"My Little Things" would be sharing books related videos like reading, collection, and recommendations and it includes travelling, gardening, and cooking-related content.
Please join me on this journey, as I am a person who is always curious and a constant learner and would love to share my learning with the world
If you find my channel useful and entertaining I will appreciate it if you can subscribe, like and share my videos.
Disclaimer - All the content of my videos is purely for information purposes. I do not intend to hurt anyone's feelings or opinions.


My Little Things

ಕನ್ನಡ ಸಾಹಿತ್ಯ ಸಮ್ಮೇಳಕ್ಕೆ ಓಮ್ಮೆ ಆದ್ರೂ ಹೋಗಬೇಕು ಅನ್ನೋದು ನನ್ನ ಬಹುದಿನದ ಕನಸು. ಆದ್ರೆ ಈ ವರ್ಷ ಕೂಡ ಈ ಆಸೆ ನೆರವೇರ್ತ ಇಲ್ಲ. ಆದ್ರೆ ನನ್ನ ಪುಟ್ಟ ಕೂಸೊಂದು ಸಮ್ಮೇಳನದಲ್ಲಿ ಹೋಗಿ ಕೂತಿದೆ ಅನ್ನೋದೇ ನನಗೆ ದೊಡ್ಡ ಖುಷಿ.
ಹಿಂದಿನ ವರ್ಷ ಸಮ್ಮೇಳನ ನಡೆದಾದ ಇಂತಹ ಕನಸು ಕೂಡ ನನಗೆ ಇರಲಿಲ್ಲ.
ಸ್ಟಾಲ್ ನಂಬರ್ 62-65 ಬಿ ಬ್ಲಾಕ್, ಹರಿವು ಬೂಕ್ಸ್ ಅಲ್ಲಿ
" ಕನ್ನಡ ಅಂಕಲಿಪಿ" ಪುಸ್ತಕ ಸಿಗತ್ತೆ. ಹೋಗಿ ಮಳಿಗೆಗೆ ಭೇಟಿ ಕೊಡಿ. ಪುಸ್ತಕ ಖರೀದಿ ಮಾಡಿ. ಜೊತೆಗೆ ಅಲ್ಲಿ ಒಂದಿಷ್ಟು ಚಂದ ಚಂದದ ಮಕ್ಕಳ ಪುಸ್ತಕ ಇದೆ. ನಿಮ್ಮ ಮಕ್ಕಳಿಗೆ ಕೊಡಿಸಿ.
ಸಮ್ಮೇಳನದ ಧ್ಯೇಯೋದ್ದೇಶವೇ ಕನ್ನಡವನ್ನು ಬೆಳೆಸುವದು...ಅವರ ಕೆಲಸ ಅವರು ಮಾಡಲಿ.
ನಾವು ನಮ್ಮ ಮಕ್ಕಳನ್ನು ಕನ್ನಡ ಓದುಗರನ್ನಾಗಿ ಮಾಡೋಣ. ಕನ್ನಡ ತನ್ನಿಂದ ತಾನಾಗೇ ಬೆಳೆಯುತ್ತದೆ.

#ಕನ್ನಡಸಾಹಿತ್ಯಸಮ್ಮೇಳನ #kannadabooks #kannadasahityasammelana

1 year ago | [YT] | 12

My Little Things

ಜನ ಜನ ಜನ... ಜನ ಜಾತ್ರೆ.
ಕನ್ನಡ ಪುಸ್ತಕಗಳ ಓದುವವರು ಇಲ್ಲ ಅಂತ ಸಪ್ಪೆ ಮೋರೆ ಹಾಕಿ ಹೇಳುತ್ತಾ ಇದ್ದ ಲೇಖಕರು...
ಇವತ್ತು
ಲೆಖಕರು "ತಾನು ತಂದಷ್ಟೂ ನನ್ನ ಪುಸ್ತಕ ಖಾಲಿ ಆಗಿ ಹೋಯ್ತು" ಅಂತ ಹೇಳುತ್ತ ಇದ್ದ ದೃಶ್ಯ ಕಾಣುತ್ತಾ ಇತ್ತು.
ನಾನು ಕೂಡಾ ನೋಡು ನೋಡುತ್ತಾ ಇದ್ದಂತೆ ನನ್ನ ಪುಟಾಣಿ ಅಂಕಲಿಪಿ ಪುಸ್ತಕ ಕೂಡ ಪಟ ಪಟ ಅಂತ ಖಾಲಿ ಆಗಿ ಹೋಯ್ತು.
ಎಲ್ಲರೂ ಚೀಲದಲ್ಲಿ ಪುಸ್ತಕಗಳನ್ನು, ಸಂತೆಯಲ್ಲಿ ತರಕಾರಿಗಳನ್ನು ತುಂಬಿಸಿ ಕೊಂಡು ಹೋದಂತೆ ಹೊರಟಿದ್ದರು.
ಸಾಹಿತ್ಯ ಸಮ್ಮೇಳನಕ್ಕೆ ಸಡ್ಡು ಹೊಡೆಯುವಂತೆ ಸಂತೆಯನ್ನು ಆಯೋಜಿಸ ವೀರಲೋಕ ತಂಡದ ಶ್ರಮಕ್ಕೆ ದೊಡ್ಡ ವಂದನೆಗಳು...
#ಪುಸ್ತಕಸಂತೆ #veeraloka

