eedina

#ಈದಿನನಲ್ನುಡಿ

ಸೊಗಸಿನ ಮೊಗಕ್ಕೂ ಸರಿಯುತ್ತವೆ ಕಾಲದ ಸುಕ್ಕುಗಳು, ಸದೃಢ ಮೈಕಟ್ಟೂ ಕರಗುವುದು ಒಂದು ದಿನ, ಆದರೆ ಸುಂದರ ಮನಸಿಗೆ ಮುಪ್ಪು ಎಂಬುದೇ ಇಲ್ಲ.

#QuoteOfTheDay #ಕನ್ನಡ #Kannada #ಸುಂದರಮನಸ್ಸು #InnerBeauty #ಜೀವನಪಾಠ #LifeLessons #ಸ್ಫೂರ್ತಿ #Motivation

3 hours ago | [YT] | 55

eedina

ಸಂಗೀತ ಲೋಕದ ಅಪೂರ್ವ ದನಿ ಮೂಕ

ಗಾನ ಕೋಗಿಲೆ ಎಸ್‌ ಜಾನಕಿ ಇನ್ನಿಲ್ಲ

#LegendSJanaki #RIPSJanaki #Tribute #MusicLegend #IndianMusic

12 hours ago | [YT] | 145

eedina

ಆಗುಂಬೆ ಸುರಂಗ, ಶೃಂಗೇರಿ ರೈಲು ಮಾರ್ಗ: ವಯನಾಡು ಮಾದರಿ ದುರಂತಕ್ಕೆ ಮುನ್ನುಡಿಯೇ?

ಪಶ್ಚಿಮ ಘಟ್ಟಗಳ ಒಡಲಲ್ಲಿ ಮಾನವನ ಹಸ್ತಕ್ಷೇಪ ಉಂಟು ಮಾಡಬಹುದಾದ ದುರಂತಗಳಿಗೆ ಕೇರಳದ ವಯನಾಡಿನ ಭೂ ಕುಸಿತ ಅಂಗೈ ಮೇಲಿನ ಹುಣ್ಣಿನಂತೆ. 2024ರ ವಯನಾಡು ಭೂಕುಸಿತದ ಸಂದರ್ಭದಲ್ಲಿ ಮಾದವ್‌ ಗಾಡ್ಗಿಲ್‌ ವರದಿಯ ಕುರಿತು ದೇಶಾದ್ಯಂತ ಚರ್ಚೆಗಳು ನಡೆದವು. ಗಾಡ್ಗಿಲ್‌ ವರದಿಯನ್ನು ಅರಗಿಸಿಕೊಳ್ಳಲು ವಿಫಲವಾದ ಕೇರಳ ಸರ್ಕಾರ ಅಕ್ಕಪಕ್ಕದ ರಾಜ್ಯಗಳಿಗೆ ಹಿರಿಯಕ್ಕನ ಹಾಗೇ ಕಂಡದ್ದು ನಿಜ.

ಬರಹ-ಸರಿತ ಎನ್

#Agumbe #Sringeri #WesternGhats #Wayanad #Landslide #EnvironmentalImpact #Ecology #Biodiversity #RailwayProject #TunnelProject #Conservation #ClimateChange #SustainableDevelopment #EnvironmentalProtection #Karnataka #Kerala #PublicPolicy #BreakingNews #Eedina #SarithaN

14 hours ago | [YT] | 24

eedina

ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಮಿಕರಿಂದ 'ಕರಾಳ ದಿನ' ಮುಷ್ಕರ: ರಾಜ್ಯದಲ್ಲಿ ಮೊಳಗಿದ ಹಕ್ಕುಗಳ ಧ್ವನಿ

*ಸ್ಕೀಂ ನೌಕರರು ಜುಲೈ 10ರಂದು ನಡೆಸಿದ ಹೋರಾಟವು ಸಮಾಜದ ಎಲ್ಲ ವರ್ಗಗಳಿಗೆ ಎಚ್ಚರಿಕೆಯಾಗಬೇಕು. ಮಹಿಳಾ ಕಾರ್ಮಿಕರ 'ಪಿಂಕ್ ವೇವ್' ಹೋರಾಟಗಳು ಬಲಗೊಳ್ಳುತ್ತಿದ್ದು, ಸರ್ಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಈ 'ಕರಾಳ ದಿನ'ಗಳು ದೀರ್ಘಕಾಲೀನ ಹೋರಾಟಕ್ಕೆ ಕಾರಣವಾಗುತ್ತವೆ.

