Dr Vinayak Hebbar's Authentic Ayurveda

ನಾನೊಬ್ಬ ಆಯುರ್ವೇದ ವೈದ್ಯನಾಗಿ, ಆಯುರ್ವೇದದಲ್ಲಿರುವ ಅನಂತ ಜ್ಞಾನವನ್ನು ಈ ಚಾನೆಲ್ ಮೂಲಕ ಕನ್ನಡದಲ್ಲಿ ತಮಗೆಲ್ಲಾ ತಲುಪಿಸಲು ಇಚ್ಛಿಸುತ್ತಿದ್ದೇನೆ. ಇದು ನಿಮಗೆಲ್ಲಾ ಸಹಾಯಕವಾಗಿರುತ್ತದೆ ಎಂದು ನಂಬಿದ್ದೇನೆ.


Dr Vinayak Hebbar's Authentic Ayurveda

ನನ್ನ ತಾಯಿಗೆ, ಅಣ್ಣನಿಗೆ, ಅಕ್ಕನಿಗೆ ಹೀಗೆ ಆಗಿತ್ತು; ಇಂಥವರಿಂದ ಗುಣವಾಯಿತು" ಎಂದು ಅಪರಿಚಿತರು ಯಾರದೋ ಹತ್ತಿರ ಕರೆದುಕೊಂಡು ಹೋಗಿ ಹೀಗೆ ಹಣದೋಚುವುದು ಹೊಸ ರೀತಿಯ ಸ್ಕ್ಯಾಮ್. ಹುಷಾರಾಗಿರಿ.

News Link - ಆಯುರ್ವೇದ ಚಿಕಿತ್ಸೆ ಹೆಸರಲ್ಲಿ ಕಾರ್ಕಳದ ವ್ಯಕ್ತಿಗೆ 12 ಲಕ್ಷ ರೂಪಾಯಿ ವಂಚನೆ: ದೂರು | Udayavani - Latest Kannada News, Udayavani Newspaper share.google/isEVwPsuDb1X5nIeo

3 weeks ago | [YT] | 35

Dr Vinayak Hebbar's Authentic Ayurveda

ಧ್ಯಾನದಿಂದ ಪೂರ್ಣ ಆರೋಗ್ಯ. ಇಂದಿನಿಂದ ಒಂದು ದಿನವೂ ತಪ್ಪದೇ ಧ್ಯಾನ ಮಾಡೋಣ.

5 months ago | [YT] | 210

Dr Vinayak Hebbar's Authentic Ayurveda

ಕೇವಲ ಒಂದೇ ವಿಷಯದ ಮೇಲೆ "ಪ್ರಶ್ನೋತ್ತರ" ವೀಡಿಯೋ ಮಾಡಲಿದ್ದೇನೆ. ಈ ಮೂರರಲ್ಲಿ ಯಾವ ವಿಷಯದ ಮೇಲೆ ಮಾಡಬೇಕೆಂದು ನೀವೇ ಹೇಳಿ.

8 months ago | [YT] | 68

Dr Vinayak Hebbar's Authentic Ayurveda

ಸಕ್ಕರೆ
ಪ್ರತಿದಿನ ಮೊಸರು
ಚಪಲಕ್ಕೆ ಚಿಪ್ಸ್
ಒಂದಲ್ಲ ಒಂದು ತಲೆಬಿಸಿ
ತಪ್ಪು ದಿನಚರಿ
ವ್ಯಾಯಾಮಕ್ಕೆ ಪುರುಸೊತ್ತಿಲ್ಲ

ಅಯ್ಯೋ ಬಿಡಿ....

