Welcome to Jithesh Kumar's Channel!
Immerse yourself in the rich heritage of Tulunadu as i explore its vibrant culture, traditional Yakshagana performances, mystical Kola rituals, and thrilling Kambala races. Alongside these cultural treasures, join me on travel vlogs that uncover hidden gems and captivating stories. Subscribe to Jithesh Kumar for an authentic journey through the heart of Tulunadu. Don't forget to like, comment, and hit the bell icon to stay connected with my latest videos!

Follow mel on WhatsApp: whatsapp.com/channel/0029Va5S0ygHLHQQ0RF3dB3M


Jithesh Kumar

ಲೈಕು ಎಂಬ ಸೈಕು..!

ನಮ್ಮ ಪೋಸ್ಟ್ ಗಳಿಗೆ ಲೈಕ್ ಯಾಕೆ ಬರಲ್ಲ ಅನ್ನೋದು ಒಂದು ಪ್ರಶ್ನೆ.
ಇದನ್ನೇ ತುಸು ಉಲ್ಟಾ ಮಾಡಿ ಹೇಳೋದಾದ್ರೆ..ನಾವು ಬೇರೆಯವರ ಪೋಸ್ಟ್ ಗಳಿಗೆ ಎಷ್ಟು ಲೈಕ್ ಅಥವಾ ಕಮೆಂಟ್ ಮಾಡ್ತೀವಿ ಅನ್ನೋದೂ ಇಲ್ಲಿ ಮುಖ್ಯ.
ನಾವು ಯಾರಿಗೂ ಲೈಕ್ ಮಾಡದೆ, ಸೆಲೆಬ್ರಿಟಿಗಳ ತರಹ ಫೋಸು ಕೊಟ್ರೆ ಇಲ್ಲಿ ಯಾರೂ ಮೂಸಲ್ಲ. ಎಲ್ರಿಗೂ ಅವರದ್ದೇ ಆದ ಸ್ವಾಭಿಮಾನ ಇರುತ್ತೆ. ಇದು ಸಾಮಾಜಿಕ ಜಾಲತಾಣ. ಇಲ್ಲಿ ನಾವು ಮಾತ್ರ ಅಭಿಪ್ರಾಯ ಹಾಕೋದು ಅಲ್ಲ..ಮಿಕ್ಕವರೂ ಹಾಕ್ತಾರೆ..
ಕೆಲವರು ಯಾವುದೋ ಪೋಸ್ಟ್ ಶೇರ್ ಮಾಡ್ತಾರೆ, ತಮ್ಮ pics ಹಾಕೋತಾರೆ, ರಾಜಕೀಯ ನಿಲುವು ಹಾಕ್ತಾರೆ, ಕೆಲವರು ಬರೇ meme share ಮಾಡ್ತಾರೆ, ಮತ್ತೆ ಕೆಲವರು ಬರವಣಿಗೆ ಹಾಕ್ತಾರೆ.
ಈ ಬರವಣಿಗೆಗಾರರಲ್ಲಿ ಕೆಲವರು ತಮ್ಮದನ್ನು ಬೇರೆಯವರು ಲೈಕ್ ಮಾಡ್ಬೇಕು ಅಂತ ಆ ಬರವಣಿಗೆ ಜೊತೆ ಹೆಣ್ಣಿನ ಅಂಗ ತೋರಿಸೋ pic ಹಾಕ್ತಾರೆ..post attention ಗೋಸ್ಕರ.
ಈ ಲೈಕ್ ಮಾಡುವವರು ಕೂಡಾ ತರಹೇವಾರಿ ಇರ್ತಾರೆ..ಕೆಲವರು ಪೋಸ್ಟ್ relate ಮಾಡಿ ಲೈಕ್ ಮಾಡ್ತಾರೆ, ಮತ್ತೆ ಕೆಲವರು post ಇಷ್ಟ ಆದ್ರೂ ಅದನ್ನು ಹಾಕಿದವರು ಇಷ್ಟ ಇರಲ್ಲ ಅನ್ನೋ ಕಾರಣಕ್ಕಗಿ ಲೈಕ್ ಕೊಡಲ್ಲ. ಕೆಲವರು ಪೋಸ್ಟ್ ಇಷ್ಟ ಇಲ್ಲದಿದ್ದರೂ ಹಾಕಿದ ಆ ವ್ಯಕ್ತಿ ಮೇಲೆ ಇಷ್ಟ ಇರುತ್ತೆ ಹಾಗಾಗಿ ಪೋಸ್ಟ್ ಪೂರ್ತಿ ನೋಡದೆ ಲೈಕ್ ಒತ್ತಿ ಬಿಡ್ತಾರೆ.
ಹೆಣ್ಮಕ್ಕಳಿಗೆ ಲೈಕ್ಗಳು ಸಾಮಾನ್ಯವಾಗಿ ಗಂಡು ಮಕ್ಕಳಿಂದ ಬರುತ್ತೆ... ಆದರೆ ಗಂಡು ಮಕ್ಕಳು ಹಾಕೋ ಪೋಸ್ಟ್ ಗೆ ಲೈಕ್ ಬರೋದು ಬಹಳ ಕಡಿಮೆ. ಇಲ್ಲೂ ಹೆಣ್ಮಕ್ಕಳದ್ದೇ ಮೇಲುಗೈ. ಕೆಲ ಹೆಣ್ಮಕ್ಕಳು ಈ ಫ಼ಾಲೋವರ್ ಮತ್ತು ಲೈಕ್ ಗೋಸ್ಕರ ಹುಡುಗರ ಫ಼್ರೆಂಡ್ ರಿಕ್ವೆಸ್ಟ್ accept ಮಾಡ್ಕೊಳ್ಳೋದು. ಈ ಹುಡುಗರು ಪಾಪ ಕಣ್ರೀ..ಅವಳು Friend request accept ಮಾಡಿದ್ಳು ಅಂತ ಲಲಲಾ ಲಲಾ ಅಂತ ಆ ಹುಡುಗಿಯ ಎಲ್ಲಾ ಫೋಟೋ..ಪೋಸ್ಟ್ಗಳಿಗೆ ಲೈಕ್ ಒತ್ತಿದ್ದೇ ಒತ್ತಿದ್ದು..ಪಾಪ ಅವನಿಗೇನು ಗೊತ್ತು ಅವನ ಸ್ಥಾನದಲ್ಲಿ ನೂರಾರು ಬಡಪಾಯಿ ಹುಡುಗರಿದ್ದಾರೆ ಅಂತ! ಆದ್ರೆ ಆ ಕಡೆಯಿಂದ ಲೈಕ್ ಬಿಡಿ..ಆ ಹುಡುಗಿ ಇವನನ್ನು ಮೂಸಿಯೂ ನೋಡಿರಲ್ಲ!
ಈ ಲೈಕ್ ಬೇಕು ಅನ್ನೋರಲ್ಲಿ ಬಹುಪಾಲು ಹುಡುಗಿಯರೇ..ಅವರು ಹಾಕಿದ ಫೋಟೋಗಳಿಗೆ ಲೈಕ್ ಬಂದಿಲ್ಲ ಅಂದ್ರೆ ಮಾನಸಿಕ ತರ ಆಡ್ತಾರೆ..ಲೈಕ್ ಮಾಡಿ ಅಂತ ಬಹಿರಂಗವಾಗಿ ಕೇಳ್ಕೋತಾರೆ! ಈ ಲೈಕ್ ಗೋಸ್ಕರ ತಾವೆಲ್ಲೇ ಹೋದ್ರು ಅದನ್ನು feeling blessed, awesome ಅಂತೆಲ್ಲಾ ಹಾಕಿ ಜಗಜ್ಜಾಹೀರು ಮಾಡಿಬಿಡ್ತಾರೆ. ಮೂವಿ ನೋಡೋಕೆ ಹೋದ್ರೆ ಅಲ್ಲೇ ಲಚಕ್ ಅಂತ ಫೋಟೋ ತೆಗೆದು Watching movie ಅಂತ post ಮಾಡಿ ಆಗಿರುತ್ತೆ! Single screen theatre ಆಗಲ್ಲ! PVR, Inox ಇದೇ ಬೇಕು..ಸಿನೆಮಾ ಬಗ್ಗೆ ವಿಮರ್ಶೆ ಒಂದು ಲೈನೂ ಇರಲ್ಲ ಬಡ್ಡೇತಾವುದು..
ಇನ್ನು ಎಲ್ಲಿಯಾದ್ರೂ ತಿರುಗಾಡೋಕೆ ಹೋದ್ರೆ ಅಲ್ಲಿಗೆ ಕಥೆ ಮುಗೀತು! ಎದ್ದಿದ್ದು..ಕೂತಿದ್ದು..ಮಲಗಿದ್ದು..ತಿಂದಿದ್ದು.‌ಹೇತಿದ್ದು..ಎಲ್ಲಾ ರಪ್ ರಪ್ ಅಂತ Status, story ಗೆ ಹಾಕಿ ಆಗಿರುತ್ತೆ.. ಅದೂ ಒಂದಾ ಎರಡಾ..20-30 photo ಗಳು! ಹಾಕಿ ಬಿಟ್ಟು ಬಿಡ್ತಾರಾ? ಆವಾಗಾವಾಗ ಓಪನ್ ಮಾಡಿ ಯಾರೆಲ್ಲಾ ನೋಡಿದ್ದಾರೆ..ಯಾರು ಯಾವ reaction ಕೊಟ್ಟಿದ್ದಾರೆ ಅನ್ನೋದು ಬೇಕಿರುತ್ತೆ! ಯಾರಾದ್ರೂ nice pic ಅಂತ ಹಾಕಿದ್ರೆ ಖುಷಿಯೋ ಖುಶಿ! ಅದಕ್ಕೆ Thank you ❤ ಅನ್ನೋ reply!

