Karnataka State POLICE

ನನ್ನ ಮೂಲ ಉದ್ದೇಶ ಪ್ರತಿಯೊಬ್ಬ ಗ್ರಾಮೀಣ ಯುವಕರು ತಮ್ಮ ಜೀವನವನ್ನು ಸದೃಢವಾಗಿ ,
ಆನಂದವಾಗಿ ನಡೆಸಲು ಸಲಹೆ ನೀಡಬೇಕೆಂಬ ಪರಿಕಲ್ಪನೆಯಿಂದ
YouTube channel
ಸಕಾರಾತ್ಮಕ ವಿಚಾರಗಳನ್ನು ವಿಷಯಗಳನ್ನು ಹಂಚಿಕೊಳ್ಳುತ್ತೇನೆ

ನನ್ನ ಆರಾಧ್ಯ ದೈವವಾದ
ಹುಸೇನಪ್ಪ ನಾಯಕ್ PSI,




ಅವರ
ಮಾರ್ಗದರ್ಶನದೊಂದಿಗೆ



Karnataka State POLICE

🇮🇳🇮🇳🇮🇳💪🙏🙏🙇🙇💐💐💐🎊🎊‪@karnatakastatepolice1809‬

4 years ago | [YT] | 234

Karnataka State POLICE

‪@karnatakastatepolice1809‬ 👇🏻👇🏻👇🏻👇🏻👇🏻👇🏻
CIVIL PC EXAM DATE:
✍🏻🗒️✍🏻🗒️✍🏻🗒️✍🏻🗒️✍🏻

Civil PC 4000 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ದಿನಾಂಕ (PC Written Exam‌ Date) ಇದೀಗ ಇಲಾಖೆಯ ಅಧಿಕೃತ ಅಂತರ್ಜಾಲದಲ್ಲಿ ಪ್ರಕಟಗೊಂಡಿದೆ.!!

ಪರೀಕ್ಷಾ ದಿನಾಂಕ: 24-10-2021
👇🏻👇🏻👇🏻👇🏻👇🏻👇🏻👇🏻👇🏻👇🏻
cpc21.ksp-online.in/

4 years ago | [YT] | 225

Karnataka State POLICE

‪@karnatakastatepolice1809‬
★NEW POLICE NOTIFICATION:★
⚜️🌟⚜️🌟⚜️🌟⚜️🌟⚜🌟

♣️ ಪೊಲೀಸ್ ಇಲಾಖೆಯಲ್ಲಿ ಇಂದು (31-08-2021) ಮತ್ತೊಂದು ನೇಮಕಾತಿಗೆ ಅಧಿಸೂಚನೆ ಪ್ರಕಟಗೊಂಡಿದೆ.!!

♣️ 80 PC & 20 PSI ಸೇರಿದಂತೆ ಒಟ್ಟು 100 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

♣️ ಅರ್ಜಿ ಸಲ್ಲಿಸುವ ಅವಧಿ: 31-08-2021 ರಿಂದ 29-09-2021ರ ವರೆಗೆ.

♣️ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
recruitment.ksp.gov.in/online-recruitment-applicat…

♣️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ ವೆಬ್ ಸೈಟ್ ನಲ್ಲಿ ಶೀಘ್ರದಲ್ಲೇ Upload ಮಾಡಲಾಗುವುದು ನಿರೀಕ್ಷಿಸಿ...!!
🌳🪴🌳🪴🌳🪴🌳🪴🌳🪴

4 years ago | [YT] | 118

Karnataka State POLICE

ಕೃಪೆ:‪@VISHWASKingdom‬ ‪@karnatakastatepolice4827‬
VKINGDOM-Chase your Dreams📚🇮🇳:
PSI 545 Written Exam, 402 PHYSICAL EXAM , PC exam UPDATES🇮🇳🇮🇳🇮🇳👍👍👍🇮🇳


ತಾಳ್ಮೆಯಿಂದ ಓದಿ ನಂತರ ಪ್ರಶ್ನೆ ಕೇಳಿ.‌......
ನಿಮಗೆ ಈಗಾಗಲೇ ಗೊತ್ತಿರುವ ಹಾಗೆ ನನ್ನ ಮಾಹಿತಿ ನಂಬಲರ್ಹ ಮೂಲಗಳ ಆಧಾರಿಸಿದ್ದು , ಆಕಾಂಕ್ಷಿಗಳ ಅಧ್ಯಯನಕ್ಕೆ ಅನುಕೂಲವಾಗುವ ಉದ್ದೇಶ ಹೊಂದಿರುತ್ತದೆ.


