ಕನ್ನಡದ ಮೊಟ್ಟ ಮೊದಲ ಪಾಸಿಟಿವ್ ಸೈಕಾಲಾಜಿಯ ಮಾಸಪತ್ರಿಕೆ 'ಪ್ರಾಫಿಟ್ ಪ್ಲಸ್ ' ಆರಂಭಿಸಿ ವರ್ಷಗಳು ಆದವು. 'ಪ್ರಾಫಿಟ್ ಪ್ಲಸ್ ' ಕೇವಲ ಪತ್ರಿಕೆಯಲ್ಲ, ಸದುದ್ದೇಶದ ವೇದಿಕೆ ಹಾಗೆಯೇ 'ಭರವಸೆ' ಕೇವಲ ವಾಹಿನಿಯಲ್ಲ, ಬದುಕು ಬದಲಾಗಲು ತೆರೆದ ಬಾಗಿಲು. ಸಂತೋಷವೇ ಸಂಪತ್ತು ಎನ್ನುವುದನ್ನು ಹೇಳುವ, ಬದುಕು ಬದಲಾಗಲು ಆಲೋಚನೆ ಬದಲಾಗಲೇ ಬೇಕು ಎನ್ನುವುದನ್ನು ದ್ರಢವಾಗಿ ನಂಬಿರುವ ನಾವು ಪತ್ರಿಕೆ ಓದದವರನ್ನೂ ತಲುಪಲು, ನಮ್ಮ ಬದುಕನ್ನು ಬದಲಾಯಿಸಿದ ಸಂಗತಿ ಇತರರಿಗೂ ನೆರವಾಗಬೇಕು ಎನ್ನುವ ಕಾರಣಕ್ಕೆ, ಗುಣಮಟ್ಟದ ಜೀವನ ನಮ್ಮೆಲ್ಲರ ಹಕ್ಕು, ಅದನ್ನು ನಾವು ನಮ್ಮ ಮನಸ್ಸಿನ ಮೂಲಕವೇ ಹೊಂದಬಹುದು ಎನ್ನುವುದನ್ನು ತೆರೆದಿಡುವ ವಿನಮ್ರ ಪ್ರಯತ್ನವಿದು.

ಮಾಧ್ಯಮ ಕ್ಷೇತ್ರದಲ್ಲಿ ಸುಧೀರ್ಘ ಅನುಭವ ಇರುವ ಸಮಾನ ಮನಸ್ಕರ ಗುಂಪು ಇಲ್ಲಿದೆ. ನ್ಯೂರೋ ಸೈಂಟಿಸ್ಟ್, ಯೋಗಕ್ಷೇಮದ ಸ್ಥಾಪಕರಾದ ಡಾ. ಉಷಾ ವಸ್ತಾರೆ, ಲೇಖಕಿ, ಆಪ್ತಸಲಹೆಗಾರರಾದ ಡಾ.ಶಾಂತಾ ನಾಗರಾಜ್ ಸೇರಿದಂತೆ ಹಲವು ಕ್ಷೇತ್ರಗಳ ಪರಿಣಿತರು ಇಲ್ಲಿ ವಿಷಯ ತಜ್ಞರಾಗಿದ್ದಾರೆ.
ಬದಲಾವಣೆಗೆ ನಮ್ಮ ನಡಿಗೆಯಲ್ಲಿ ನಿಮ್ಮದೂ ಹೆಜ್ಜೆ ಇರಲಿ. ನಮ್ಮೊಂದಿಗೆ ನೀವೂ ಬನ್ನಿ. 'ಭರವಸೆ' ನೀವೇ ರೂಪಿಸುವ, ನಿಮ್ಮದೇ ವಾಹಿನಿ.


Bharavase

ಆಪ್ತ ಸಲಹೆಯ ಮಾದರಿಯಲ್ಲಿ , ಗ್ರೂಪ್ ಥೆರಪಿ ಯೂ ಆಗಬಹುದಾದ workshop

6 months ago | [YT] | 13

Bharavase

ಆಪ್ತ ಸಲಹೆಯ , ಥೆರಪಿ ಮಾದರಿಯಲ್ಲಿ , ಅತ್ಯಂತ ಕಡಿಮೆ ಜನರಿರುವ ಕಾರ್ಯಾಗಾರ .

7 months ago | [YT] | 10

Bharavase

ಆಪ್ತ ಸಲಹೆಯ , ಥೆರಪಿ ಮಾದರಿಯಲ್ಲಿ , ಅತ್ಯಂತ ಕಡಿಮೆ ಜನರಿರುವ ಕಾರ್ಯಾಗಾರ .