ಇದೊಂಥರಾ ಹುಚ್ಚರ ಸಂತೆ! ಇನ್ನು Instagram, Snapchat ಕಥೆ ಕೇಳೋದೇ ಬೇಡ..ಅಲ್ಲಿ Followers ಅನ್ನೋ ದುಂಬಾಲು. ನಂದಿಷ್ಟು..ನಿಂದೆಷ್ಟು? ಇದೇ.. ಕೆಲ ಹುಡುಗಿಯರು ಯಾರಂತ ಗೊತ್ತಿರಲ್ಲ..ಅಚಾನಕ್ ಆಗಿ ಬಂದು follow ಮಾಡ್ತಾರೆ..ಅವರು ಫ಼ಾಲೋ ಮಾಡಿದ್ರು ಅಂತ ನೀವು ಫ಼ಾಲೋ ಮಾಡ್ತೀರಿ..ಅಷ್ಟೇ..ಆಮೇಲೆ ಅವರು ನಿಮ್ಮನ್ನು unfollow ಮಾಡಿ ಆಗಿರುತ್ತೆ. ನಿಮ್ಮ ಬಾಯಿಗೆ ಲಡ್ಡು ಬಿದ್ದಿದ್ದಷ್ಟೇ.. ಅಗಿಯುವ ಅಂತೆನಿಸುವಾಗ ಆ ಲಡ್ಡು ಅಲ್ಲಿ ಇರೋದೇ ಇಲ್ಲ! ಇದೂ ಹೆಣ್ಮಕ್ಕಳ ಮಂಗ ಮಾಡೋ ಪ್ರಹಸನ! ಇನ್ನು YouTube Vlog ಕಥೆ ಯಪ್ಪಾ.. "ಹೆಲೋ ಗಯ್ಸ್..ಅಂತ ತಾವು ಎಲ್ಲೆಲ್ಲಿಗೆ ಹೋಗಿದ್ದು..ಏನೇನು ಮಾಡಿದ್ದು ಅವೆಲ್ಲಾ ಹೇಳಿ ಬಿಡ್ತಾರೆ! ಆ ಬಿಗ್ ಬಾಸ್ ಕಾರ್ಯಕ್ರಮ ಒಂದು ಮನೆಯೊಳಗೆ ಇದ್ರೆ ಇಲ್ಲಿ vlog ಹೆಸರಲ್ಲಿ ತಮ್ಮದೇ ಬಿಗ್ ಬಾಸ್ ಕಾರ್ಯಕ್ರಮ ಜನರಿಗೆ ನೀಡ್ತಾ ಇರ್ತಾರೆ! Views ಬರಬೇಕು ಅಂತ ಚೆಲ್ಲು ಚೆಲ್ಲಾಗಿ ಮಾತಾಡೋದು..ತಮ್ಮ ಬಡತನ ಹೇಳಿಕೊಳ್ಳೋದು..ಹುಷಾರಿಲ್ಲ ಅಂತ ಅನುಕಂಪ ಗಿಟ್ಟಿಸೋದು..ಒಂದಾ ಎರಡಾ.. ಈ ಮಂಗನಾಟ!! ಜನ ಇದನ್ನೆಲ್ಲಾ ಬೈಕೋತಾ..ಎಲ್ಲವನ್ನೂ ನೋಡ್ತಾರೆ..ಅವರಿಗೇನು ಹುಚ್ಚಾ ಅಂತ ಮಾತಾಡ್ಕೋತಾರೆ..ಅಲ್ಲಿಗೆ Vlog ಗೆ views ಬಂದಿರುತ್ತೆ..ಇವರಿಗೆ ಖುಷಿ ಆಗಿರುತ್ತೆ..ಜನರಿಗೆ ಇದೇ ಬೇಕು ಅಂತ ಮತ್ತೊಂದು Vlog ರೆಡಿ ಆಗಿರುತ್ತೆ!! ದಯವಿಟ್ಟು Subscribe ಮಾಡಿ..ಬೆಲ್ ಐಕಾನ್ ಒತ್ತಿ ಅಂತ ದುಂಬಾಲು ಬಿದ್ದಾಗಿರುತ್ತೆ.

ಮುಂಚೆ ಎಲ್ಲಾ ಫೋಟೋ ತೆಗೆದರೆ ಅದು ನಮ್ಮ ನೆನಪಿಗಾಗಿ ಆಲ್ಬಂ ಮಾಡಿ ಇಟ್ಟಿರುತ್ತಿದ್ದೆವು..ಆದರೆ ಇಂದು ನಾವು ಫೋಟೋ ತೆಗೆಯೋದೇ ಇನ್ನೊಬ್ಬರಿಗಾಗಿ..ಅವರ ಲೈಕ್ ಗಾಗಿ.. ಅದೇನೋ ಲೈಕ್ ಬಂದಿಲ್ಲ ಅಂದ್ರೆ..ಅದ್ಯಾಕೆ ಲೈಕ್ ಮಾಡಿಲ್ಲ ಅನ್ನೋ ಚಿಂತೆಗಳು.
ಒಟ್ಟಾರೆಯಾಗಿ ನೋಡೋದಾದ್ರೆ...ನಮಗೆ ಲೈಕ್ ಬೇಕಾದ್ರೆ ನಾವೂ ಲೈಕ್ ಮಾಡಬೇಕು..ಇಲ್ಲಾ ಅಂದ್ರೆ ಯಾರೂ ಮೂಸಲ್ಲ ನೆನಪಿಡಿ.. ಎಲ್ಲರೂ ಸೆಲೆಬ್ರಿಟಿಗಳಾದರೆ ಲೈಕ್ ಮಾಡೋರ್ಯಾರು? ಅಲ್ವಾ..
ಸೋ..ಕೊನೆಗೆ..ಇಷ್ಟುದ್ದ ಬರೆದೆನಲ್ಲ...
ಇದಕ್ಕೊಂದು ಲೈಕ್ ಮಾಡಿ..ಕಮೆಂಟ್ ಹಾಕಿ..ಶೇರ್ ಮಾಡಿ ಆಯ್ತಾ.. ಯಾಕೆ ಅಂದ್ರೆ..ಈ ಲೈಕುಗಳ ಜಗತ್ತಲ್ಲಿ ನಾನೂ ಕೂಡಾ ನಿಮ್ಮ ಹಾಗೆ ಸೈಕು!
-ಜಿತೇಶ್ ಕುಮಾರ್
@highlight

1 week ago | [YT] | 11

Jithesh Kumar

ಹೆಂಡ್ತಿ ಬಿಟ್ಟ ಮೋದಿಜೀ ಪ್ರಧಾನಿ ಆದರು
ಹೆಂಡ್ತಿ ಇಲ್ಲದ ವಾಜಪೇಯಿ ಪ್ರಧಾನಿ ಆದರು
ಹೆಂಡ್ತಿ ಇಲ್ಲದ ಅಬ್ದುಲ್ ಕಲಾಂ ರಾಷ್ಟ್ರಪತಿ ಆದರು
ಹೆಂಡ್ತಿ ಇಲ್ಲದ ಯೋಗಿ ಮುಖ್ಯಮಂತ್ರಿ ಆದರು
ಈವಾಗ ಹೆಂಡ್ತಿ ಬಿಟ್ಟ ವಿಜಯ್ ಮುಖ್ಯಮಂತ್ರಿ ಆಗ್ತಾ ಇದ್ದಾರೆ...
ಯೋಚನೆ ಮಾಡಿ...


