ಪ್ರಭು ಯೇಸುಕ್ರಿಸ್ತನಲ್ಲಿ ಒಲವಿನ ಸ್ನೇಹಿತರೆ,
ಕನ್ನಡ ಕ್ರೈಸ್ತ ಭಕ್ತಿಗೀತೆಗಳ ಭಂಡಾರ ಶ್ರೀಮಂತವಾದುದು. ತಮ್ಮ ಸುಶ್ರಾವ್ಯ ಸಂಗೀತ, ಸಂಯೋಜನೆ ಹಾಗು ಅರ್ಥಗರ್ಭಿತ ಸಾಹಿತ್ಯದೊಂದಿಗೆ ಈ ಗೀತೆಗಳು ಮನೆಮಾತಾಗಿ ಮಾತ್ರವಲ್ಲದೆ ಕೇಳುಗರ ಮನದ ಮಾತಾಗಿ ನೆಲೆಗೊಂಡಿದೆ.
ಇಂತಹ ಕೆಲವು ಹೊಸ ಗೀತೆಗಳೊಂದಿಗೆ ಹಲವಾರು ಹಳೆಯ ಗೀತೆಗಳನ್ನು ಅವು ಮರೆಯಾಗುವ ಮುನ್ನ ಅಮರವಾಗಿಸುವ ಚಿಕ್ಕ ಪ್ರಯತ್ನವೇ ಈ ಅಂತರ್ಜಾಲ ತಾಣ.
ಎಲ್ಲಕ್ಕಿಂತ ಮಿಗಿಲಾಗಿ ಈ ಹಾಡುಗಳು ದಯಾಮಯ ದೇವರನ್ನು ಸ್ಮರಿಸಲು ಸ್ತುತಿಸಲು ಸಹಾಯಕವಾಗುವ ಪುಟ್ಟ ಸಾಧನವಾಗಲಿ.
ಈ ಹಾಡುಗಳನ್ನು ಕೇಳಿ ನಿಮ್ಮ ಅಂತರಂಗ ನಲಿಯಲಿ ಯೇಸುವೇ ಸ್ತೋತ್ರ ಎನ್ನಲಿ.
ಪ್ರಾರ್ಥನೆ :
ಸರ್ವೇಶ್ವರ ಕರುಣೆಯ ಮಹಾಸಾಗರನೇ, ಈ ಹಾಡುಗಳನ್ನು ರಚಿಸಿದ, ಸಂಯೋಜಿಸಿ, ಹಾಡಿದ ಎಲ್ಲರನ್ನು ಹರಸು, ಕೇಳುವ ನಮ್ಮೆಲ್ಲರನ್ನೂ ಹರಸು ನಿಮ್ಮ ಅನಂತ ದಯೆಯನ್ನು ನಮ್ಮ ಮೇಲಿರಿಸು. ನಿನ್ನ ಪರಿಶುದ್ಧ ನಾಮ ಜಗದೆಲ್ಲೆಡೆಯಲ್ಲೂ ಆರಾಧಿಸಲ್ಪಡಲಿ. ಅಮೆನ್.
Keerthy Sam
ಗರಿಗಳ ಭಾನುವಾರ - ನಮ್ಮ ಪ್ರಭು ಯೇಸುವಿನೊಂದಿಗೆ ಹೆಜ್ಜೆ ಹಾಕೋಣ
1 year ago | [YT] | 26
View 0 replies
Keerthy Sam
ನನ್ನ ಕಷ್ಟದ ಸಮಯದಲ್ಲೂ ನನ್ನ ಕೈ ಹಿಡಿದು ನಡೆಸುವ ನನ್ ತಂದೆ ನಿನಗೆ ಕೋಟಿ ಕೋಟಿ ಸ್ತೋತ್ರ ಸ್ವಾಮಿ, ನನ್ನ ಮೊರೆಗೆ ಸದಾ ಕಿವಿಗೊಡುವ ನನ್ ಯೇಸುವೇ ನಿನಗೆ ಕೋಟಿ ನಮನ ಸ್ವಾಮಿ. ನೀನೇ ನನ್ನ ಆಶ್ರಯವೂ ದುರ್ಗವೂ ನಾ ನಂಬಿದ ದೇವರೂ ಸ್ವಾಮಿ, ಸ್ತೋತ್ರ ಯೇಸಪ್ಪ.