1 year ago | [YT] | 18

My Little Things

ಅಂಕಲಿಪಿ ಬಿಡುಗಡೆ ಆಗಿ ಇಂದಿಗೆ ಮೂರು ತಿಂಗಳಾಯಿತು...
ಇಲ್ಲಿವರೆ ಆಗಿದ್ದೆಲ್ಲ ತುಂಬಾ ಚಂದದ ಅನುಭವ.
ಜೊತೆಗೆ ಎಲ್ಲರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ.
ಕೆಲವೊಂದು ಸಾಹಿತ್ಯದ ಪ್ರೋಗ್ರಾಂಗಳಿಗೆ ಹೋದಾಗ ನಿಲ್ಲಿಸಿ ಪುಸ್ತಕದ ಬಗ್ಗೆ ಮಾತನಾಡುತ್ತಾರೆ.
ಖರೀದಿ ಮಾಡಿದವರೆಲ್ಲ ಅನುಭವ ಹಂಚಿಕೊಂಡಿದ್ದಾರೆ, ಪುಟಾಣಿಗಳ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅದೆಲ್ಲ ನನ್ನ ಸಾರ್ಥಕತೆಯ ಕ್ಷಣಗಳು...

ಮಕ್ಕಳ ಕೈಯಲ್ಲಿ ಈ ಪುಸ್ತಕ ನೋಡಿದಾಗಲೆಲ್ಲ ಒಂದಿಷ್ಟು ಭರವಸೆಯ ಬಾವ ಮೂಡಿದೆ....

ಈ ಪುಸ್ತಕ ಇನ್ನೂ ಜಾಸ್ತಿ ಮಕ್ಕಳನ್ನು ತಲುಪಲಿ.
ಅದಕ್ಕಾಗಿ ಎಲ್ಲಾ online linkಗಳನ್ನು ಕೋಟ್ಟಿರುತ್ತೇನೆ.

ಹರಿವು ಬುಕ್ಸ್
harivubooks.com/products/kannada-ankalipi-children…

ಅಮೆಜಾನ್
amzn.in/d/0LTdxkJ

ಸ್ವಪ್ನ online
www.sapnaonline.com/books/kannada-ankalipi-ashwini…

1 year ago | [YT] | 12

My Little Things

ನಾಡಿನ ಸಮಸ್ತ ಜನರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...
ನವೆಂಬರ್ ತಿಂಗಳು ಪೂರ್ತಿ ಕರ್ನಾಟಕದಲ್ಲಿ ಹಬ್ಬದ ವಾತಾವರಣ. ಎಲ್ಲಾ ಕಡೆ ಕನ್ನಡವನ್ನ ಎತ್ತಿ ಆಡಿಸುತ್ತಾರೆ... ( ನವೆಂಬರ್ ತಿಂಗಳು ಮಾತ್ರ ಈ ವಾತಾವರಣ ಇರೋದು ನಮ್ಮ ದುರಾದೃಷ್ಟ)
ನಾನೂ ಕೂಡ ಏನಾದರೂ ವಿಭಿನ್ನವಾಗಿ ಆಚರಿಸ ಬೇಕು ಅಂತ.
ನಾನು ಏನು ಮಾಡಬಹುದು ಅಂತ ಯೋಚಿಸ್ತಾ ಇದ್ದಾಗ. ನಾನು ಕನ್ನಡ ಪುಸ್ತಕ ಒದತ್ತೇನೆ. ಅದರಲ್ಲೇ ಏನಾದ್ರೂ ಮಾಡಬೇಕು ಅಂತ ಅಂದುಕೊಂಡೆ.

ಅದಕ್ಕೆ....

