ಕನ್ನಡದ ಪ್ರಮುಖ ಸುದ್ದಿ ಕನ್ನಡ 9 ನ್ಯೂಸ್ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟನೆ.ನೈಜ.ನಿಖರ ಸುದ್ದಿಗಾಗಿ ಉತ್ತರ ಕರ್ನಾಟಕ ಧ್ವನಿ ಕನ್ನಡ 9ನ್ಯೂಸ್ ಅನ್ನು ಫಾಲೋ ಮಾಡಿ, ಸಬ್‌ಸ್ಟೈಬ್ ಮಾಡಿ..
====
Thank You For Watching! Do Not Forget To Like |

Comment | Share 🙏
Welcome to Kannada's leading news Kannada 9 News YouTube channel. It brings you a comprehensive news view of the state very quickly.
In addition, it provides the most important national and international news, explainer videos in Kannada, accurately and clearly.
Not only news but entertainment, sports news related videos are also available on our channel.
Follow Uttar Karnataka Voice Kannada 9News, Subscribe for clear.real.accurate news..


Kannada9News

ಆರೋಗ್ಯವಂತ ಮಗು, ಸಶಕ್ತ ಭಾರತ!

ನಿಮ್ಮ ಮನೆಯ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿ. ಕೇವಲ ಎರಡು ಹನಿ ಲಸಿಕೆ, ನಿಮ್ಮ ಮಗುವನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸುತ್ತದೆ. ಪೋಲಿಯೊ ಮುಕ್ತ ಭಾರತವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ.

ಪುಟ್ಟ ಹೆಜ್ಜೆಗಳು ಸುರಕ್ಷಿತವಾಗಿರಲಿ, ನಾಳಿನ ಭವಿಷ್ಯ ಉಜ್ವಲವಾಗಿರಲಿ!

#PulsePolio #PolioDropsJune28 #HealthyIndia

1 week ago | [YT] | 18

Kannada9News

ಗೋಕಾಕ್ ಫಾಲ್ಸ್ ಬರಗಾಲದ ಚಿತ್ರ: ಎಲ್ಲೆಡೆ ಖಾಲಿ ಖಾಲಿ, ನೀರಿಲ್ಲದೆ ಬಣಗುಟ್ಟಿದ ಜಲಪಾತ.

#GokakFalls #ಗೋಕಾಕ್_ಫಾಲ್ಸ್ #Belagavi
#KarnatakaNews #ಕರ್ನಾಟಕ_ಸುದ್ದಿ #ಬರಗಾಲ
#Drought #RainUpdate #Nature #WaterCrisis
#KannadaNews #BreakingNews
#Gokak #NewsUpdate #ViralVideo #TrendingNow #KannadaYouTube
#SouthIndia #MonsoonUpdate

1 week ago | [YT] | 11

Kannada9News

ದೂರದೃಷ್ಟಿಯ ಆಡಳಿತಗಾರ, ಇಂದಿನ ಜಾಗತಿಕ ತಂತ್ರಜ್ಞಾನ ನಗರಿ ಬೆಂಗಳೂರಿನ ಮಹಾ ಶಿಲ್ಪಿ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ಗೌರವ ನಮನಗಳು. ನಾಡಿನ ಸಂಸ್ಕೃತಿ, ಕೆರೆ-ಕಟ್ಟೆಗಳು ಹಾಗೂ ಯೋಜನಾಬದ್ಧ ನಗರೋತ್ಥಾನಕ್ಕೆ ಅವರು ನೀಡಿದ ಕೊಡುಗೆ ಇತಿಹಾಸದ ಸುವರ್ಣಾಕ್ಷರಗಳಲ್ಲಿ ಅಜರಾಮರ.

#Nadaprabhu | ​#Kempegowda #Kannada9news

1 week ago | [YT] | 16

Kannada9News

ಪರಿಸರವೇ ಜೀವ, ಪರಿಸರವೇ ನಮ್ಮ ಉಸಿರು!

ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ, ಮುಂದಿನ ಪೀಳಿಗೆಗೆ ಹಸಿರು ಭವಿಷ್ಯ ನೀಡುವುದು ನಮ್ಮ ಜವಾಬ್ದಾರಿ.

ವಿಶ್ವ ಪರಿಸರ ದಿನದಂದು ಹಸಿರು ಭೂಮಿಗಾಗಿ, ಸ್ವಚ್ಛ ಪರಿಸರಕ್ಕಾಗಿ ಹಾಗೂ ಸುಸ್ಥಿರ ಬದುಕಿಗಾಗಿ ಸಂಕಲ್ಪ ಮಾಡೋಣ.

#ವಿಶ್ವಪರಿಸರದಿನ #WorldEnvironmentDay #Lakhanjarkiholi #Kannada9news

1 month ago | [YT] | 27

Kannada9News

ರಾಹುಲ್ ಗಾಂಧಿ ಭೇಟಿ ಮಾಡಿದ ಸಿದ್ದರಾಮಯ್ಯ


#kannada9news

1 month ago | [YT] | 21

Kannada9News

ರಾಹುಲ್ ಗಾಂಧಿಯವರ ಭೇಟಿ ಬಳಿಕ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಸಚಿವರಾದ ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹಾಜರಿದ್ದರು.

1 month ago | [YT] | 30

Kannada9News

ಗೋಕಾಕ ಸಾಹುಕಾರ್‌ಗೆ ದೊಡ್ಡ ಹುದ್ದೆ.? KPCC ರೇಸ್‌ನಲ್ಲಿ ಸತೀಶ್ ಜಾರಕಿಹೊಳಿ...