1. 545 PSI written exam ಯಾವಾಗ?
ಮೊದಲನೆಯದಾಗಿ ಈ ಹಿಂದೆ ಲಭ್ಯವಿದ್ದ 26.09.2021 ದಿನಾಂಕವೂ ನೇಮಕಾತಿ ವಿಭಾಗವು ಲಿಖಿತ ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಿದ್ದ ಒಂದು ನೇಮಕಾತಿಯು ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ದಿನಾಂಕ.

ಒಂದು ಅಂಶವನ್ನು ಈ ಸಂದರ್ಭದಲ್ಲಿ ಹೇಳುತ್ತೇನೆ ಲಿಖಿತ ಪರೀಕ್ಷೆಯ ದಿನಾಂಕವನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ 25ರಿಂದ 30 ದಿನಗಳ ಮೊದಲೇ ಪ್ರಕಟಿಸಲಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಯಾವಾಗಲೂ ಅಧಿಸೂಚನೆ ಹೊರಡಿಸಿದ ಮೂರು ತಿಂಗಳ ನಂತರ ಮುಂದಿನ ಒಂದು ತಿಂಗಳ ಒಳಗಾಗಿ ಪರೀಕ್ಷೆ ನಡೆಯುತ್ತಿವೆಯೆಂದು ಓದಬೇಕು...



ಇತ್ತೀಚಿನ ನೇಮಕಾತಿ ವಿಭಾಗದ ಸಭೆಯ ಚರ್ಚೆಯಂತೆ ಲಿಖಿತ ಪರೀಕ್ಷೆಯ ದಿನಾಂಕವನ್ನು ಅಕ್ಟೋಬರ್ 24 ಎಂದು ಚರ್ಚಿಸಲಾಗಿದೆ. ನೆನಪಿನಲ್ಲಿಟ್ಟುಕೊಳ್ಳಿ ಇದು ಸಭೆಯಲ್ಲಿ ಚರ್ಚೆಯಾದ ದಿನಾಂಕ. Exactly ಯಾವಾಗ ಅಂತ ನನಗೆ ಕೇಳಿದರೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದಾಗ. ಈ ದಿನಾಂಕದ ಒಂದು ವಾರ ಮುಂಚೆ ಆಗಬಹುದು , ಅದೇ ದಿನಾಂಕದಂದು ಆಗಬಹುದು ಅಥವಾ ಒಂದು ವಾರ ತಡವಾಗಿ ಆಗಬಹುದು. ಒಟ್ಟಿನಲ್ಲಿ ಲಿಖಿತ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈಗಾಗಲೇ ಎಂಟು ತಿಂಗಳ ಸಮಯಾವಕಾಶ ಸಿಕ್ಕಿದ್ದು , ಇನ್ನೂ ಕೂಡ ಅಧ್ಯಯನ ಮಾಡದೇ ಇದ್ದರೆ ಕನಿಷ್ಠಪಕ್ಷ ಇಂದಿನಿಂದ ಆದರೂ ದಿನಕ್ಕೆ 12ರಿಂದ 15 ಗಂಟೆಗಳ ಅಧ್ಯಯನ ಮಾಡಿ. ನೆನಪಿನಲ್ಲಿಟ್ಟುಕೊಳ್ಳಿ ಈ ಸಲ ಅತ್ಯುತ್ತಮ ಪೈಪೋಟಿಯಿದ್ದೂ ನಿಮ್ಮ ಯಾವುದೇ shortcuts, magical stic ಗಳು ಕೆಲಸಕ್ಕೆ ಬರುವುದಿಲ್ಲ. ಈ ದಿನಾಂಕವನ್ನು ಅಂತಿಮ ಎಂದು ಅಧ್ಯಯನ ಮಾಡಿ.