ಶ್ರೀ ಶ್ರೀ ಶ್ರೀ ಹೆಂಡ್ತಿಬಿಟ್ಟಾನಂದ

1 month ago | [YT] | 6

Jithesh Kumar

3 months ago | [YT] | 47

Jithesh Kumar

3 months ago | [YT] | 11

Jithesh Kumar

Hi everyone, welcome to my new YouTube Community. Now you can post on my channel too. To get started, tell me in a post what you'd like to see next on my channel.
Visit my Community: youtube.com/@JitheshKumar/community

3 months ago | [YT] | 34

Jithesh Kumar

ದುರ್ಯೋಧನನಿಗೆ ದುಶ್ಯಾಸನ ಬೇಕಿತ್ತು ಹೆಣ್ಣನ್ನು ನಿರ್ವಸ್ತ್ರ ಗೊಳಿಸಲು
ಆದರೆ


ಈಗ ಆ ಕೆಲಸ ಹೆಣ್ಣು ಸ್ವಯಂ ಮಾಡ್ತಾ ಇದ್ದಾಳೆ !


ಅಂದು ಶ್ರೀ ಕೃಷ್ಣ ಬಂದು ಸೀರೆ ಕೊಟ್ಟಿದ್ದ ಮಾನ ಮುಚ್ಚಿಸೋಕೆ
ಇಂದು ಆ ರೀತಿ ಕೊಟ್ರೆ.. ನಿನ್ನ ಮನಸ್ಸು, ಕಣ್ಣು, ಬೆಳೆಸಿದ ರೀತಿ ಸರಿ ಇಲ್ಲ ಅಂತಾರೆ !


-ಶ್ರೀ ಶ್ರೀ ಶ್ರೀ ನಿರ್ವಸ್ತ್ರಾನಂದ

3 months ago | [YT] | 8

Jithesh Kumar

ಸೀತೆಯನ್ನು ಅಪಹರಿಸಿದ ರಾವಣ ಲಂಕೆಗೆ ಒಯ್ದು ಅಶೋಕವನದಲ್ಲಿಟ್ಟ. ಕೊನೆತನಕ ಆಕೆಯ ತಂಟೆಗೆ ಹೋಗಲಿಲ್ಲ. ಯಾಕೆ?
ಏನೋ ಒಂದು ಹುಡುಕುತ್ತಿದ್ದಾಗ ಅದರ ಬಗ್ಗೆ ನನಗೆ ರಾಮಾಯಣದ ಒಂದು ರೆಫರೆನ್ಸ್ ಬೇಕಾಗುತ್ತದೆ ಎಂದು ರಾಮಾಯಣದ ಒಳಗೆ ಹೋದೆ. ಅಲ್ಲಿ ನೋಡಿದರೆ ರಂಭೆಯನ್ನು ರಾವಣ ಬಲಾತ್ಕಾರಿಸಿದ ಒಂದು ಕತೆ ಸಿಕ್ಕಿತು.
ಕತೆ ಹೀಗಿದೆ.
ರಂಭೆ ಒಮ್ಮೆ ಶೃಂಗರಿಸಿಕೊಂಡು ಹೋಗುತ್ತಿದ್ದವಳನ್ನು ರಾವಣ ನೋಡಿದ. ರಂಭೆ ಶ್ರೀಗಂಧ ಹಚ್ಚಿಕೊಂಡಿದ್ದಳು, ತಲೆಗೂದಲನ್ನು ಸುರುಸುರುಳಿಯಾಗಿ ಮಾಡಿಕೊಂಡಿದ್ದಳು, ಬ್ಲೂ ಕಲರ್ ಡ್ರೆಸ್ ತೊಟ್ಟಿದ್ದಳು. ಅವಳ ವೈಯಾರ, ರೂಪರಾಶಿ ನೋಡಿ ರಾವಣನಿಗೆ ಮರುಳಾಯಿತು. ಅವನು ಅವಳ ಕೈಹಿಡಿದು ಏನ್ ಸಖತ್ ಇದ್ದೀಯಾ ನೀನು ಬೇಕು ನನಗೆ ಎಂದ.
ರಂಭೆಗೆ ಭಯವಾಯಿತು. ಅವಳು ರಾವಣನ ಕೈ ಝಾಡಿಸಿಕೊಂಡಳು. ರಾವಣ ಬಿಡಲಿಲ್ಲ. ರಂಭೆ ಹೇಳಿದಳು, “ನೀನು ಹೀಗೆಲ್ಲಾ ಮಾಡಬಾರದು. ನಾನು ನನ್ನ ಪ್ರಿಯಕರ ನಲಕೂಬರನ ಬಳಿಗೆ ಹೋಗುತ್ತಿದ್ದೇನೆ. ಅವನು ನನ್ನನ್ನು ಕಾಯುತ್ತಾ ಇದ್ದಾನೆ. ನಲಕೂಬರನ ಪ್ರೇಯಸಿ ನಾನು ಅಂದ ಮೇಲೆ ನೀನು ನನಗೆ ಮಾವಂದಿರು. ಮಾವಂದಿರಾಗಿ ನೀನು ನನ್ನನ್ನು ಬಯಸುವುದು ಸರಿಯಲ್ಲ”
ರಾವಣ ಬಿಡಲಿಲ್ಲ. 'ನೀನು ಅಪ್ಸರೆ. ಅಪ್ಸರೆಯರಿಗೆ ಮನುಷ್ಯ ಸಂಬಂಧಗಳು ಅನ್ವಯಿಸುವುದಿಲ್ಲ. ನೀನು ಅಪ್ಸರೆಯಾದ್ದರಿಂದ ನಿನಗೆ ಒಬ್ಬನೇ ಗಂಡ ಇರಬೇಕು ಎಂದೂ ಇಲ್ಲ' ಎಂದು ಹೇಳಿ ಆಕೆಯ ವಿರೋಧದ ನಡುವೆಯೂ ಆಕೆಯನ್ನು ಭೋಗಿಸಿದ.
ಆಮೇಲೆ ರಂಭೆ ತನ್ನ ಗೆಳೆಯ ನಲಕೂಬರನ ಬಳಿ ಹೋಗಿ ಹೀಗೀಗಾಯ್ತು ಎಂದು ಅತ್ತಳು. ಕ್ರುದ್ಧನಾದ ನಲಕೂಬರ ತನ್ನ ಚಿಕ್ಕಪ್ಪನಿಗೆ ಶಾಪಕೊಟ್ಟ, 'ಇನ್ಮುಂದೆ ಒಪ್ಪಿಗೆ ಇಲ್ಲದ ತರುಣಿ ಜೊತೆ ಸಮಾಗಮ ನಡೆಸಿದರೆ ರಾವಣನ ತಲೆ ಸಿಡಿದು ಏಳು ಹೋಳಾಗುತ್ತದೆ".
ಇದೇ ಭಯಕ್ಕೆ ರಾವಣ ಸೀತೆಯ ತಂಟೆಗೆ ಹೋಗಲೇ ಇಲ್ಲ.
ವಾಲ್ಮೀಕಿ ಸೀತೆಯನ್ನು ಕಾಪಾಡಿದ ಬಗೆ ಹೀಗೆ...

Gopalakrishna Kuntini

4 months ago | [YT] | 12

Jithesh Kumar

Content creator/ Influencer Unknowನು !!