https://youtu.be/5yaJ4r9DFiA

1 month ago | [YT] | 35

Kannada9News

ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ
ಗೋಕಾಕ :- ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಇಲಾಖೆಯಿಂದ ಗೋಕಾಕ ತಾಲ್ಲೂಕಿನ ರೈತರಿಗೆ ಸಹಾಯ
ಧನದಡಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ವಿತರಣೆ ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ರಮೇಶ.ಲ.ಜಾರಕಿಹೊಳಿ ಶಾಸಕರು-
ಗೋಕಾಕ ಇವರು ಚಾಲನೆ ನೀಡಿದರು.
ಮಂಗಳವಾರದಂದು ತಮ್ಮ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ವಿತರಣೆ
ಮಾಡಲಾಗುವ ಬಿತ್ತನೆ ಬೀಜ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರು ಬೀಜೋಪಚಾರ ಮಾಡಿ
ಹದವಾದ ಮಳೆಯಾದ ಮೇಲೆ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ಹೇಳಿದರು. ಅಲ್ಲದೇ ಗೋಕಾಕ
ತಾಲ್ಲೂಕಗಳ ರೈತರಿಗೆ ಸಾಕಾಗುವ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರೈತರು
ಗುಣಮಟ್ಟದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ಪಡೆದು ಹೆಚ್ಚಿನ ಇಳುವರಿ ತೆಗೆಯುವಂತೆ ಹೇಳಿದರು.
ಸದರಿ ಕಾರ್ಯಕ್ರಮದಲ್ಲಿ ಹಾಜರಿದ್ದ ಶ್ರೀ ಎಂ.ಎಂ.ನದಾಫ್ ಸಹಾಯಕ ಕೃಷಿ ನಿರ್ದೇಶಕರು
ಗೋಕಾಕರವರು ಮಾತನಾಡಿ 2026-273 ಸಾಲಿನ ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ
ದೃಷ್ಠಿಯಿಂದ ರೈತ ಸಂಪರ್ಕ ಕೇಂದ್ರ ಗೋಕಾಕ, ಕೌಜಲಗಿ ಬೀಜ ಮಾರಾಟ ಕೇಂದ್ರಗಳ ಜೊತೆಗೆ ಅಂಕಲಗಿ,
ಉರುಬಿನಹಟ್ಟಿ, ಖನಗಾಂವ, ಬಳೋಬಾಳ, ಅಡಿಬಿಟ್ಟಿ ಉಪ ಮಾರಾಟ ಕೇಂದ್ರಗಳಲ್ಲಿಯೂ ಬೀಜಗಳನ್ನು
ವಿತರಿಸಲಾಗುತ್ತಿದ್ದು. ರೈತರಿಗೆ ಬೇಕಾಗುವ ಸಾಕಷ್ಟು ಪ್ರಮಾಣದಲ್ಲಿ ಸೋಯಾಬಿನ್, ಗೋವಿನಜೋಳ, ಹೆಸರು,
ಸೂರ್ಯಕಾಂತಿ, ಹೈಬ್ರಿಡ್ ಜೋಳ ಇತ್ಯಾದಿ ಬೆಳೆಗಳ ಬೀಜಗಳನ್ನು ದಾಸ್ತಾನು ಮಾಡಿ ವಿತರಿಸಲಾಗುತ್ತಿದ್ದು.
ರೈತರು ಬಿತ್ತನೆ ಬೀಜಗಳನ್ನು ಪಡೆಯಲು ಆಧಾರ ಕಾರ್ಡ್, ಉತಾರ,ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ತೆಗೆದುಕೊಂಡು
ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕು. ಅಲ್ಲದೇ ಸೋಯಾಬಿನ್ ಬಿತ್ತನೆ ಮಾಡಲು ಜೂನ್ 1 ರಿಂದ
ಜುಲೈ 15ರ ವರೆಗೆ ಸಮಯಾವಕಾಶ ಇದ್ದು ಹದವಾದ ಮಳೆಯಾದ ಮೇಲೆ ಬಿತ್ತನೆ ಮಾಡಬೇಕು ನೀರಾವರಿ ಸೌಲಭ್ಯ
ಇರುವವರು ಮೊದಲು ನೀರು ಹಾಯಿಸಿ ನಂತರ ಬಿತ್ತನೆ ಮಾಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನ್ನವರ ಶಾಸಕರ
ಕಚೇರಿಯ ಸುರೇಶ ಸನದಿ, ಲಕ್ಷ್ಮೀಕಾಂತ ಎತ್ತಿಮನಿ, ಕೃಷಿ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಗೂ ರೈತರು
ಹಾಜರಿದ್ದರು.

1 month ago | [YT] | 19

Kannada9News

ಗೋಕಾಕ: ಇಲ್ಲಿಯ ಮಹಾಲಿಂಗೇಶ್ವರ ನಗರದ ಜುಮ್ಮಾ ಮಸೀದಿ ಹತ್ತಿರ ಭುಧವಾರ ಸುರಿದ ಭಾರಿ ಮಳೆಗೆ ಮನೆ ಉರುಳಿ ಬಿದ್ದಿರುವ ಘಟನೆ ಜರುಗಿದೆ
ಅದೃಷ್ಟವಶತ್ ಮಳೆಗೆ ಉರುಳಿಬಿದ್ದಿರುವ ಮನೆಯಲ್ಲಿ ಯಾರು ವಾಸ ವಿರಲಿಲ್ಲ. ಮನೆ ಉರುಳಿ ಬೀಳುವ ಹಂತದಲ್ಲಿ ಇರುವ ಬಗ್ಗೆ ನಗರ ಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದುರಿದ್ದಾರೆ.
#gokak #BelagaviNews #rain #Kannada9news

1 month ago | [YT] | 4

Kannada9News

ಶಿಗ್ಗಾಂವಿ ದರ್ಗಾ ರಸ್ತೆಗೆ ₹5 ಕೋಟಿ | ಸಚಿವ ಸತೀಶ್ ಜಾರಕಿಹೊಳಿ‌ಗೆ ಧರ್ಮಗುರುಗಳ

https://youtu.be/HU6ek-tJIy4?si=1uLQt...

2 months ago | [YT] | 10