2. 402 PSI physical/ 545 Psi physical Fail ಆದವರಿಗೆ PHYSICAL ಯಾವಾಗ?

ಸ್ಥಳೀಯ ಚುನಾವಣೆಗಳು ನಿಗದಿಯಾಗಿರುವುದರಿಂದ, ಕರ್ನಾಟಕದ ಗಡಿ ರಾಜ್ಯಗಳಲ್ಲಿ ಕೋವಿಡ್ ತೀವ್ರತೆ ಹೆಚ್ಚಾಗಿರುವುದರಿಂದ ಮತ್ತು ನಿರಂತರ ಮಳೆ ಬರುತ್ತಿರುವುದರಿಂದ ಇಲಾಖೆಯ ಸಿಬ್ಬಂದಿಗಳು ‌ ಕಾನೂನು-ಸುವ್ಯವಸ್ಥೆ ಸೇರಿದಂತೆ ಇತರ ಕರ್ತವ್ಯಗಳಿಗೆ ಹಾಜರಾಗಬೇಕಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ 402 PSI ಹುದ್ದೆಗಳ ದೈಹಿಕ ಪರೀಕ್ಷೆ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ನನ್ನ ಅಂದಾಜಿನ ಪ್ರಕಾರ ಸೆಪ್ಟೆಂಬರ್ ಮಾಹೆಯಲ್ಲಿ ದೈಹಿಕ ಪರೀಕ್ಷೆಗಳು ನಡೆಯುವುದು ಅನುಮಾನ. ನನಗೆ ಲಭ್ಯವಾದ ಇನ್ನೊಂದು ಮಾಹಿತಿಯ ಪ್ರಕಾರ ಅಕ್ಟೋಬರ್ ಕೊನೆಯವರೆಗೂ ಹೋಗಬಹುದು.

ಪ್ರಸ್ತುತ ಗಮನ ಇರುವುದು 545 post ಲಿಖಿತ ಪರೀಕ್ಷೆಯ ಮೇಲೆ
ಯಾರೆಲ್ಲಾ ದೈಹಿಕ ಪರೀಕ್ಷೆಯಲ್ಲಿ ವಿಫಲರಾಗಿರುವಿರೋ ಅವರುಗಳು ನಿರಂತರವಾಗಿ ಅಭ್ಯಾಸ ಮಾಡಿ... ಸಲಹೆ ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ ನಾನು ವಿಡಿಯೋಗಳನ್ನು ಮಾಡಿದ್ದೇನೆ. ಒಂದು ಸಲ ಯೂಟ್ಯೂಬ್ ಗೆ ಹೋಗಿ ನೋಡಿ.... ನನ್ನ ಲಾಭಕ್ಕೆ ಅಲ್ಲ ನಿಮ್ಮ ಅನುಕೂಲಕ್ಕೆ..

ಒಟ್ಟಾರೆಯಾಗಿ ದೈಹಿಕ ಪರೀಕ್ಷೆಗಳು ನಡೆಯುವುದು ವಿಳಂಬವಾಗುತ್ತದೆ. ಮತ್ತೊಂದು ವಿಷಯ ದೈಹಿಕ ಪರೀಕ್ಷೆಗಳು ನಡೆಯುವ ಹತ್ತು ದಿನಗಳ ಮೊದಲೇ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ನೀಡಲಾಗುತ್ತದೆ. ಹಾಗಾಗಿ ಪ್ರತಿದಿನ ವೆಬ್ಸೈಟನ್ನು ನೋಡುತ್ತಾ ಇರಿ.