ಇವತ್ತು “content creator” ಅನ್ನೋ ಪದವನ್ನು ತುಂಬಾ easy-ಆಗಿ use ಮಾಡ್ತಾ ಇದ್ದಾರೆ. Camera ಹಿಡಿದ್ರೆ creator, mobile ಇದ್ದರೆ influencer ಅನ್ನೋ mindset develop ಆಗಿದೆ. ಆದರೆ ಒಂದು ವಿಷಯ clear ಆಗಿರಬೇಕು – content creator ಅಂದ್ರೆ ನೀನು special ಅಲ್ಲ. ಯಾರೂ ನಿನಗೆ ಆ title ಕೊಟ್ಟಿಲ್ಲ, ಯಾರೂ certificate ಕೊಟ್ಟಿಲ್ಲ. Mobile ಇದ್ದು shoot ಮಾಡಿ upload ಮಾಡಿದ ಯಾವ ವ್ಯಕ್ತಿ ಆದರೂ creatorನೇ. ಅದರಿಂದ “ನಾನು ಏನು ಬೇಕಾದರೂ ಹೇಳಬಹುದು, ಏನು ಬೇಕಾದರೂ promote ಮಾಡಬಹುದು” ಅನ್ನೋ freedom ಬರೋದಿಲ್ಲ.
Media industry (TV/Paper) ಇವತ್ತೂ accountability ಹೊಂದಿದೆ ಮತ್ತು trustworthy ಆಗಿಯೇ operate ಆಗ್ತಾ ಇದೆ. Media houses-ಗೆ clear rules, ethics, and responsibility ಇದೆ. ಅವರು publish ಮಾಡೋ ಪ್ರತಿಯೊಂದು news fact-based ಆಗಿರಬೇಕು. Verification, proof, and editorial process ಇವತ್ತೂ follow ಆಗ್ತಾ ಇದೆ. ಒಂದು ವೇಳೆ media house ತಪ್ಪು ಸುದ್ದಿ share ಮಾಡಿದ್ರೆ, government authority ಇದೆ, complaint mechanism ಇದೆ, action ಆಗುತ್ತೆ, clarification ಅಥವಾ apology ಕೂಡ ಕೊಡ್ತಾರೆ. Accountability ಅನ್ನೋದು media system-ನ core.
ಆದ್ರೆ self-claimed content creators-ಗೆ accountability ಇಲ್ಲ. Rules ಇಲ್ಲ. Fear ಇಲ್ಲ. ತಪ್ಪು ಮಾಡಿದ್ರೆ video delete ಮಾಡ್ತಾರೆ, comment off ಮಾಡ್ತಾರೆ, next reel upload ಮಾಡ್ತಾರೆ. Responsibility ಇಲ್ಲದೆ influence exercise ಮಾಡ್ತಾ ಇದ್ದಾರೆ. ಇವತ್ತು ಅನೇಕ creators truth share ಮಾಡೋದಕ್ಕಿಂತ opinions sell ಮಾಡ್ತಾ ಇದ್ದಾರೆ. Video ಕೆಳಗೆ openly “DM for marketing” ಅಂತ ಬರೀತಾರೆ. ಅಂದರೆ pay ಮಾಡಿದ್ರೆ product good, service genuine, claim true. ಇದು content creation ಅಲ್ಲ, ಇದು credibility business. Money influence ಆದ ಮೇಲೆ truth secondary ಆಗ್ತಾ ಇದೆ.
ಒಬ್ಬ creator ಒಂದು statement ಕೊಟ್ಟ್ರೆ, ಸಾವಿರಾರು ಜನ ಅದನ್ನ fact ಅಂತ believe ಮಾಡ್ತಾರೆ. Share ಮಾಡ್ತಾರೆ. Discuss ಮಾಡ್ತಾರೆ. ಆ statement fake ಆಗಿದ್ರೆ ಅದರ impact society ಮೇಲೆ ಬೀಳುತ್ತೆ – fear, hate, wrong decisions. “ಇದು ನನ್ನ opinion” ಅಂತ disclaimer ಹಾಕಿದ್ರೆ responsibility ಹೋಗೋದಿಲ್ಲ. Opinion mass audience ಮುಂದೆ powerful weapon ಆಗಿರುತ್ತೆ. Especially half knowledge ಮತ್ತು emotional presentation ಜೊತೆಗೆ ಬಂದಾಗ.
ಏನು ನಡೀತಾ ಇದೆಯೋ ಅದನ್ನೇ ಯಥಾವತ್ತಾಗಿ ತೋರಿಸಿದ್ರೆ problem ಇಲ್ಲ. Raw footage, ground reality, no manipulation – ಅದು acceptable. ಆದರೆ views, likes, followers ಹಿಂದೆ ಓಡ್ತಾ half truth, exaggerated claims, sponsored opinions spread ಮಾಡೋದು dangerous. ಇವತ್ತು content quality-ಗಿಂತ shock value ಮತ್ತು body exposure ಹೆಚ್ಚು sell ಆಗ್ತಾ ಇದೆ. Views ಬರೋದಿಲ್ಲ ಅಂದ್ರೆ content change, ಇನ್ನೂ ಕಡಿಮೆ ಬಟ್ಟೆ ಅಂದ್ರೆ cheap visuals, vulgar presentation.
Some creators nudity, sexualized content, private body exposure ಅನ್ನು normal content ಆಗಿ push ಮಾಡ್ತಾ ಇದ್ದಾರೆ. ಇದು creativity ಅಲ್ಲ, exploitation. Reality ಏನು ಅಂದ್ರೆ, ಒಬ್ಬ boy honest vlog ಮಾಡಿದ್ರೆ views limited ಆಗುತ್ತೆ. ಅದೇ vlog-ನಲ್ಲಿ girl ಇದ್ದರೆ views sky rocket ಆಗುತ್ತೆ. Content same, effort same, difference audience mentality ಮತ್ತು platform algorithm. Platforms ಇಂತಹ content-ನ್ನು reward ಮಾಡ್ತಿವೆ, promote ಮಾಡ್ತಿವೆ.
ಅದರಿಂದ Instagram ಇವತ್ತು soft version of porn website ತರ ಆಗ್ತಾ ಇದೆ. Public place-ನಲ್ಲಿ Instagram open ಮಾಡೋಕೆ awkward ಆಗ್ತಾ ಇದೆ. Kids ಕೈಯಲ್ಲಿ phone ಇದೆ, wrong visuals easy access ಇದೆ. ಇದು children ಮೇಲೆ serious impact ಬೀರುತ್ತೆ. ಇದು girls problem ಅಲ್ಲ, ಇದು system problem, platform problem, regulation problem.
Freedom of expression ಇದೆ, ಆದರೆ freedom without responsibility chaos create ಮಾಡ್ತದೆ. Government regulation ಬೇಕು – creativity suppress ಮಾಡೋದಕ್ಕೆ ಅಲ್ಲ, accountability bring ಮಾಡೋದಕ್ಕೆ. False news spread ಮಾಡಿದ್ರೆ action ಇರಬೇಕು. False claims promote ಮಾಡಿದ್ರೆ punishment ಇರಬೇಕು. Paid promotion clear disclosure ಆಗಬೇಕು. Age-based content control compulsory ಆಗಬೇಕು.
Content creator ಅಂದ್ರೆ entertainer ಮಾತ್ರ ಅಲ್ಲ, influencer. Influence ಇದೆ ಅಂದ್ರೆ responsibility unavoidable. Camera ಮತ್ತು internet power ಕೊಡ್ತದೆ. Power control ಇಲ್ಲದೆ dangerous ಆಗ್ತದೆ. Views ಮತ್ತು followers important, ಆದರೆ values ಮತ್ತು society safety ಹೆಚ್ಚು important. ಇದು hate ಅಲ್ಲ, ಇದು concern. Creativity grow ಆಗಬೇಕು, ಆದರೆ cheap attention business stop ಆಗಲೇಬೇಕು. Society safe ಆಗಿರಬೇಕು ಅಂದ್ರೆ creators accountable ಆಗಬೇಕು, platforms answerable ಆಗಬೇಕು, rules unavoidable.
-Jithesh Kumar