ವರದಿ : ರೇಖಾ ಹಾಸನ

#Anganwadi #ASHAWorkers #MiddayMealWorkers #WorkersRights #LabourRights #WomenWorkers #TradeUnion #Protest #Strike #SocialJustice #PublicWelfare #Karnataka #KarnatakaNews #Government #Grassroots #WomenEmpowerment #BreakingNews #India #Eedina #RekhaHasan

14 hours ago | [YT] | 16

eedina

ವಿಶ್ವದಲ್ಲಿಯೇ ಅತಿ ಹೆಚ್ಚು ಅಪಾರ್ಥಕ್ಕೆ ಒಳಗಾದ ದೇಶ ಇರಾನ್‌- ಪತ್ರಕರ್ತ ಸೌರಭ್‌ ಶುಕ್ಲಾ



ನಾನು ವರದಿಗೆ ಹೋಗಿದ್ದಾಗ, ಯುದ್ಧದ ಆತಂಕದ ನಡುವೆಯೂ ಮಾರುಕಟ್ಟೆಯೊಂದಕ್ಕೆ ಸಂಜೆಯ ವೇಳೆಯಲ್ಲಿ ನೂರಾರು ಮಹಿಳೆಯರು ದಿನಸಿ ಖರೀದಿಸಲು ಹೋಗುತ್ತಿದ್ದರು. ಆದರೆ ಅವರಲ್ಲಿ ಯಾರೊಬ್ಬರೂ ಹಿಜಾಬ್‌ ಧರಿಸಿರಲಿಲ್ಲ. ಇರಾನ್‌ನಲ್ಲಿ ಹಿಜಾಬ್‌ ಧರಿಸಬೇಕು ಎಂಬ ನಿಯಮ ಇದೆ. ಆದರೆ ಒತ್ತಾಯದ ಅನುಷ್ಠಾನ ಇಲ್ಲ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಗಂಡುಮಕ್ಕಳಿಗೆ ಮೀಸಲಾತಿ ಕೊಡಬೇಕಾದ ಪರಿಸ್ಥಿತಿ ಇದೆ.

#Iran #SaurabhShukla #MiddleEast #IranNews #Journalism #GroundReport #GlobalAffairs #WorldNews #InternationalRelations #WomenEducation #Hijab #PublicOpinion #CurrentAffairs #Geopolitics #MediaPerspective #BreakingNews #NewsAnalysis #India #Eedina #Trending

14 hours ago | [YT] | 43

eedina

BREAKING NEWS

ವಿಯೆಟ್ನಾಂನಲ್ಲಿ ಭಾರತೀಯ ಪ್ರವಾಸಿಗರಿದ್ದ ಬೋಟ್ ಮಗುಚಿ 15 ಮಂದಿ ಸಾವು

ಅಪಘಾತಕ್ಕೀಡಾದ ಈ ಬೋಟ್‌ನಲ್ಲಿ ಒಟ್ಟು 32 ಮಂದಿ ಭಾರತೀಯ ಪ್ರವಾಸಿಗರು ಹಾಗೂ ನಾಲ್ವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ದುರಂತದ ಬೆನ್ನಲ್ಲೇ ಸ್ಥಳೀಯ ಆಡಳಿತವು ನಾಪತ್ತೆಯಾಗಿರುವವರಿಗಾಗಿ ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ರಕ್ಷಣಾ ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ.