30 ದಿನ
30 ಪುಸ್ತಕ ಪರಿಚಯ

ಕನ್ನಡ ಉಳಿಬೇಕು, ಬೇಳಿಬೇಕು ಅಂದ್ರೆ

ಕನ್ನಡವನ್ನ ಓದಬೇಕು, ಬರೀಬೇಕು, ಬಳಸ ಬೇಕು....
ಕನ್ನಡ ಸಾಹಿತ್ಯವನ್ನು ಬೇಳೆಸ ಬೇಕು.

ಅದಕ್ಕೆ ನಾನು ನವೆಂಬರ್ ತಿಂಗಳು ಪೂರ್ತಿ ಪ್ರತಿ ದಿನ ಒಂದು ಪುಸ್ತಕ ಪರಿಚಯ ಮಾಡ್ತೇನೆ.
ಏಷ್ಟು ದಿನ ಮಾಡೋಕೆ ಆಗತ್ತೆ ಕಂಡಿತಾ ಗೊತ್ತಿಲ್ಲ. ಖಂಡಿತ ಒಂದು ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ.
ನಿಮ್ಮ ಸಹಕಾರ ಇರಲಿ..
ಆದಷ್ಟು like, share , comment, subscribe . ಇವಿಷ್ಟು ಜಾಸ್ತಿ ಜಾಸ್ತಿ ಬಂದ್ರೆ ಒಂದಿಷ್ಟು motivation ಸಿಗತ್ತೆ
ಇವತ್ತು ಒಂದು ಪುಸ್ತಕ ಪರಿಚಯ ಮಾಡಿದ್ದೇನೆ. ಹೇಗಿದೆ ಅಂದ comment ಮಾಡಿ.

ಅಶ್ವಿನಿ

2 years ago | [YT] | 20

My Little Things

ಹರಿವು ಪಬ್ಲಿಕೇಶನ್ ಹೊಸದಾಗಿ ಶುರು ಆದ ಸಂಸ್ಥೆ. ಆದ್ರೆ ತುಂಬಾ ಅಲ್ಪಾವಧಿಯಲ್ಲಿ ತುಂಬಾ ಒಳ್ಳೆ ಒಳ್ಳೆಯ ಜನಪ್ರಿಯ ಪುಸ್ತಕಗಳನ್ನು ಹೊರ ತಂದಿದೆ.
ಅದರಲ್ಲೂ ಮಕ್ಕಳ ಸಾಹಿತ್ಯದಲ್ಲಿ ಬಂದ ಒಂದೆರಡು ಪುಸ್ತಕಗಳು ತುಂಬಾ ಜನಪ್ರಿಯ ಆಗಿದೆ.
ಜೊತೆಗೆ ಬರೀ ಪುಸ್ತಕ ಮುದ್ರಣ ಮತ್ತು ಮಾರಾಟ ಅಂತ ಮಾಡದೆ ಸಾಹಿತ್ಯಕ್ಕೆ ಸಂಬಂಧಿಸಿದ ತುಂಬಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ತಾ ಇದ್ದಾರೆ.
Online ಮತ್ತು offline ಸೇವೆಯನ್ನು ತುಂಬಾ ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದ್ದಾರೆ.
ಕನ್ನಡ ಪುಸ್ತಕ ಲೋಕದಲ್ಲಿ ತುಂಬಾ ಬದಲಾವಣೆ ಆಗತ ಇದೆ. ಪುಸ್ತಕ ಮಾರಾಟಗಾರರು ತುಂಬಾ ತರಹದ ಪ್ರಯೋಗಗಳನ್ನು ಮಾಡತಾ ಇದ್ದಾರೆ.
ನಾನು ಕೂಡ ಇವರ ಬುಕ್ ಹೌಸ್ ಇಂದ ಪುಸ್ತಕ ತರಿಸಿದ್ದೇನೆ.
ಅವರ ಈ ವಿಶೇಷ ರಿಯಾಯಿತಿಯನ್ನ ಯಾರು ಬೇಕಾದ್ರೂ ಉಪಯೋಗಿಸಬಹುದು,
Online ಮತ್ತು offline ಕೂಡ ಬಳಸ ಬಹುದು. ನೀವು ಖರೀದಿಸಿದ ಬೆಲೆ ಮೇಲೆ 5% ರಿಯಾಯಿತಿ ಕೊಡ್ತಾರೆ.
ಇದರ ಪ್ರಯೋಜನವನ್ನು ಎಲ್ಲರೂ ಪಡೆಯಿರಿ.