ಪಟ್ಟಿ ಮಾಡುತ್ತಾ ಹೋದರೆ ಮುಗಿಯದಷ್ಟು ಇವೆ.
ಇದೆಲ್ಲದರಿಂದ ಗಲೀಜಾದ ದೇಹವನ್ನು ಶುದ್ಧ ಮಾಡಿಕೊಳ್ಳಬೇಕಲ್ಲ....
ಅದಕ್ಕೇ ದೇವರು “ಅಣಲೆಕಾಯಿ” ಕೊಟ್ಟಿದ್ದಾನೆ.
ಈ ಲಿಂಕ್ ಕ್ಲಿಕ್ ಮಾಡಿ ವೀಡಿಯೋ ನೋಡಿ.
https://youtu.be/fDXQFQYGh84

8 months ago (edited) | [YT] | 161

Dr Vinayak Hebbar's Authentic Ayurveda

YouTube ಗೆ ಒಂದು ಅಲ್ಪವಿರಾಮ ಹೇಳುತ್ತಿದ್ದೇನೆ. ಇನ್ನು 2 ತಿಂಗಳ ನಂತರ ಮತ್ತೆ ಸಿಗೋಣ.

ಈ ಚಾತುರ್ಮಾಸ್ಯದಲ್ಲಿ ಒಂದು ದಿನವೂ ತಪ್ಪದೇ ಧ್ಯಾನ, ಸರಿಯಾದ ದಿನಚರಿ ಇಟ್ಟುಕೊಳ್ಳೋಣ.
ಧನ್ವಂತರಿ ನಮಗೆಲ್ಲಾ ಆರೋಗ್ಯವನ್ನು ದಯಪಾಲಿಸಲಿ.

ನಿಮ್ಮ ಪ್ರೀತಿಗೆ ಅನಂತ ಧನ್ಯವಾದಗಳು.

10 months ago | [YT] | 296

Dr Vinayak Hebbar's Authentic Ayurveda

🌟 200K Subscribers! Thank You! 🌟

We are thrilled to announce that Dr. Vinayak Hebbar's Authentic Ayurveda has reached an incredible milestone of 200,000 subscribers! 🙏✨

This achievement wouldn’t have been possible without the immense love, support, and trust you’ve shown in our journey to spread authentic Ayurveda knowledge. 💚

From ancient wisdom to modern health tips, your engagement inspires us to continue sharing valuable content for a healthier, balanced life. 🌿💫

Let’s keep growing and healing together! 🌟
Stay tuned for more insightful videos, and don’t forget to like, share, and subscribe!

#200KSubscribers #ThankYou #AuthenticAyurveda #AyurvedaForLife #DrVinayakHebbar #HealthyLiving #NaturalHealing

1 year ago | [YT] | 163

Dr Vinayak Hebbar's Authentic Ayurveda

ನಿನ್ನೆ ಧನ್ವಂತರಿ ಜಯಂತಿಯಂದು ನನ್ನ ಹೊಸ ಪುಟ್ಟ ಪುಸ್ತಕ ಬಿಡುಗಡೆ ಆಯಿತು. ಆರೋಗ್ಯಕ್ಕಾಗಿ ದಿನಚರಿ, ಆಹಾರ ಸೇವನಾ ವಿಧಾನ, ಉಪವಾಸ, ಸತ್ಸಂತಾನಕ್ಕೆ ಸರಳ ಸೂತ್ರಗಳನ್ನು ಈ ಪುಸ್ತಕ ಹೊಂದಿದೆ.

ನನ್ನ ಎಲ್ಲಾ ವೀಡಿಯೊಗಳನ್ನು ನೋಡುವವರಿಗೆ ಬಹುತೇಕ ಅದೇ ವಿಷಯ ಹೊಂದಿರುವ ಈ ಪುಸ್ತಕದ ಅವಶ್ಯಕತೆ ಇದೆಯೆಂದು ನನಗನ್ನಿಸುವುದಿಲ್ಲ. ಆದರೆ ತುಂಬಾ ವಿಷಯಗಳು ಒಂದೇ ಕಡೆ ಸಿಗುವ ಕಾರಣ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಗಿಫ್ಟ್ ಕೊಡಲೂ ಯೋಗ್ಯವೆಂದು ನನಗನ್ನಿಸುತ್ತದೆ.

ಪುಸ್ತಕಕ್ಕಾಗಿ 8660939261 ಗೆ ಸಂಪರ್ಕಿಸಬಹುದು.