7 months ago | [YT] | 7

Bharavase

ಮತ್ತೊಂದು ಪೇರೆಂಟಿಂಗ್ ಕಾರ್ಯಾಗಾರ . ಸಂಪೂರ್ಣ ಉಚಿತ . ಆದರೆ ನೊಂದಣಿ ಮಾಡಿಕೊಳ್ಳುವುದು ಕಡ್ಡಾಯ . ದಯವಿಟ್ಟು ಇದರ ಪ್ರಯೋಜನ ಪಡೆಯಬೇಕಾಗಿ ಕೋರುವೆ

11 months ago | [YT] | 14

Bharavase

ಹದಿಹರೆಯದಲ್ಲಿ ಮಕ್ಕಳಲ್ಲಿ ತೊಂದರೆ ಇದೆ ಎಂದು ಬರುತ್ತಾರೆ . ಆದರೆ ಎಳೆ ಮಗುವಿನಲ್ಲಿಯೇ ಅದನ್ನು ಗುರುತಿಸುವ , ಬದಲಾಯಿಸಿಕೊಳ್ಳುವುದಕ್ಕೆ ಮುಂದಾದರೆ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು . ಇದಕ್ಕಾಗಿಯೇ ಅರ್ಲಿ ಪೇರೆಂಟಿಂಗ್ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ . ವಾತ್ಸಲ್ಯ ಹೆಸರಿನಲ್ಲಿಯೇ ಮಮತೆ ಇದೆ. ಸಾರಂಗ ಟ್ರಸ್ಟ್ ಅರ್ಲಿ ಪೇರೆಂಟಿಂಗ್ ಅಲ್ಲಿ ಕಾರ್ಯಾಗಾರ ನಡೆಸಿಕೊಡುತ್ತಿದೆ . ಸುಮಾರು ಎರಡು ದಶಕಗಳ ಅನುಭವ ಅವರದ್ದು . ದಯವಿಟ್ಟು ಬನ್ನಿ

1 year ago | [YT] | 8

Bharavase

ಪೇರೆಂಟಿಂಗ್ ಬಗೆಗೆ ಎಷ್ಟೊಂದು ವೀಡಿಯೋಸ್ ಮಾಡಿದ್ವಿ , ಆದರೂ ಜನರ ಪ್ರಶ್ನೆಗಳು ಕರಗಲಿಲ್ಲ . ಕೇವಲ ಸಮಸ್ಯೆ ಇದ್ದರೆ ಮಾತ್ರ workshop ಗೆ ಬರಬೇಕು ಎನ್ನುವುದು ಅಲ್ಲವೇ ಅಲ್ಲ . ನಮ್ಮನ್ನೇ ನಾವು ಅರ್ಥ ಮಾಡಿಕೊಳ್ಳಲು . ಮಕ್ಕಳನ್ನು ಅರಿಯುವ ಮೂಲಕ ನಾವೇ ನಮ್ಮನ್ನು ಅರಿಯುವುದು . ದಯವಿಟ್ಟು ಪಾಲ್ಗೊಳ್ಳಿ

1 year ago | [YT] | 10

Bharavase

ಬಹಳ ದಿನಗಳ ಬೇಡಿಕೆ ಇದು . ಕಾರ್ಯಗಾರ ಮಾಡಬೇಕು ಎನ್ನುವುದು . ಆಪ್ತಸಲಹೆಗೆ ಎಲ್ಲರಿಗೂ ಸಮಯ ಕೊಡುವುದಕ್ಕೆ ಸಾಧ್ಯ ಆಗತಾ ಇರಲಿಲ್ಲ . ಹಾಗಾಗಿ ಕಾರ್ಯಾಗಾರದ ಮೂಲಕ ನಮ್ಮನ್ನು ನಾವು ಅರಿಯುವುದಕ್ಕೆ ಅರ್ಥ ಮಾಡಿಸುವುದು . ಇದು ಒಂದು ರೀತಿಯಲ್ಲಿ ಆಲೋಚನೆಗಳನ್ನು ಟ್ರ್ಯಾಕ್ ಮಾಡುವುದು . ನನ್ನಲ್ಲಿ ಯಾವ ರೀತಿಯ ಆಲೋಚನೆ ಬರತಾ ಇದೆ ಎನ್ನವುದು ಅರ್ಥ ಆದರೆ ನನ್ನ ಜೀವನ ಯಾವ ದಿಸೆಯಲ್ಲಿ ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತದೆ. ನಕಾರತ್ಮಕ ಆಲೋಚನೆ ಇಟ್ಟಿಕೊಂಡು ಸಕಾರಾತ್ಮಕ ಬದುಕು ನಿರೀಕ್ಷೆ ಮಾಡಿದರೆ ಅದು ಎಂದು ಸಿಗಲಾರದು . ಆದರೆ ನಾವು ನಕಾರಾತ್ಮಕವಾಗಿ ಯೋಚಿಸುತ್ತಿದ್ದೇವಾ ? ಇಲ್ಲವಾ ? ಗೊತ್ತಾಗುವುದು ಹೇಗೆ? ನಮ್ಮ ಸೆಲ್ಫ್ ಅವೇರ್ನೆಸ್ ಹೆಚ್ಚಿಸಿಕೊಳ್ಳುವ ಮೂಲಕ . ಅಂತಹ ಆಶಯವೆ ಈ ಕಾರ್ಯಾಗಾರದ್ದು . ದಯವಿಟ್ಟು ಭಾಗವಹಿಸಿ .

1 year ago | [YT] | 7

Bharavase

ಸಖಿಯರ ಸುಖ ಜೀವನಕ್ಕೆ ಸಕಾರಾತ್ಮಕ ಚಿಂತನೆ

Phone-in programme held by Doordarshan Chandana


https://www.youtube.com/watch?v=p5hPR...

3 years ago | [YT] | 4