4 months ago | [YT] | 6

Jithesh Kumar

ಈ ಹೆಣ್ಮಕ್ಕಳ ಉಪಟಳ ಒಂದೆರಡಲ್ಲ...
ಗಂಡುಮಕ್ಕಳು ಬದುಕೋದೇ ಕಷ್ಟ ಆಗಿದೆ ಮಾರ್ರೆ..
ಕೇರಳದಲ್ಲಿ ತನ್ನ Instagram Views ಗೋಸ್ಕರ ಸುಖಾ ಸುಮ್ಮನೆ ಓರ್ವ ಗಂಡಸು ತನ್ನ "ಅಲ್ಲಿ" ಟಚ್ ಮಾಡಿದ ಅಂತ ವಿಡಿಯೋ ಮಾಡಿ ಆತ ಕೊನೆಗೆ ಆತ್ಮ ಹ*ತ್ಯ್ರೆ ಮಾಡಿಕೊಳ್ಳುವಂತೆ ಮಾಡಿದ್ಲು! ಆ ವಿಡಿಯೋ ನೋಡಿದ್ರೆ ಈಕೆನೇ ಬೇಕಂತಲೇ ಟಚ್ ಮಾಡ್ಕೊಂಡಿದ್ದು ಮತ್ತು ನಗ್ತಾ ಇರೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಇವಳ views ತೆವಲಿಗೆ ಆ ಜೀವ ಹೋಯ್ತಲ್ಲ.
ಈ ಹೆಂಗಸರ "ಮಡಿವಂತಿಕೆ" ಇದಕ್ಕೇ ನಿಲ್ಲಲ್ಲ. ರಶ್ ಇರೋವಾಗ ಮೈ ಗೆ ಮೈ ಟಚ್ ಆಗೋದು ಸಾಮಾನ್ಯ. ಹಾಗೇನಾದರೂ ಹುಡುಗ ಅಸಭ್ಯ ಟಚ್ ಮಾಡ್ತಾ ಇದ್ದಾನೆ ಅಂತ ಅನಿಸಿದ್ರೆ ಅಲ್ಲಿಂದ ದೂರ ಹೋಗೋದು ಸಮಂಜಸ. ಅಲ್ಲೂ ಹಾಗೇ ಮುಂದುವರೆದರೆ ವಿಡಿಯೋ ಮಾಡಿ ಆಮೇಲೆ ಅಲ್ಲೇ ಜನರ ಮುಂದೆ ಆತನನ್ನು ಪ್ರಶ್ನಿಸಿ. ಆತ ಅಲ್ಲಗೆಳೆದರೆ ಆ ವಿಡಿಯೋ ತೋರಿಸಿ. ಆಮೇಲೆ ಕಂಪ್ಲೇಂಟ್ ಕೊಡಬಹುದು.
ಕೆಲ ಗಂಡಸರು ಈ ರೀತಿ ತೀಟೆ ತೀರಿಸುವವರು ಇರ್ತಾರೆ. ಅಂದು ಮೋದಿ ಉಡುಪಿಗೆ ಬಂದಾಗ ಆ ರಶ್ ಅಲ್ಲಿ ಮೋದಿ ಹೋದ ಮೇಲೆ ಜನರೆಲ್ಲಾ ವಾಪಸ್ಸು ತೆರಳುತ್ತಿದ್ದಾಗ ನನ್ನ ಮುಂದೆ ಒಬ್ಬ ಹುಡುಗ ಬೇಕಂತಲೇ ಹೆಂಗಸರ ಹಿಂದೆ ಅವರಿಗೆ ಒತ್ತಿಕೊಂಡು ಹೋಗ್ತಾ ಇದ್ದ. ಆ ಹೆಂಗಸರಿಗೆ ಇದರ ಪರಿವೆಯೇ ಇರ್ಲಿಲ್ಲ. ಒಂದೆರಡು ಸಲ ನಾನು ನೋಡಿ ಆಮೇಲೆ ನಾನೇ ಆತನಿಗೆ ಗದರಿಸಿದೆ ಆವಾಗ ಸೈಡ್ ಹೋದ. ಇನ್ನು ಉತ್ಸವ, ಜಾತ್ರೆಗಳಲ್ಲಿ, ಕಡಿಮೆ ದರದ ಸೇಲ್ ಇರೋ ಕಡೆ ಹೆಂಗಸರಿಗೆ ತಮ್ಮ ಮೇಲೆ ಪರಿವೆಯೇ ಇರಲ್ಲ. ನಾವೇ ಹುಡುಗರು ಟಚ್ ಆಗದ ರೀತಿ ನುಸುಳಿಕೊಂಡು ಹೋಗೋದಿದೆ.
ಈ ಹೆಂಗಸರು ಯಾರೋ ಒಬ್ಬ ಹಾಗೆ ಮಾಡಿದಾಕ್ಷಣ ಇಡೀ ಗಂಡಸು ಕುಲಕ್ಕೆ ಬೈತಾರೆ..ಈ ಗಂಡಸರೇ ಇಷ್ಟು ಅಂತ.
ಈ ಕೆಲ ಹೆಂಗಸರೇನು ಕಡಿಮೆ ಇದ್ದಾರಾ? ಯಾರಾದರೂ ಗಂಡು ಸ್ವಲ್ಪ ನೋಡ್ತಾ ಇದ್ದಾನೆ ಅಂತ ಗೊತ್ತಾದ್ರೆ ಸಾಕು ಇವರೂ ಕೂಡಾ ಓರೆ ಕಣ್ಣಲ್ಲಿ " ಕಣ್ ಕಣ್ಣ ಸಲುಗೆ" ಅಂತ ನೋಡೋದು.. ಅಲ್ಲಿ ಆತ ಈ ಹೆಂಗಸು ಸ್ವಲ್ಪ ನೋಡ್ತಾ ಇದೆ ಅಂತ ಗೊತ್ತಾದ್ರೆ ಸಾಕು ಆತ ಇನ್ನೂ ಮುಂದುವರೀತಾನೆ..ಇಲ್ಲಿ ಈ ಹೆಣ್ಣಿಗೆ ಆತ ಬೇಕಾಗಿರಲ್ಲ ಆದರೆ ಆತ ನೋಡೋದು, attention ಸಿಗೋದು ಬೇಕಾಗಿರುತ್ತೆ. ಅದ್ರಲ್ಲಿ ಮಜಾ ತಕೋತಾ ಇರ್ತಾರೆ ಡಬ್ಬಾ ನನ್ ಮಕ್ಳು. ಈ attention seeking ಬೇಕಾ? ನಿಮಗೆ ಆತ ನೋಡೋದು, ಲೈನ್ ಹೊಡೆಯೋದು ಇಷ್ಟ ಇಲ್ಲ ಅಂದಲ್ಲಿ Wrong Signal ಕೊಡೋದು ನಿಲ್ಸಿ ಮೊದಲು. ನಿಮ್ಮ wrong signal ಆತ ಅದನ್ನು Green signal ಅಂದ್ಕೊಂಡು ಇನ್ನೂ ಮುಂದುವರೀತಾನೆ. ಹಾಗಾಗಿ ಅಂತಹ ಸಂಧರ್ಭಗಳಲ್ಲಿ ಅವಕ್ಕೆ ಆಸ್ಪದನೇ ಕೊಡದಿರೋದು ಜಾಣತನ.