3. PC EXAM ಯಾವಾಗ?‌

ಪ್ರಸ್ತುತ ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಕಾನ್ಸ್ಟೇಬಲ್ ಪರೀಕ್ಷೆ ದಿನಾಂಕ ದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇನ್ನು ಒಂದು ವಾರದ ಒಳಗೆ ಇದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನಿಮಗೆ ಒಂದು ಸುಳಿವನ್ನು ನೀಡಬಲ್ಲೆ , ಲಿಖಿತ ಪರೀಕ್ಷೆ ನಡೆಯುವ ಒಂದು ತಿಂಗಳು ಮೊದಲೇ ನಿಮಗೆ ದಿನಾಂಕವನ್ನು ತಿಳಿಸಲಾಗುತ್ತದೆ. ಹಾಗಾಗಿ ಮುಂದಿನ ಒಂದು ತಿಂಗಳು ಕಾನ್ಸ್ಟೇಬಲ್ ಪರೀಕ್ಷೆ ಇರುವುದಿಲ್ಲ.
ಇನ್ನೊಂದು ಸುಳಿವನ್ನು ನೀಡಬಹುದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಲಿಖಿತ ಪರೀಕ್ಷೆ ನಡೆದ ಬಳಿಕ ನಡೆಸುವ ಸಾಧ್ಯತೆ ಇದೆ.
ಆದರೆ ಒಂದನ್ನು ಗಮನಿಸಿ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ನಡೆಯುವ ಸಮಯವನ್ನು ಇಲಾಖೆಯ ಸಂದೇಶಗಳು , ಪತ್ರ ವ್ಯವಹಾರಗಳ ಮೂಲಕ ನಮಗೆ ಒಂದು ತಿಂಗಳು ಮೊದಲೇ ಗೊತ್ತಾಗುತ್ತದೆ..

ಆತ್ಮೀಯ ಕಾನ್ಸ್ಟೇಬಲ್ ಮಿತ್ರರೇ ನಿಮಗೆ ಇನ್ನು 30 ದಿನಕ್ಕಿಂತ ಹೆಚ್ಚು ಸಮಯವಿದೆ.
ನಿರಂತರವಾಗಿ ಪ್ರಮಾಣಿಕತೆಯಿಂದ ಸಮಯ ವ್ಯರ್ಥ ಮಾಡದೆ, ಮಾರುಕಟ್ಟೆಯ ಆಮಿಷಗಳಿಗೆ ಬಲಿಯಾಗದೆ ಅಧ್ಯಯನಮಾಡಿ. ಖಂಡಿತ ನೀವು ಅಧ್ಯಯನ ಮಾಡಿದರೆ ಆಯ್ಕೆ ಪಟ್ಟಿಯಲ್ಲಿ ಇರುವಿರಿ.



4. 402 PSI written exam ಯಾವಾಗ?
ಪ್ರಸ್ತುತ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಕಣ್ಮುಂದೆ ಮೊದಲ ಸಬ್ ಇನ್ಸ್ಪೆಕ್ಟರ್ ಲಿಖಿತ ಪರೀಕ್ಷೆ ಮತ್ತು ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ ಇರುವುದರಿಂದ ಅವುಗಳು ಆದ ಬಳಿಕ ಇದನ್ನು ನಡೆಸಬಹುದು.

ಕೊನೆಯದಾಗಿ ನನ್ನ ಕೆಲವು ಸಲಹೆಗಳು
✓ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೊಸ ಪುಸ್ತಕಗಳನ್ನು ಓದಬೇಡಿ.
✓ ಇದು ಕೋಚಿಂಗ್ ತೆಗೆದುಕೊಳ್ಳುವ ಸೂಕ್ತ ಸಮಯವಲ್ಲ. ಕಾರಣವಿಷ್ಟೆ ಆರು ತಿಂಗಳು ನಿರಂತರ ತರಗತಿ ತೆಗೆದುಕೊಂಡರೆ ಪಠ್ಯ ಮುಗಿಯುವುದಿಲ್ಲ, ಈ 30 40 ದಿನಗಳಲ್ಲಿ ದಿನಕ್ಕೆ ಎಂಟು ಗಂಟೆಗಳ ತರಗತಿ ತೆಗೆದುಕೊಂಡರೆ ಪಟ್ಟಿಯೇನೂ ಮುಗಿಸಬಹುದು, ಆದರೆ ನಿಮಗೆ ಓದಲು ಸಮಯ ಸಿಗುವುದಿಲ್ಲ. ಹಾಗಾಗಿ ಉತ್ತಮ ಪುಸ್ತಕಗಳನ್ನು ಹಲವು ಬಾರಿ ಅಧ್ಯಯನಮಾಡಿ ಪ್ರಶ್ನೆಪತ್ರಿಕೆಗಳನ್ನು ಅರ್ಥಮಾಡಿಕೊಂಡು ನಿಮ್ಮ ಗುರಿಯನ್ನು ತಲುಪಿ.