1 year ago | [YT] | 518

Dr Vinayak Hebbar's Authentic Ayurveda

ಲಾಭದಲ್ಲಿ ಬಹುದೊಡ್ಡ ಪಾಲನ್ನು ದಾನ ಮಾಡುತ್ತಿದ್ದ ಅಪರೂಪದ ವ್ಯಕ್ತಿ ರತನ್ ಟಾಟಾ. ಅಷ್ಟಾಂಗ ಹೃದಯದ ಸೂತ್ರಸ್ಥಾನದ ಐದನೆಯ ಅಧ್ಯಾಯದ ಒಂದು ಶ್ಲೋಕದಲ್ಲಿ ಏನೇನು ಮಾಡಿದರೆ ರೋಗಗಳು ಬರುವುದಿಲ್ಲ ಎಂದು ಹೇಳುವಾಗ "ದಾತಾ" ಎಂದೂ ಹೇಳುತ್ತಾರೆ. ಅಂದರೆ ಮನಃಪೂರ್ವಕವಾಗಿ, ಪ್ರತಿಫಲ ಅಪೇಕ್ಷೆ ಇಲ್ಲದೇ (ಪುಣ್ಯ ಸಿಗಲೆಂದು, ಪಾಪ ಕಳೆಯಲೆಂದು ಅಥವಾ ದೊಡ್ಡ ಹೆಸರು ಬರಲೆಂಬ ಯೋಚನೆ ಇಲ್ಲದೇ) ಮಾಡಿದ ದಾನದಿಂದ ನಮ್ಮೊಳಗೆ ಧನಾತ್ಮಕ ಶಕ್ತಿಯ ಮತ್ತು ಮಾನಸಿಕ ಶಕ್ತಿಯ ವೃದ್ಧಿಯಾಗಿ ಆರೋಗ್ಯ ಹೆಚ್ಚುತ್ತದೆ.

ನಾನು ಯಾರಿಂದ, ಎಲ್ಲಿ, ಹೇಗೆ, ಏನನ್ನು ಪಡೆದುಕೊಳ್ಳಬಹುದು ಎಂಬುದನ್ನಷ್ಟೇ ಯೋಚಿಸದೇ ಯಾರಿಗೆ, ಹೇಗೆ ಕೊಡಬಹುದು ಎಂಬುದನ್ನು ಕೂಡಾ ಚಿಂತಿಸೋಣ.

1 year ago | [YT] | 554

Dr Vinayak Hebbar's Authentic Ayurveda

ಚೀಯರ್ಸ್ - ಆಯುರ್ವೇದಿಕ್ ಮದ್ಯವೂ ಬಂತು
ಆಯುರ್ವೇದಿಕ್ ಶಾಂಪೂ, ಸೋಪ್, ಟೂತ್ ಪೇಸ್ಟ್, ಐಸ್ ಕ್ರೀಮ್ ಗಳನ್ನೆಲ್ಲ ನೋಡಿ ನಾವೆಲ್ಲಾ ತಮಾಷೆ ಮಾಡುತ್ತಿದ್ದೆವು - ಮುಂದೊಂದು ದಿನ ಆಯುರ್ವೇದಿಕ್ ಗುಟಖಾ, ಸರಾಯಿ, ಸಿಗರೇಟ್ ಗಳು ಬರುತ್ತವೆ ಎಂದು. ಅದು ಈಗ ನಿಜವಾಗಿದೆ. ಆದರೆ ಇಲ್ಲಿ ಒಂದಿಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕು.