#BreakingNews #Vietnam #BoatAccident #IndianTourists #RescueOperation #TravelNews #MaritimeAccident #EmergencyResponse #India #VietnamNews #WorldNews #AccidentNews #SearchAndRescue #InternationalNews #TouristSafety #NewsUpdate #GlobalNews #Tragedy #Eedina #LatestNews

17 hours ago | [YT] | 11

eedina

ಮೋದಿ ಪತ್ರಿಕಾಗೋಷ್ಠಿ ಏಕೆ ನಡೆಸುವುದಿಲ್ಲ; ಪ್ರಧಾನಿ ನ್ಯೂಜಿಲೆಂಡ್ ಭೇಟಿ ವೇಳೆ ಪತ್ರಕರ್ತನ ಪ್ರಶ್ನೆ?

ಇದೇ ರೀತಿಯ ಪ್ರಶ್ನೆಯೊಂದು ಪ್ರಧಾನಿಯವರ ನಾರ್ವೆ ಭೇಟಿಯ ಸಂದರ್ಭದಲ್ಲಿಯೂ ಎದುರಾಗಿತ್ತು. ಮೇ ತಿಂಗಳಲ್ಲಿ ಓಸ್ಲೋದಲ್ಲಿ ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ (Jonas Gahr Støre) ಅವರೊಂದಿಗಿನ ಜಂಟಿ ಮಾಧ್ಯಮಗೋಷ್ಠಿ ಮುಗಿಸಿ ತೆರಳುವ ವೇಳೆ, ಹೆಲ್ಲೆ ಲಿಂಗ್ (Helle Lyng) ಎಂಬ ಪತ್ರಕರ್ತೆ ಪ್ರಧಾನಿ ಮೋದಿಯವರು ಪತ್ರಕರ್ತರ ಪ್ರಶ್ನೆಗಳಿಗೆ ಏಕೆ ಉತ್ತರಿಸುವುದಿಲ್ಲ ಎಂದು ಕೂಗಿ ಕೇಳಿದ್ದರು

#NarendraModi #Modi #PressConference #Journalism #MediaFreedom #NewZealand #Norway #Oslo #HelleLyng #JonasGahrStore #IndianPolitics #PoliticalNews #PressFreedom #Democracy #MediaQuestions #PrimeMinister #BreakingNews #India #PoliticalDebate #Eedina

18 hours ago | [YT] | 287

eedina

ಫುಟ್‌ಪಾತ್ ಒತ್ತುವರಿ ತೆರವು: ವಿಜಯೇಂದ್ರ ನಿಲುವಿಗೆ ಸ್ವಪಕ್ಷೀಯರಿಂದಲೇ ವಿರೋಧ, ಬಡ ವ್ಯಾಪಾರಿಗಳ ರಕ್ಷಣೆಗೆ ಸಾರ್ವಜನಿಕರ ಆಗ್ರಹ


ಬೀದಿಬದಿ ವ್ಯಾಪಾರಿಗಳು ಫುಟ್‌ಪಾತ್‌ನ ಒಂದು ಸಣ್ಣ ಮೂಲೆಯಲ್ಲಿ ಕುಳಿತು, ರಸ್ತೆಯಲ್ಲಿ ಓಡಾಡುವ ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯಾಪಾರ ಮಾಡುತ್ತಾರೆಯೇ ಹೊರತು, ಶಾಶ್ವತವಾಗಿ ಸಾರ್ವಜನಿಕ ಜಾಗವನ್ನು ಕಬಳಿಸುವ ಹುನ್ನಾರ ಅವರದ್ದಾಗಿರುವುದಿಲ್ಲ. ಬೃಹತ್ ಒತ್ತುವರಿದಾರರನ್ನು ಮಟ್ಟಹಾಕುವ ಭರದಲ್ಲಿ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಹಾಗೂ ಅವರ ದೈನಂದಿನ ಬದುಕನ್ನು ಕಸಿದುಕೊಳ್ಳುವ ಕೆಲಸ ನಡೆಯಬಾರದು.