ಕೇರಳದಲ್ಲಿ instagram video ಹಾಕಿದ್ದು ಅಲ್ವಾ.. ಇನ್ನು ಕೆಲ ಹೆಂಗಸರಿದ್ದಾರೆ Facebook ವೀರೆಯರು. ಲೈಕ್ ಗೋಸ್ಕರ ತಾವು ತಿಂದಿದ್ದು ಹೇತಿದ್ದು , ಹಾಕಿದ್ದು, ಬಿಚ್ಚಿದ್ದು ಎಲ್ಲಾ ಹಾಕಿ ಅದಕ್ಕೆ , ಫಾಲೋ ಮಾಡಿ ಅಂತ ದುಂಬಾಲು ಬಿದ್ದು.. ತಮ್ಮನ್ನು ತಾವು ಫೇಸ್ಬುಕ್ಕಲ್ಲಿ ಹರಾಜಿಗಿಟ್ಟು ಆಮೇಲೆ ಅಲ್ಲಿ ಯಾರಾದರೂ ಮೆಸೇಜ್ ಮಾಡಿದ್ರೆ ಅದನ್ನು screenshot ಹಾಕಿ ತಾವೇನೋ ದೊಡ್ಡ ಸಾಧನೆ ಮಾಡಿರೊ ತರ ಫೋಸ್ ಕೊಡೋರಿಗೆ ಕಮ್ಮಿ ಏನಿಲ್ಲ. ಮೆಸೇಜ್ ಮಾಡೋರನ್ನು ಅಲ್ಲೇ ಬ್ಲಾಕ್ ಮಾಡಿದ್ರೆ ಆಯ್ತಪ್ಪ. ಅದು ಬಿಟ್ಟು ಅವರ ಮಾನ ಹರಾಜು ಹಾಕೋದು ಅಗತ್ಯ ಇಲ್ಲ ಅಂತ ನನ್ನ ಅಂಬೋಣ. ಇಲ್ದಿದ್ರೆ ಅವರಿಗೆ ಬುದ್ಧಿ ಬರಲ್ಲ ಅಂತ ನಿಮ್ಮ ಅನಿಸಿಕೆ ಇರಬಹುದು ಆದರೆ ಅಂತವುಗಳು ಇನ್ಯಾರಿಗೋ ಟ್ರೈ ಮಾಡ್ತವೆ.. ಅಷ್ಟೇ.
ನಿಮ್ಮ ಪ್ರಕಾರ ಹುಡುಗಿಯರಿಗೆ ಮಾತ್ರ ಮೆಸೇಜ್ ಬರೋದು ಅಂದುಕೊಂಡಿದ್ದೀರಾ? ಹುಡುಗರಿಗೂ ಹುಡುಗಿಯರಿಂದ ಬರುತ್ತೆ! ಮೊದಲು ನಾಲ್ಕೈದು ಉಭಯ ಕುಶಲೋಪರಿ ಮಾತಾಡಿ ಆಮೇಲೆ ಅರ್ಜೆಂಟ್ ಐನೂರು ಹಾಕ್ತೀರಾ, 3000 ಸಾಲ ಕೊಡ್ತೀರಾ..ನೆಕ್ಸ್ಟ್ ವೀಕ್ ಕೊಡ್ತೀನಿ..ಮೊಬೈಲ್ ರಿಚಾರ್ಜ್ ಮಾಡಿಸ್ತೀರಾ? ಮೊಬೈಲ್ ಹಾಳಾಗಿದೆ..ತೆಗೆಸಿಕೊಡ್ತೀರಾ.. ಅಮ್ಮನಿಗೆ ಹುಷಾರಿಲ್ಲ.. ಬಿಲ್ ಕಟ್ಟೋಕೆ ಸ್ವಲ್ಪ ಸಹಾಯ ಮಾಡ್ತೀರಾ ಹೀಗೆ..ಎಷ್ಟೋ ಮೆಸೇಜ್ ಗಳು ಗಂಡುಮಕ್ಕಳ ಮೆಸ್ಸೆಂಜರ್ ಬಾಕ್ಸ್ ಗೆ ಬಂದು ಬೀಳ್ತಾವೆ..ಅದರಲ್ಲಿ ಕೆಲವರು ಪರಿಚಯದವರು..ಮತ್ತೆ ಕೆಲವರು ಯಾರಂತಲೆ ಗೊತ್ತಿರಲ್ಲ! ಆದರೆ ಅದನ್ಯಾರು screenshot ತೆಗೆದು ಹಾಕಿದ್ದು ಕಂಡಿದ್ದೀರಾ? NO ಚಾನ್ಸ್. ಅದೆಷ್ಟೋ ಬ್ಲಾಕ್ ಮೇಲ್ ಗಳು ಕೂಡಾ ಆಗುತ್ತವೆ. ಆದರೂ ಆಮೇಲೆ ಅವುಗಳ ಸಹವಾಸಕ್ಕೆ ಹೋಗದೆ ಒಂದೋ ಬ್ಲಾಕ್ ಮಾಡಿ ಇಲ್ಲಾ ಇಗ್ನೋರ್ ಮಾಡಿರುತ್ತಾರೆ ಗಂಡು ಹೈಕ್ಳು. ಅಷ್ಟೇ..
ಇಲ್ಲಿ ಯಾರೂ ಉತ್ತಮರಿಲ್ಲ ನೆನಪಿಡಿ..ಎಲ್ರೂ ಉಪೇಂದ್ರ ಹೇಳಿದ ಹಾಗೆ ಕಜ್ಜಿ ಕಂಟ್ರಿ ಡ್ಯಾಶ್ ನನ್ ಮಕ್ಳೆ ಇರೋದು. ಅದೆಲ್ಲಾ ಅವರವರ ಯೋಗ್ಯತೆಗೆ ತಕ್ಕಂತೆ ಅಷ್ಟೇ. ನೀ ಸರಿ ಇಲ್ಲ ಅನ್ನೋಕೆ ಮುಂಚೆ ಹಾಗಂತ ಹೇಳ್ತಾ ಇರೋನು ಎಷ್ಟು ಸಾಚಾ ಅನ್ನೋದು ಮತ್ತೊಬ್ಬನಿಗೆ ಮಾತ್ರ ಗೊತ್ತಿರೋದು. ಅದು ಬಿಟ್ಟು ತಮ್ಮನ್ನು ತಾವು ಒಳ್ಳೆಯವರು ಅಂತ ಬಿಂಬಿಸಕ್ಕೋಸ್ಕರ ಇನ್ನೊಬ್ಬರನ್ನು ಹಳಿಯೋದು ಸ್ವಾರ್ಥಿಗಳು.
ನಿಮಗೆ ಆಗಲ್ವಾ..ಅದರಿಂದ ದೂರ ಇರಿ ಸಾಕು. ನಾನು ಹೀಗೆ ಇರೋದು..ಬೇರೆಯವರು ಬದಲಾಗಬೇಕು ಅನ್ನೋದು ಉದ್ಧಟತನ. ನಾವು ಮನೆಯಿಂದ ಹೊರ ಹೋಗುವಾಗ ಮನೆಗೆ ಬೀಗ ಜಡಿದು ಹೋಗ್ತೀವಿ ತಾನೇ? ಯಾಕೆ? ಕಳ್ಳರು ತಮ್ಮ ಮನಸ್ಸು ಬದಲಾಯಿಸಬೇಕು..ನಾವು ಬೀಗ ಹಾಕಲ್ಲ ಅಂತ ಹೇಳಲ್ಲ ಯಾಕೆ? ಹಾಗೇನೇ ಇದು ಕೂಡಾ..

ಯಾವುದನ್ನೇ ಆಗಿರಲಿ..ಪ್ರದರ್ಶನಕ್ಕಿಟ್ಟರೆ ಅದರ ಬಗ್ಗೆ ಜನ ವಿಚಾರಿಸೋದು ವಾಡಿಕೆ. ವಿಚಾರಿಸಬಾರದಾಗಿದ್ದಲ್ಲಿ ಪ್ರದರ್ಶನಕ್ಕಿಡಬೇಡಿ!

Jithesh Kumar

4 months ago | [YT] | 23

Jithesh Kumar

ಇದೆಲ್ಲಾ ಓವರ್ ಆಕ್ಟಿಂಗ್.. ಅದು ದೈವ ಅಲ್ಲ..ದೈವ ನರ್ತಕ..ಕಾಸು ಸರಿಯಾಗಿ ಕೊಟ್ಟಿರ್ತಾರೆ ಅವನಿಗೆ..ಅದ್ಕೆ ರಿಷಬ್ ತೊಡೆ ಮೇಲೆ ಮಲಗ್ತಾ ಇದ್ದಾನೆ...!

ಇದೆಲ್ಲಾ ಯಾರು ಹೇಳ್ತಾ ಇರೋದು ಗೊತ್ತಾ? ಇದೇ ಕಾಂತಾರದ ವಿರುದ್ಧ ತೊಡೆತಟ್ಟಿದ್ದ ಸೋ ಕಾಲ್ಡ್ ದೈವಾರಾಧಕರು ಅಂತ ಕರೆಸಿಕೊಳ್ಳೋ ಹೋರಾಟಗಾರರು! ತಮ್ಮನ್ನು ತಾವು ದೈವಾರಾಧನೆಯ ಸಂರಕ್ಷಕರು ಅಂತ ಕರೆಸಿಕೊಳ್ಳುತ್ತಿರುವ ಇವರು ರಿಷಬ್ ಶೆಟ್ಟಿಯನ್ನು ತೆಗಳೋ ಭರದಲ್ಲಿ ದೈವಾರಾಧನೆಯ ಮೇಲಿನ ನಂಬಿಕೆಯನ್ನೇ ಅಲುಗಾಡಿಸುತ್ತಿರುವುದು ವಿಷಾದನೀಯ.