ಈ ಬಣ್ಣದ ಮಾತುಗಳು, ಮೆಚ್ಚಿಸುವ ಹಿತನುಡಿಗಳು, ರಾತ್ರೋರಾತ್ರಿ ಯಶಸ್ಸು ತಂದುಕೊಡುವ ಯಾವುದೇ ವಿಧಾನಗಳು ನಿಮಗೆ 50ರಿಂದ 60 ಅಂಕಗಳನ್ನು ತಂದುಕೊಡಬಹುದು. ಆಯ್ಕೆ ಪಟ್ಟಿಯಲ್ಲಿ ಇರಲು ಸಾಧ್ಯವಿಲ್ಲ..

ದೈಹಿಕ ಪರೀಕ್ಷೆ ಎಂಬುದು ಒಂದು ಆರಂಭಿಕ ಅಂತಷ್ಟೇ. ಒಂದು ಲಕ್ಷ ಇಪ್ಪತ್ತು ಸಾವಿರ ಜನ ದೈಹಿಕ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪಟ್ಟಿಯಲ್ಲಿ ಇರಲು 545 ಜನರಲ್ಲಿ ಇರಿ.

ನನ್ನ ಮಾತುಗಳು ಮತ್ತು ಸಲಹೆಗಳು ನಿಮಗೆ ಖುಷಿ ಕೊಡದೇ ಇರಬಹುದು ಆದರೆ ಅವುಗಳನ್ನು ಅರ್ಥಮಾಡಿಕೊಂಡರೆ ಗುರಿ ತಲುಪಬಹುದು.
✓ ಮಾದರಿ ಪರೀಕ್ಷೆಗಳನ್ನು ಬರೆಯುವ ಮುನ್ನ ನೀವು ಪರಿಪೂರ್ಣವಾಗಿ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡಿರಬೇಕು.
ಮತ್ತೊಂದು ವಿಷಯ ಮಾದರಿ ಪರೀಕ್ಷೆ ಗಳು ಅನಿವಾರ್ಯವಲ್ಲ . ಹಾಗಂತ ತೆಗೆದುಕೊಳ್ಳಬಾರದು ಎಂದರ್ಥವಲ್ಲ. ಮಾದರಿ ಪರೀಕ್ಷೆ ನಡೆಸುವವರ ಗುಣಮಟ್ಟ ತುಂಬಾ ಮುಖ್ಯ. ನಾನು ನಿಮಗೆ ಒಂದು ಮಾತು ಹೇಳುತ್ತೇನೆ , ಮಾದರಿ ಪರೀಕ್ಷೆಯ ಆಧಾರದ ಮೇಲೆ ನಿಮ್ಮ ಅಧ್ಯಯನವನ್ನು ನಿರ್ಧಾರ ಮಾಡಿಕೊಳ್ಳಬೇಡಿ. ಏಕೆಂದರೆ ನಾನು ತುಂಬಾ ಪ್ರಶ್ನೆಪತ್ರಿಕೆಗಳನ್ನು ನೋಡುತ್ತಿದ್ದೇನೆ ಮತ್ತು ತುಂಬಾ ಆಕಾಂಕ್ಷಿಗಳ ಅಭಿಪ್ರಾಯಗಳನ್ನು ಕೇಳುತ್ತಿದ್ದೇನೆ. ಕೆಲವು ಆಕಾಂಕ್ಷಿಗಳು ಹೆಚ್ಚು ಅಂಕಗಳು ಬಂದಿದ್ದಾವೆ ಎಂದು ತಮ್ಮ ಅಧ್ಯಯನದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವು ಆಕಾಂಕ್ಷಿಗಳು ಕಡಿಮೆ ಅಂಕ ಬಂದಿದ್ದಾವೆ ಎಂದು ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.
ನೆನಪಿನಲ್ಲಿಟ್ಟುಕೊಳ್ಳಿ ಮಾದರಿ ಪರೀಕ್ಷೆಗಳು ನಡೆಸುತ್ತಿರುವವರು ನಿಮ್ಮ ಹಾಗೆ ಅಧ್ಯಯನ ಮಾಡುತ್ತಿರುವ ಅಥವಾ ಕೋಚಿಂಗ್ ಕ್ಷೇತ್ರದಲ್ಲಿರುವ ವ್ಯಕ್ತಿಗಳೇ ಹೊರತು ಪ್ರಶ್ನೆ ಪತ್ರಿಕೆ ತೆಗೆಯುವ ಪೊಲೀಸ್ ಇಲಾಖೆಯಲ್ಲ.
ಸಂಪೂರ್ಣವಾಗಿ ಎಲ್ಲಾ ವಿಷಯಗಳನ್ನು ಓದಿದ ಬಳಿಕ ಮಾದರಿ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಹೆಚ್ಚು ಅಂಕಗಳು ಬಂದಾಗ ಬೀಗಬೇಡಿ , ಕಡಿಮೆ ಅಂಕ ಬಂದಾಗ ಕುಗ್ಗಬೇಡಿ .... ಸದಾ ಗುರಿಯಡಿಗೆ ನುಗ್ಗುವುದನ್ನು ಮರೆಯಬೇಡಿ.