#FootpathVendors #StreetVendors #VendorRights #Livelihood #UrbanDevelopment #PublicSpaces #Encroachment #Karnataka #KarnatakaPolitics #BYVijayendra #SmallBusinesses #SocialJustice #PublicInterest #CityGovernance #InclusiveCities #BreakingNews #CivicIssues #India #KarnatakaNews #Eedina

18 hours ago | [YT] | 7

eedina

ರಾಮಕೃಷ್ಣ ಹೆಗಡೆ ಉಚ್ಚಾಟನೆ ತಪ್ಪು- 30 ವರ್ಷಗಳ ನಂತರ ಲಾಲು ವಿಷಾದ !
ಸರಿಯಾಗಿ 30 ವರ್ಷಗಳ ಹಿಂದೆ ನಡೆದ ರಾಷ್ಟ್ರಮಟ್ಟದ ರಾಜಕಾರಣ ಅಂಗಳದ ದ್ವೇಷದ ಈ ಕಹಿ ಘಟನೆ ಕುತೂಹಲಕಾರಿಯಾಗಿದೆ. ಬಹಳ ಮುತ್ಸದ್ದಿ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರೇ ಮುಂದಿನ ಪ್ರಧಾನಿ ಎಂದು ಆಗ ದೆಹಲಿಯ ಪತ್ರಿಕೆಗಳೆಲ್ಲ ಹಾಡಿ ಹೊಗಳುತ್ತಿದ್ದವು. ಇನ್ನೇನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವದೊಂದೇ ಬಾಕಿ ಎನ್ನುವ ವಾತಾವರಣ ಕೂಡ ಸೃಷ್ಟಿಯಾಗಿತ್ತು. ಆದರೆ, ನಡೆದದ್ದೇ ಬೇರೆ. ಲಾಲೂ ಪ್ರಸಾದ ಯಾದವ್ ದೇವೇಗೌಡರನ್ನು ಪ್ರಧಾನಿ ಎಂದು ಘೋಷಿಸಿಬಿಟ್ಟರು.

ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

#RamakrishnaHegde #LaluPrasadYadav #HDDeveGowda #IndianPolitics #PoliticalHistory #KarnatakaPolitics #FormerPrimeMinister #JanataDal #India #PoliticalAnalysis #HistoricPolitics #Leadership #Democracy #BreakingNews #PoliticalNews #30YearsLater #KarnatakaNews #IndianHistory #Eedina #MallikarjunHeggalagi

18 hours ago | [YT] | 41

eedina

ಅಲೆಮಾರಿ, ಆದಿವಾಸಿಗಳ ಅಭಿವೃದ್ಧಿಗೆ ವೇಗ: 15 ದಿನಗಳಲ್ಲಿ ಸರ್ಕಾರಕ್ಕೆ ಸಮಗ್ರ ವರದಿ

ಅಲೆಮಾರಿ ಮತ್ತು ಆದಿವಾಸಿ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿ ಹಾಗೂ ಹಿತರಕ್ಷಣೆಗಾಗಿ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದ್ದು, ಮುಖ್ಯವಾಗಿ ಆರ್‌ಟಿಇ (RTE) ಕೋಟಾದಡಿಯಲ್ಲಿ ಈ ಸಮುದಾಯದ ವಿದ್ಯಾರ್ಥಿಗಳಿಗೆ ಶೇ. 10ರಷ್ಟು ಮೀಸಲಾತಿ ಹಾಗೂ ಪರಿಶಿಷ್ಟ ಜಾತಿಯ ಅಸ್ಪೃಶ್ಯ 49 ಅಲೆಮಾರಿ ಸಮುದಾಯಗಳಿಗೆ ಶೇ. 1ರಷ್ಟು ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಲಾಗಿದೆ

#Karnataka #NomadicTribes #Adivasi #TribalRights #IndigenousCommunities #SocialJustice #InclusiveDevelopment #EducationForAll #RTE #Reservation #AffirmativeAction #CommunityDevelopment #PublicPolicy #Government #KarnatakaNews #SocialEquity #MarginalizedCommunities #BreakingNews #India #Eedina

21 hours ago | [YT] | 17