ಕಾಂತಾರ ಚಾಪ್ಟರ್ ೧ ಜನಮನ್ನಣೆ ಗಳಿಸಿ ವಿಶ್ವದೆಲ್ಲೆಡೆ ಜನರೆಲ್ಲಾ ಹಾಡಿ ಹೊಗಳಿ ಸಿನೆಮಾವನ್ನು ಭಕ್ತಿಯಿಂದ ನೋಡಿ ತುಳುನಾಡಿನ ಈ ವಿಶಿಷ್ಟ ಆಚರಣೆ ಬಗ್ಗೆ ತಿಳಿದುಕೊಳ್ಳಲು , ಅದನ್ನು ನೇರವಾಗಿ ಕಣ್ತುಂಬಿಕೊಳ್ಳಲು ತವಕಿಸುತ್ತಿದ್ದರೆ..ಇಲ್ಲಿನ ಕೆಲ ದೈವವನ್ನೇ ರಕ್ಷಿಸೋ ರಕ್ಷಕರು ಮೊನ್ನೆ ರಿಷಬ್ ಶೆಟ್ಟಿ ಮತ್ತು ಟೀಂ ತಮ್ಮ ಸಿನೆಮಾ ಗೆದ್ದಿದ್ದರ ಸಲುವಾಗಿ ದೈವಕ್ಕೆ ಹರಕೆಯ ಕೋಲ ಕೊಡುವ ಸಂದರ್ಭದಲ್ಲಿ ಪಂಜುರ್ಲಿ ದೈವ ಅಭಯ ನೀಡಿದ್ದನ್ನು, ನಾನಿದ್ದೇನೆ ನಿನ್ನ ಜೊತೆ ಅಂದಿದ್ದನ್ನು ಲೇವಡಿ ಮಾಡುತ್ತಾ , ಇದೆಲ್ಲಾ ದೈವ ಅಲ್ಲ ಮಾಡುತ್ತಿರುವುದು.. ದೈವ ನರ್ತಕ ಮಾಡೋದು, ಆತನಿಗೆ ಕಾಸು ಕೊಟ್ಟಿದ್ದಕ್ಕೆ ಆತ ಓವರ್ ಆಕ್ಟಿಂಗ್ ಮಾಡುತ್ತಿದ್ದಾನೆ ಎಂಬಿತ್ಯಾದಿಯಾಗಿ ಪೋಸ್ಟ್ ಮತ್ತು ಕಮೆಂಟ್ ಗಳು ಎಲ್ಲಾ ಕಡೆ ಹಾಕುತ್ತಿದ್ದಾರೆ.

ದೈವ ಮತ್ತು ದೇವರು ಅನ್ನೋದೇ ನಂಬಿಕೆ ಮೇಲೆ ನಿಂತಿರೋ ವಿಷಯ. ಆ ನಂಬಿಕೆಯಿಂದ ಜನ ಕೈ ಮುಗಿದು ನಮಿಸುತ್ತಾರೆ, ಬೇಡುತ್ತಾರೆ.. ಅಲ್ಲೂ ಕೂಡಾ ಬಂದವರೆಲ್ಲಾ ಬಹು ಶ್ರದ್ಧೆಯಿಂದ ನಂಬಿಕೆಯಿಂದ ದೈವದ ಮುಂದೆ ಭಕ್ತಿ ಭಾವದಿ ಅರ್ಪಿಸಿಕೊಂಡಿದ್ರೆ ಇತ್ತ ಈ ರಕ್ಷಕರು ಅದನ್ನೇ ಸುಳ್ಳು ಅಂತ ನಿರೂಪಿಸಲು ಹೊರಟಿದ್ದು ವಿಷಾದನೀಯ. ಅಲ್ಲಿ ನಡೆದ ಹರಕೆ ಸೇವೆಯಲ್ಲಿ ನಡೆದದ್ದೆಲ್ಲಾ ಸುಳ್ಳು ಅನ್ನೋದಾದ್ರೆ ಸತ್ಯ ಯಾವುದು? ಇವರು ಮಾಡಿಸೋದು ಮಾತ್ರ ಸತ್ಯವೋ? ಇವರ ಭಕ್ತಿ, ನಂಬಿಕೆ ಮಾತ್ರ ನಿಜವೋ?

ಅಲ್ಲಿ ಎಣ್ಣೆ ಬೂಳ್ಯದಲ್ಲಿ ದೈವ ವೀಳ್ಯ ಹಾರಿಸುವಾಗಲೂ ಹರಕೆ ಕೊಟ್ಟವರ ಪರವಾಗಿ (ಮೇಲ್ಮೈ) ಬಂದಿದೆ. ಹಾಗಾದರೆ ಅದೂ ಸುಳ್ಳೇ? ಆ ಕ್ಷೇತ್ರದಲ್ಲಿ ನೆಲೆಸಿಹ ದೈವ ಸುಳ್ಳೇ..ಅದರ ಕಾರಣಿಕ ಸುಳ್ಳೇ?

ಕಾಂತಾರದಿಂದ ದೈವಾರಾಧನೆಗೆ ಒಳ್ಳೆಯದಾಗಿದೆಯೋ ಇಲ್ವೋ ಗೊತ್ತಿಲ್ಲ ಆದರೆ ಈ ಹೋರಾಟಗಾರರಿಂದ ದೈವದ ಮೇಲಿನ ನಂಬಿಕೆಗೆ ಹೊಡೆತ ಬೀಳುತ್ತಿರುವುದಂತೂ ಸತ್ಯ. ರಿಷಬ್ ಗೆ ನಾನಿದ್ದೇನೆ ನಿನ್ನ ಜೊತೆ ಅಂತ ದೈವ ಹೇಳಿದ್ರೆ... ಈ ಹೋರಾಟಗಾರರ ಪ್ರಕಾರ ರಿಷಬ್ ವಿರುದ್ಧ ದೈವ ನುಡಿ ಕೊಟ್ಟಿದೆ ! ಹಾಗಾದರೆ ಜನ ಸಾಮಾನ್ಯರನ್ನು ದ್ವಂದ್ವಕ್ಕೆ ಸಿಲುಕಿಸುತ್ತಿರುವುದು ಯಾರು? ಯಾವುದನ್ನು ಜನ ನಂಬಬೇಕು?

ದೈವಾರಾಧನೆಯಲ್ಲಿ ಇದಮಿತ್ತಂ ಅನ್ನೋ ತರಹ ಇಲ್ಲ. ಪ್ರದೇಶಕ್ಕನುಗುನವಾಗಿ, ಮನೆಗನುಗುಣವಾಗಿ ಆಚರಣೆಯಲ್ಲಿ ವೈವಿಧ್ಯತೆ ಇದೆ. ಅದ್ಯಾವುದೂ ಹೀಗೇ ಅಂತ ದಾಖಲಾಗಿಲ್ಲ..ಹಿರಿಯರು ಮಾಡಿಕೊಂಡು ಬಂದಿದ್ದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಅಷ್ಟೇ.. ಹಳೇದು ಮುಚ್ಚಬೇಡ..ಹೊಸತು ತರಬೇಡ ಅಂತ ಹೇಳಿದರೂ ಇಂದು ಕಾಲಕ್ಕೆ ತಕ್ಕ ಕೋಲ ಎಂಬಂತೆ ಆಚರಣೆಯಲ್ಲಿ ಹೊಸತು ಬಂದಾಗಿದೆ. ಅದು ಸರಿಯೋ ತಪ್ಪೋ... ತಿಳಿದೋ ತಿಳಿಯದೆಯೋ..ಆಚರಿಸಿಕೊಂಡು ಬರುತ್ತಿದ್ದಾರೆ. ಅದು ಅವರ ನಂಬಿಕೆ.. ಹಾಗಂತ ಯಾರೋ ಬಂದು..ನೀ ಮಾಡೋದು ಸರಿ ಇಲ್ಲ ಅಂತ ಹೇಳುವ..ತಾಕಿತು ಮಾಡುವ ಹಕ್ಕು ಕೂಡಾ ಯಾರಿಗೂ ಇಲ್ಲ. ನನ್ನ ಮನೆಯ ಪಂಜುರ್ಲಿ ನನ್ನ ಜೊತೆ ಇದ್ದಾನೆ ಅನ್ನೋದು ಆ ಮನೆಯವರ ನಂಬಿಕೆ. ಮನೆ ದೈವ ಓರ್ವ ಮನೆಯ ಸದಸ್ಯನಿದ್ದಂತೆ. ಹಿರಿಯನಿದ್ದಂತೆ, ರಕ್ಷಕನಿದ್ದಂತೆ. ಆ ಮನೆಯವರು ಸಂಕ್ರಾಂತಿ, ತಂಬಿಲ, ಚೌತಿ, ದೀಪಾವಳಿ ಪೂಜೆ ಅವರ ಹಿರಿಯರು ನಡೆಸಿಕೊಂಡು ಬಂದ ಹಾಗೆ ಮಾಡಿಕೊಂಡು ಹೋಗುತ್ತಿದ್ದಾರೆ ಹಾಗಂತ ಅದು ತಪ್ಪು ಅಂದರೆ ಅವರು ಒಪ್ಪೋಕೆ ತಯಾರಿರಲ್ಲ. ಹಾಗಲ್ಲ ಹೀಗೆ ಅಂತ ಹೇಳೋಕೆ ಇಲ್ಲಿ ಯಾರೂ 300 - 400 ವರ್ಷದವರು ಇಲ್ಲ. ಹಾಗಾಗಿ ಜನರ ನಂಬಿಕೆಗೆ ಪೆಟ್ಟಾಗದಂತೆ, ಕಳೆದುಹೋಗದಂತೆ ಆಚರಣೆಯನ್ನು ಮುಂದುವರೆಸಿಕೊಂಡು ಹೋಗೋಕೆ ಬಿಡೋದು ಶ್ರೇಯಸ್ಕರ.