ತಂದೆ-ತಾಯಿಯ ತ್ಯಾಗ ಮತ್ತು ಕನಸುಗಳನ್ನು ಪ್ರತಿಸಲ ನೆನಪು ಮಾಡಿಕೊಳ್ಳುತ್ತಾ ಅವರಿಗಿಂತ ಅತ್ಯುತ್ತಮ ಸ್ಪೂರ್ತಿದಾಯಕ ವ್ಯಕ್ತಿಗಳು ಯಾರೂ ಇಲ್ಲ. ಹಾಗಾಗಿ ದಿನಕ್ಕೆ ಕನಿಷ್ಠ ಎರಡು ಸಲವಾದರೂ ಕೂಡ ನೀವು ಇರುವ ಸ್ಥಳದಿಂದಲೇ ನಿಮ್ಮ ಹೆತ್ತವರನ್ನು ನೆನೆದುಕೊಂಡು ನಮಸ್ಕರಿಸಿ ಅಧ್ಯಯನ ಮಾಡಿ.

ಅದನ್ನು ಹೊರತುಪಡಿಸಿ ನನ್ನಂತ ಯಾರೋ ಒಬ್ಬ ಸರ್ಕಾರಿ ಹುದ್ದೆ ಪಡೆದವರನ್ನು ಸ್ಪೂರ್ತಿದಾಯಕ ವ್ಯಕ್ತಿ, ದೇವರು, ಹಾಗೆ ,ಹಿಗೆ ಅಂತ ಚಲನಚಿತ್ರಗಳ ಡೈಲಾಗ್ ಹೊಡಿದು ಸಮಯ ಮತ್ತು ಹಣವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ನಿಮ್ಮ ಪ್ರತಿಯೊಂದು ರೂಪಾಯಿ ಕೂಡ ನಿಮ್ಮ ತಂದೆ ತಾಯಿಯ ಬೆವರು. ಅದನ್ನು ಸುಮ್ಮನೆ ಯಾರೋ ಬಾಯಿಗೆ ಹಾಕಬೇಡಿ. ನಿಮ್ಮ ದುಡಿಮೆಯಿಂದ ಒಂದು ರೂಪಾಯಿ ಗಳಿಸುವ ತನಕ ಅದನ್ನು ಖರ್ಚು ಮಾಡುವ ಯಾವುದೇ ನೈತಿಕ ಹಕ್ಕು ನಮಗಿಲ್ಲ ಎಂದು ತಿಳಿದುಕೊಂಡು ಪ್ರತಿದಿನ ಅಧ್ಯಯನ ಮಾಡಿ.




