಠಿಣ ಶಿಸ್ತು ಬೇಕಾಗಿಲ್ಲ.
-ಮಕ್ಕಳ ಮುಂದೆ ದೊಡ್ಡವರು ಜಗಳ ಮಾಡುವುದು, ಖುದ್ದು ಮಕ್ಕಳ ಜೊತೆಗೇ ಚಿಕ್ಕ ಚಿಕ್ಕ ವಿಚಾರಕ್ಕೆ ವಾದ ಮಾಡುವುದು-ಬೈಯ್ಯುವುದು-ಹೊಡೆಯುವುದಂತೂ ಪರೀಕ್ಷೆ ಸಂದರ್ಭದಲ್ಲಿ ಆಗಲೇಬಾರದು.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನಲ್ಲ- “ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ.” ಜ್ಞಾನಕ್ಕಿಂತ ಮಿಗಿಲಾದದ್ದು ಇನ್ನೊಂದಿಲ್ಲ ಎನ್ನುವುದು ಇದರರ್ಥ. ಬೇರೆಯವರ ಜೊತೆ ಅಂಕ ಗಳಿಕೆಯ ಸ್ಪರ್ಧೆಗೆ ಬೀಳುವುದು ಬೇಡ. ನನ್ನ ಜೊತೆಗೇ ನಾನು ಸ್ಪರ್ಧೆಗಿಳಿದು ಗುಣಶ್ರೇಷ್ಠತೆ ಸಾಧಿಸುವ ಕಡೆಗೆ ಪ್ರಯತ್ನ ನಡೆಯಬೇಕು. ನಾನು ಜ್ಞಾನ ಪಡೆಯಲು ಶಾಲೆಗೆ ಹೋಗುತ್ತಿದ್ದೇನೆಯೇ ಹೊರತು ಯಾರಿಗೋ ಏನೋ ಸಾಧಿಸಿ ತೋರಿಸುವುದಕ್ಕಲ್ಲ ಎನ್ನುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸೋಣ. ಹೆತ್ತವರಾಗಿ ಮೊದಲು ನಾವದನ್ನು ರೂಢಿಸಿಕೊಳ್ಳೋಣ. ಅತಿಯಾದ ಅಂಕ ನಿರೀಕ್ಷೆಯ ಬದಲಿಗೆ ಜ್ಞಾನಕ್ಕಾಗಿ ಓದೋಣ.
#ಕಲಾಬರಹ
#kalawrites
#ಅಮ್ಮನಡೈರಿ
#stressfree_exam
3 years ago | [YT] | 9
View 2 replies
Load more