ಕಾಂತಾರ ಸಿನೆಮಾದಿಂದ ಜನರ ನಂಬಿಕೆಯಲ್ಲಿ ಕುಂದಾಗಿಲ್ಲ ಅದಂತೂ ದಿಟ. ಆ ಭಯ ಭಕ್ತಿ ಇನ್ನೂ ಜೀವಂತ ಇರಿಸುವಲ್ಲಿ ಅದು ತನ್ನ ಪಾತ್ರವಹಿಸಿದೆ. ಆದರೆ ಆ ತಂಡ ಮಾಡೋ ಪ್ರತೀ ಆಚರಣೆಯನ್ನು ಪ್ರಶ್ನಿಸುವ ಈ ಹೋರಾಟಗಾರರು ಜನರಲ್ಲಿ ದೈವದ ಮೇಲೆ ನಂಬಿಕೆ ಕಡಿಮೆ ಆಗುವಂತೆ..ಪ್ರಶ್ನಿಸುವಂತೆ ಮಾಡುತ್ತಿರುವುದು ಅಪಾಯಕಾರಿ.

ಅಂದೊಬ್ಬ ಟಿವಿ ನಿರೂಪಕ, ಹೊಂಬಾಳೆ ವೆಬ್ ಸೈಟ್ ನಲ್ಲಿ ಹೊಂಬಾಳೆಯವರು ದೈವದ ಮುಖದ ಪೆಂಡೆಂಟ್ ಸೇಲ್ ಮಾಡೋ ಬಗ್ಗೆ ಬಹಳ ದು:ಖಿತನಾಗಿ ಮಾತಾಡಿದ್ದ. ಆದರೆ ಅದೆಷ್ಟೋ ವರ್ಷದಿಂದ ಇದೇ ನಮ್ಮ ತುಳುನಾಡಿನ ಅಂಗಡಿಗಳಲ್ಲಿ ಕೊರಗಜ್ಜನ ಕೀ ಚೈನ್ ಸೇಲ್ ಮಾಡುತ್ತಿದ್ದುದು ಮಾತ್ರ ಆತನಿಗೆ ನೆನಪಿಗೆ ಬಂದಿಲ್ಲ! ಇವರೆಲ್ಲಾ ಮಾಡಿದ್ರೆ ಸರಿ..ಬೇರೆಯವರು ಮಾಡಿದ್ರೆ ತಪ್ಪು! Hypocrisy ನೋಡಿ. ತುಳುನಾಡಿನಲ್ಲಿ ಅದೆಷ್ಟೋ ವಾಹನಗಳ ಮೇಲೆ ಕೊರಗಜ್ಜನ ಮುಖದ ಸ್ಟಿಕ್ಕರ್ ಇದೆ.. ವಾಹನಗಳಿಗೆ ದೈವದ ಹೆಸರು ಹಾಕ್ತಾರೆ..ಅದರ ಬಗ್ಗೆ ಇವರ ಚಕಾರ ಇಲ್ಲ! ಅದರ ಬಗ್ಗೆ ಈ ಹೋರಾಟಗಾರರು ಏನು ಹೋರಾಟ ಮಾಡಿದ್ದಾರೆ? ಕೊರಗಜ್ಜನ ಮೇಲೆ ನಂಬಿಕೆಯಿಂದ, ಭಕ್ತಿಯಿಂದ, ಪ್ರಿತಿಯಿಂದ ಅವರ ಮುಖ ಇರೋ ವಸ್ತುಗಳನ್ನು ಜನ ಜೊತೆಗಿರಿಸಿಕೊಂಡಿದ್ದಾರೆ. ಅವರೆಲ್ಲರೂ ದೈವಾರಾಧಕರೇ ಅಲ್ಲವೇ? ಹಾಗಿದ್ದಲ್ಲಿ ಅದು ತಪ್ಪೇ?

ದೈವನರ್ತಕ ಹಾಗೆ ಹೀಗೆ..ಅವರ ಸೈಡು ಇವರ ಸೈಡು ಅನ್ನೋದೇ ದೈವಾರಾಧನೆಯ ಮೂಲಕ್ಕೆ ಕೊಡೋ ಪೆಟ್ಟು. ಆತ ಯಾರೇ ಇರಲಿ..ಆ ಕ್ಷೇತ್ರಕ್ಕೆ, ಆ ಮಣ್ಣಿಗೆ, ಕೊಡಿ ಅಡಿಗೆ ಬಂದು ನಿಂತು ದೈವದ ಕೆಲಸ ಮಾಡುವಾಗ, ನುಡಿ ಕೊಡುವಾಗ ಅದು ಆ ಸ್ಥಳದ ಮಹಿಮೆಯಿಂದ ಬರುವಂತಾದ್ದು.. ಅಲ್ಲಿ ಆ ದೈವ ನರ್ತಕ ತನ್ನ ಬಾಯಿಂದ ನುಡಿ ಕೊಟ್ಟರೂ ಅದು ಆ ದೈವ ಆತನ ಮುಖೇನ ಹೇಳಿಸಿದೆ ಎಂಬುದು ಭಕ್ತರ ನಂಬಿಕೆ. ನಂಬಿಕೆಗಿಂತ ಮಿಗಿಲಾದದ್ದು ಏನೂ ಇಲ್ಲ. ಆ ನಂಬಿಕೆಯನ್ನೇ ಬುಡಮೇಲುಗೊಳಿಸುತ್ತಿರುವ ಕೆಲ ಪ್ರಚಾರಪ್ರಿಯರನ್ನು ನಿಜವಾದ ದೈವಾರಾಧಕರು ದೂರ ಇಟ್ಟಲ್ಲಿ ತುಳುನಾಡಿನ ಈ ಭವ್ಯ ಪರಂಪರೆ, ಆಚರಣೆ ಇನ್ನೂ ಉತ್ತುಂಗಕ್ಕೆ ಹೊಗುವುದರಲ್ಲಿ ಯಾವುದೇ ಸಂಶಯವಿಲ್ಲ. ದೈವಾರಾಧನೆಯನ್ನು ಉಳಿಸೋ ಅಗತ್ಯ ಇಂದಿಗಿಲ್ಲ..ಅದನ್ನು ಭಕ್ತಿಯಿಂದ ಆಚರಿಸಿದ್ರೆ ಸಾಕು...ಅದಕ್ಕಳಿವಿಲ್ಲ.

ದೈವ ನಮ್ಮನ್ನು ರಕ್ಷಿಸಲಿ...ನಾವು ದೈವವನ್ನು ರಕ್ಷಿಸೋದು ಅಲ್ಲ...
ಮಿಕ್ಕಿದ್ದು ಆ ಶಕ್ತಿಗೆ ಬಿಟ್ಟಿದ್ದು...
-ಜಿತೇಶ್ ಕುಮಾರ್

6 months ago | [YT] | 21