ಒಳ್ಳೆಯದಾಗಲಿ , ಪ್ರಮಾಣಿಕತೆಯಿಂದ ನಿರಂತರವಾಗಿ ಅಧ್ಯಯನ ಮಾಡುವವರಿಗೆ ಸರಸ್ವತಿ ಕೈಬಿಟ್ಟಿದ್ದು ಇತಿಹಾಸದಲ್ಲಿ ಇಲ್ಲ. ನೀವು ಅಧ್ಯಯನ ಮಾಡಿದ್ದೆ ಆದರೆ ಖಂಡಿತ ನಿಮಗೆ ಯಶಸ್ಸು ಸಿಕ್ಕೆ ಸಿಗುತ್ತದೆ.


ನನ್ನ ವಿಡಿಯೋಗಳು ಮತ್ತು ಟೆಲಿಗ್ರಾಮ್ ನಲ್ಲಿ ಸಿಗದ ಮಾಹಿತಿಗೆ ನನಗೆ ಸಂದೇಶ ಕಳುಹಿಸಿ. ನನ್ನ ತಿಳುವಳಿಕೆಯ ಮಟ್ಟಿಗೆ ಹಂಚಿಕೊಳ್ಳುತ್ತೇನೆ. ಇದು ಯಾವ ಸೇವೆಯು ಅಲ್ಲ ಎಂಥ ದೊಡ್ಡ ಗಣ ಕಾರ್ಯವಲ್ಲ. ನನ್ನ ಬಾಲ್ಯದಿಂದ ಅನುಭವಿಸಿದ ನೋವುಗಳು ಅವಮಾನಗಳು ಪ್ರತಿಫಲವಾಗಿ ನನ್ನ ಮನಸ್ಸು ಇಷ್ಟವಾಗಿ ಮಾಡುತ್ತಿರುವ ಕರ್ತವ್ಯ.


ಇಂತಿ ನಿಮ್ಮ
Vkingdom 🇮🇳🇮🇳🇮🇳🇮🇳💐 ‪@VISHWASKingdom‬

4 years ago (edited) | [YT] | 52

Karnataka State POLICE

Good Players Inspire Themselves, Great Players Inspire Others💐💐.............
.......
.......
....
‪@VISHWASKingdom‬

4 years ago | [YT] | 118

Karnataka State POLICE

ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐🍁

♣️ ಜೀವನದಲ್ಲಿ ಇಬ್ಬರು ಸ್ನೇಹಿತರನ್ನು ಸಂಪಾದಿಸಿ,

♣️ ಒಬ್ಬ ಕೃಷ್ಣನಂತೆ.
ಹೋರಾಡುವುದಿಲ್ಲ, ಆದರೂ ನಿಮ್ಮನ್ನು ಗೆಲ್ಲಿಸುತ್ತಾನೆ.!!

♣️ ಇನ್ನೊಬ್ಬ ಕರ್ಣನಂತೆ.
ನೀವು ಸೋಲುತ್ತೀರಿ ಅಂತಾ ಗೊತ್ತಿದ್ದರೂ ನಿಮಗಾಗಿ ಹೋರಾಡುತ್ತಾನೆ.!!

♣️ ಶುಭದಿನದ ಶುಭೋದಯದ ಶುಭಾಶಯಗಳು.!!
✍🏻🗒️✍🏻🗒️✍🏻🗒️✍🏻🗒️✍🏻

4 years ago | [YT] | 113

Karnataka State POLICE

ಉತ್ಕೃಷ್ಟ ಲೇಖಕಿ ಹಾಗೂ ಇನ್ಫೋಸಿಸ್ ಅಧ್ಯಕ್ಷೆ ಶ್ರೀಮತಿ ಸುಧಾ ಮೂರ್ತಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಸಾಮಾಜಿಕ ಕಾರ್ಯಗಳತ್ತ ನಿಮ್ಮ ಬದ್ಧತೆ, ನಿಮ್ಮ ಸರಳತೆ ಹಾಗೂ ದೃಢತೆ, ಎಲ್ಲ ಪೀಳಿಗೆಗೂ ಸ್ಪೂರ್ತಿ❤️

4 years ago | [YT] | 634