ಬಂದ್ರಾ..? ಬನ್ನಿ 😄 Neat ಆಗಿ ಒಂದು 🪑ಚೇರ್ ಹಾಕೊಂಡು ಕೂತು ಆರಾಮಾಗಿ ಓದಿ❤️ ಅಂದ್ಹಾಗೆ ನನ್ನ ಹೆಸರು ಚಂದನ್ (Chandan), ನಿಮ್ಮಲ್ಲೊಬ್ಬ. ಈ YouTube Channel ಹೆಸರು ಬಂದು "ನ್ಯೂಜ್ ಅಲರ್ಟ್"(NEWZ ALERT) ಅಂತ. ಓದಿದ್ದು, ಬರೆದಿದ್ದು ಎಲ್ಲವೂ ಮಾರ್ಕ್ಸ್ ಕಾರ್ಡ್ ಗಷ್ಟೇ ಸೀಮಿತ ಆಯ್ತು.... ಮುಂದೇನು...? ಬದುಕನ್ನ ಕಟ್ಕೋಬೇಕಲ್ವಾ, ಕೆಲಸ ಹರಸಿ 2017ರಲ್ಲಿ ನಮ್ಮೂರು ಕೆಆರ್ ಪೇಟೆ(ಮಂಡ್ಯ) ದಿಂದ ರಾಜಧಾನಿ ಬೆಂಗಳೂರಿಗೆ ಬಂದೆ. ಬಂದು ಆ ಕೆಲಸ, ಈ ಕೆಲಸ ಜೊತೆಗೆ ಒಂದಷ್ಟು ಮಾಧ್ಯಮಗಳಲ್ಲಿ ಕೆಲಸ ಮಾಡಿ ಕೊನೆಗೆ 2019ರಲ್ಲಿ ಈ Youtube ಅನ್ನೋ ಸಾಗರಕ್ಕೆ ಧುಮುಕಿದೆ. Voice Over Videos ನಿಂದ Start ಆದ ಪ್ರಯಾಣ ಈಗ Full Time Youtuber ಆಗಿ ನಿಮ್ಮೊಟ್ಟಿಗೆ ಇರಿಸಿದೆ, ಅವತ್ತು ಬೆಂಗಳೂರಿಗೆ ಬಂದಾಗ ನಾನೊಬ್ಬನೇ (1) , ಇವತ್ತು ನನ್ನೊಟ್ಟಿಗೆ 9 ಲಕ್ಷಕ್ಕೂ ಹೆಚ್ಚು ಜನ Subscribers (ಅನ್ನದಾತರು) ಇದ್ದಾರೆ. ಜರ್ನಿ ನಡೀತಾ ಇದೆ, ನಿಮ್ಮ ಆಶೀರ್ವಾದ ಹೀಗೆ ಇರಲಿ ಸದಾ🙏 "ಕನ್ನಡ ಹಾಗೂ ಅಮ್ಮ" ಅಂದ್ರೆ ಜೀವ & ಜೀವನ❤️ "ಸಾಧ್ಯವಾದರೆ ಎಲ್ಲರನ್ನೂ ಪ್ರೀತ್ಸೋಣ👍🏻
ಧನ್ಯವಾದಗಳು.
ಏನಾದ್ರೂ ಹೇಳೋದು ಕೇಳೋದು ಇದ್ರೆ 👇chandanfromkarnataka@gmail.com ಗೆ Mail 💌 ಮಾಡಿ Thank You❤️
-Yours Chandan Gowda