ನನ್ನ ಕೂಪನ್ ಕೋಡ್ :- HB_ASHU5

ಸಂದೇಹ ಏನಾದ್ರೂ ಇದ್ರೆ Dm ಮಾಡಿ. ಬಗೆಹರಿಸಲು ಪ್ರಯತ್ನಿಸುತ್ತೇನೆ

2 years ago | [YT] | 2

My Little Things

ನಾಡಿನ ಸಮಸ್ತ ಜನರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏

ಹಿಂದಿನ ವರ್ಷ ಗಣೇಶ ಚತುರ್ಥಿ ಅಂದೇ ನನ್ನ youtube channel ಅಲ್ಲಿ ನನ್ನ ಮೊದಲ ವೀಡಿಯೊ ಅಪ್ಲೋಡ್ ಮಾಡಿದ್ದೆ.
ಇವತ್ತಿಗೆ ಒಂದು ವರುಷ.
ನನ್ನ ಪ್ರಯತ್ನಕ್ಕೆ ತಕ್ಕದಾದ ಪ್ರತಿಫಲವನ್ನೇ ಗಣಪ ನೀಡಿದ್ದಾನೆ.
ಅವನ ಕೃಪೆ ಯಾವತ್ತೂ ಹೀಗೆ ಇರಲಿ...

2 years ago | [YT] | 5

My Little Things

ನೀವು ಏನು ಓದತಾ ಇದ್ದೀರಿ ?ಎನ್ನುವುದೇ ಪರಿಚಯದ ಮೊದಲ ಮಾತಾಗಿದ್ದರೆ ಏಷ್ಟು ಮಜಾ ಅಲ್ವ?

ಒಬ್ಬ ಪುಸ್ತಕ ಓದುಗನಿಗೆ ಸಹ ಓದುಗ ಸಿಕ್ಕಾಗ ಆಗುವ ಸಂತಸ ಇದೆಯಲ್ಲ ಅದನ್ನು ಯಾರಿಗೂ ವಿವರಿಸೋಕೆ ಆಗಲ್ಲ.

ಅಪರಿಚಿತ ಓದುಗರು ಎನ್ನುವ ಕನ್ನಡ ಪುಸ್ತಕ ಓದುಗರ ಗ್ರುಪ್ ಒಂದು ವಾರಾಂತ್ಯಗಳಲ್ಲಿ ಕಬ್ಬನ್ ಪಾರ್ಕ್ ಅಲ್ಲಿ ಸೇರಿ ಕನ್ನಡ ಪುಸ್ತಕಗಳ ಓದು , ವಿಚಾರ ವಿನಿಮಯ ಮಾಡುತ್ತದೆ.
ಯಾರು ಬೇಕಾದರೂ ಬರಬಹುದು..
10 ರಿಂದ 12ರವರೆಗೆ ಏಷ್ಟು ಹೊತ್ತಿಗೆ ಬೇಕಾದರೂ ಬರಬಹುದು..
ಕಬ್ಬನ್ ಪಾರ್ಕಿನ ಆವರಣದಲ್ಲಿ ಎಲ್ಲಿ ಬೇಕಾದರೂ ಕೂರಬಹುದು...
ಯಾವೂದಕ್ಕೂ ನಿರ್ಭಂದವಿಲ್ಲ.
ಕೈಯಲ್ಲಿ ಒಂದು ಕನ್ನಡ ಪುಸ್ತಕ ಒಂದು ಕಡ್ಡಾಯ.

ಕನ್ನಡ ಪುಸ್ತಕ ಓದುಗರ ಲೋಕದಲ್ಲಿ ಒಂದು ವಿಭಿನ್ನ ಪ್ರಯತ್ನ.

ಇವತ್ತೂ ಕೂಡ (6/8/2023)
ಕೂತು ಒಂದಿಷ್ಟು ಹೊತ್ತು ಓದಿ,
ಆಮೇಲೆ ಎಲ್ಲರೂ ಸೇರಿ ಒಂದಿಷ್ಟು ಹೊತ್ತು ಪುಸ್ತಕಗಳ ಬಗ್ಗೆ ಮಾತನಾಡಿ ಬರೋಣ ಬನ್ನಿ.

2 years ago (edited) | [YT] | 3

My Little Things

New video will be upload tomorrow 12pm...
Summer special series ....
Please watch and support my channel....