ಇವು ನಿಜವಾಗಿಯೂ ಆಯುರ್ವೇದವೇ?
ಒಂದು ಬಕೆಟ್ ಸಮುದ್ರದ ನೀರಿಗೆ ಒಂದು ಚಮಚ ನದಿಯ ನೀರನ್ನು ಹಾಕಿ ಇದು ಸಿಹಿ ನೀರು ಎಂದರೆ ಅದು ನದಿಯ ನೀರಾಗಲು ಸಾಧ್ಯವೇ? ಅದೇ ರೀತಿ ಸೋಪ್, ಶಾಂಪು, ಫೇಸ್ ವಾಶ್ ಗಳಲ್ಲಿ (ಈಗ ಸರಾಯಿಯಲ್ಲಿ ಕೂಡ) 5 – 10% ಗಿಡಮೂಲಿಕೆಗಳನ್ನು ಹಾಕಿದರೆ ಅದು ಆಯುರ್ವೇದಿಕ್ ಆಗಲು ಸಾಧ್ಯವಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಇದರಿಂದ ಏನಾಗುತ್ತಿದೆ?
ಆಯುರ್ವೇದಿಕ್ ಮದ್ಯ ಎಂದು ಮಾರಾಟ ಮಾಡುತ್ತಿರುವವರು ನಾವು ತಯಾರು ಮಾಡಿರುವ ಮದ್ಯ ಉಳಿದ ಮಧ್ಯಗಳಂತೆಯೇ ಮತ್ತನ್ನು ಕೊಡುತ್ತದೆ; ಆದರೆ ನಾವು ರಿಸರ್ಚ್ ಮಾಡಿ ಆಯುರ್ವೇದಿಕ್ ಮದ್ಯವನ್ನು ತಯಾರಿಸಿದ್ದೇವೆ ಎನ್ನುತ್ತಿದ್ದಾರೆ. ಯಾವ ಮದ್ಯವೇ ಆದರೂ ದೇಹದಲ್ಲಿ ಮಾಡಬೇಕಾದ ಕೆಟ್ಟ ಪರಿಣಾಮವನ್ನು ಉಂಟು ಮಾಡಿಯೇ ಮಾಡುತ್ತದೆ. ಎಲ್ಲೋ ಚೂರು ಆಯುರ್ವೇದ ಗಿಡಮೂಲಿಕೆಗಳನ್ನು ಹಾಕಿ ಆಯುರ್ವೇದ ಉತ್ಪನ್ನವೆನ್ನುವುದು ತಪ್ಪು. ಇಂತಹ ವಸ್ತುಗಳಿಗೆ ಆಯುರ್ವೇದದ ಹೆಸರನ್ನು ಬಳಸುವ ಕಾರಣದಿಂದ ಹೆಸರು ಹಾಳಾಗುವುದು ಮಾತ್ರ ಆಯುರ್ವೇದದ್ದು.

ನಾವೇನು ಮಾಡಬೇಕು?
ಇನ್ನು ಸ್ವಲ್ಪ ದಿನಗಳಲ್ಲಿ ನಮ್ಮ ಗುಟಖಾದಲ್ಲಿ ತುಳಸಿ, ಅಶ್ವಗಂಧ ಹಾಕಿದ್ದೇವೆ ಹಾಗಾಗಿ ಇದು ಆಯುರ್ವೇದಿಕ್ ಗುಟ್ಖಾ ಇಂದು ಮಾರಾಟ ಮಾಡಬಹುದು. ಹಾಗಾಗಿ ನಾವೆಲ್ಲಾ ಆಯುರ್ವೇದಿಕ್ ಎಂಬ ಬರಹವನ್ನು ನೋಡಿ ಟೀ ಪುಡಿ, ಫೇಸ್ ವಾಶ್ ಫೇಸ್ ಕ್ರೀಮ್, ಬಿಸ್ಕಿಟ್ಸ್ ಮುಂತಾದವುಗಳನ್ನು ಖರೀದಿಸುವುದನ್ನು ಬಿಡಬೇಕು. ಆ ಉತ್ಪನ್ನದಲ್ಲಿ ಎಷ್ಟು ಪ್ರಮಾಣದಲ್ಲಿ ಆಯುರ್ವೇದ ಗಿಡಮೂಲಿಕೆಗಳು ಇವೆ ಎಂಬುದನ್ನು ನೋಡಬೇಕು. ಉದಾಹರಣೆಗೆ, ಆಯುರ್ವೇದಿಕ್ ಟೀ ಪುಡಿಯಲ್ಲಿ ಅಶ್ವಗಂಧ, ತುಳಸಿ, ಶುಂಠಿ ಎಲ್ಲಾ ಸೇರಿ ಇರುವುದು 0.2% ಮಾತ್ರ. ಅಂದರೆ 1 ಕೆಜಿ ಟೀ ಪುಡಿಯಲ್ಲಿ ಆಯುರ್ವೇದ ಗಿಡಮೂಲಿಕೆಗಳು ಇರುವುದು 2 ಗ್ರಾಂನಷ್ಟು ಮಾತ್ರ.

2 years ago | [YT] | 190