2 years ago | [YT] | 7

My Little Things

ವಿಷಯ ತುಂಬಾ ಚಿಕ್ಕದು, ಏನೂ ಪೋಸ್ಟ್ ಹಾಕಿ ಖುಷಿ ಪಡವಂತದ್ದು ಅಲ್ಲ. ಆದ್ರೂ ನನಗೆ ಇದು ಸಿಕ್ಕಾಪಟ್ಟೆ ದೊಡ್ಡ ಸಂಗತಿ. 506subscribers ಅಂದ್ರೆ ನಂಗೆ ದೊಡ್ಡ ವಿಷಯವೇ.

ಯಾಕೆ ಅಂದ್ರೆ

2 ವರ್ಷದ ಹಿಂದೆ youtube channel ಶುರು ಮಾಡ್ಬೇಕು ಅಂತ ಆಲೋಚನೆ ಬಂದ್ರು, ಒಂದಿಷ್ಟು ಹೆದ್ರಿಕೆ, ನಾಚಿಕೆ, ವಿಷಯಗಳ ಕೊರತೆ ಇಂದ ನಿಧಾನ ಆಗತಾನೆ ಇತ್ತು. ಆದ್ರೆ ವೀಡಿಯೋ ಮಾಡೋದನ್ನ, editing ಅನ್ನ ಕಲಿತಾನೆ ಇದ್ದೆ. ಹಿಂದಿನ ಗಣೇಶ ಚೌತಿಗೆ, ಇಡಗುಂಜಿ ಮಹಾಗಣಪತಿ ಹೇಳತ ಶುರು ಮಾಡೇ ಬಿಟ್ಟೆ.

ಪರವಾಗಿಲ್ಲ ಒಂದು ಅರ್ಧ ದಾರಿ ಮುಗಸಿದ್ದೆನೆ. ನಿಮ್ಮೆಲ್ಲರ ಸಹಕಾರ ಇದ್ರೆ ಆದಷ್ಟು ಬೇಗ 1k ಆಗೊತ್ತೆ. ಅದಕ್ಕೆ ನಾನು ಒಳ್ಳೊಳ್ಳೆ ಕಂಟೆಂಟ್ ರೆಡಿ ಮಾಡ್ಲಿಕ್ಕೆ ಟ್ರೈ ಮಾಡತಾ ಇದ್ದೀನಿ.
ನಾನು ಏನೋ ಒಂದು ವೀಡಿಯೋ, waching hours ಆದ್ರೆ ಆಯ್ತು ಅನ್ನೋ ತರ ಮಾಡ್ತಾನೆ ಇಲ್ಲ. ಏನಾದ್ರೂ ವಿಷಯ ಇರಬೇಕು. ವಿಡಿಯೋ ನೊಡತ ಇರೋರ ಸಮಯಕ್ಕೆ ಒಂದು ನ್ಯಾಯ ಸಿಗಬೇಕು ಅಂತ ಕಷ್ಟ ಪಟ್ಟು. ವಿಷಯ ಸಂಗ್ರಹ ಮಾಡಿ ಹಾಕ್ತಾನೆ.

ನನ್ನ 500 ಜನರ i ಪುಟ್ಟ youtube community ಅಲ್ಲಿ ಸುಮಾರು ಒಂದು 100ಜನ ನನ್ನ ಪರಿಚಯದವರೇ ಇದ್ದಾರೆ. ಅದನ್ನು ಬಿಟ್ಟು ಉಳಿದವರು ನನ್ನ ವೀಡಿಯೋ ನೋಡಿ subscribe ಆದವರೂ. Like ಮಾಡ್ತಾರೆ... Comment ಮಾಡ್ತಾರೆ ಇದು ನಂಗೆ YouTube ಇಂದಾ ಸಿಕ್ಕ ರಿವಾರ್ಡ್.
ನಿಮ್ಮ ಸಹಕಾರ ಹೀಗೆ ಇರಲಿ. ಆದಷ್ಟು ಬೇಗ ನನ್ನ ಚಾನೆಲ್ ಅನ್ನ ಒಂದು ದಡಾ ಮುಟ್ಟಿಸಿ.

ಪ್ರೀತಿಯ
ಅಶ್ವಿನಿ

3 years ago | [YT] | 11

My Little Things

Summer special ಒಂದಿಷ್ಟು ವೀಡಿಯೋ ತಯಾರು ಮಾಡತಾ ಇದ್ದೀನಿ ಅಂತ ಹೇಳಿದ್ನಲ ಅದರ ಮೊದಲ ವೀಡಿಯೋ ಇದು. ದಯವಿಟ್ಟು ನೋಡಿ ಸಫೋರ್ಟ್ ಮಾಡಿ

https://youtu.be/JvvJrJ4QYew

3 years ago | [YT] | 1