2 years ago | [YT] | 11
View 0 replies
Keerthy Sam
Satisfy us in the morning with your unfailing love,
that we may sing for joy and be glad all our days.
Psalm 90:14
2 years ago (edited) | [YT] | 116
View 4 replies
Keerthy Sam
2 years ago | [YT] | 153
View 3 replies
Keerthy Sam
2 years ago | [YT] | 116
View 5 replies
Keerthy Sam
ದೇವರ ದಯೆ ದೊರಕುವುದು ಮಾನವನ ಇಚ್ಛೆಯಿಂದಲ್ಲ, ಅವನ ಪ್ರಯತ್ನದಿಂದಲೂ ಅಲ್ಲ. ಅದು ದೊರಕುವುದು ದೇವರ ಕರುಣೆಯಿಂದಲೇ.
ರೋಮನರಿಗೆ 9:16
ಸರ್ವೇಶ್ವರ ಕರುಣೆಯ ಮಹಾಸಾಗರನೇ, ಅತ್ಯಂತ ಕರುಣಾಳುವಾದ ಪ್ರಭು ಯೇಸುಕ್ರಿಸ್ತರೇ, ನಿನ್ನ ಅಪರಿಮಿತವಾದ ದಯೆಯಲ್ಲಿ ವಿಶ್ವಾಸವಿಟ್ಟು ನಿಮ್ಮನ್ನು ಬೇಡಿಕೊಳ್ಳುತ್ತೇವೆ ಸ್ವಾಮೀ.
ಕರ್ತನೇ, ಈ ಕರೋನ ವೈರಸ್ನಿಂದ, ಹಾಗು ಎಲ್ಲ ವ್ಯಾಧಿಗಳಿಂದ ಮನುಕುಲವನ್ನು ರಕ್ಷಿಸು.
ಪ್ರಭುವೇ ಎಲ್ಲ ರೋಗಭಾದಿತರ ಮೇಲೆ ಕರುಣೆತೋರು. ವಿಶೇಷವಾಗಿ ವೃದ್ಧರ ಮೇಲೂ
ರೋಗಭಾದಿತರ ಮೇಲೂ ದಯೆತೋರು. ಎಲ್ಲರನ್ನು ಗುಣಪಡಿಸು ಸ್ವಾಮಿ.
ಎಲ್ಲ ವೈದ್ಯಕೀಯ ಸಿಬ್ಬಂದಿ ಹಾಗು ಸುಶ್ರೂಷೆ ಮಾಡುತ್ತಿರುವವರನ್ನು ಹೇರಳವಾಗಿ ಆಶೀರ್ವದಿಸು.
ನಿನ್ನ ಪರಿಶುದ್ಧ ರಕ್ತದ ಶಕ್ತಿಯಿಂದ ನಮ್ಮನ್ನು ತೊಳೆದು ಶುದ್ಧಮಾಡು, ನಿನ್ನ ಪವಿತ್ರಾತ್ಮರಿಂದ ತುಂಬಿಸು. ಇವುಗಳೆಲ್ಲವನ್ನು ನಮ್ಮ ಪ್ರಭು ಯೇಸುಕ್ರಿಸ್ತರ ನಾಮದಲ್ಲಿ ಬೇಡಿಕೊಳ್ಳುತ್ತೇನೆ ಸ್ವಾಮಿ. ಅಮೆನ್.
6 years ago | [YT] | 199
View 24 replies
Keerthy Sam
ನಮ್ಮ ಮನಗಳಲ್ಲಿ , ಮನೆಗಳಲ್ಲಿ ಕ್ರಿಸ್ತನ ಜನನವಾಗಲಿ.
ಕ್ರಿಸ್ತನನ್ನು ಇನ್ನೂ ಅರಿಯದ ಜನರ ಮನದಲ್ಲೂ ಕ್ರಿಸ್ತ ಪ್ರೀತಿಯ ಸುಧೆ ಹರಿಯಲಿ, ಶುಭಸಂದೇಶವನ್ನು ಅರಿಯುವ ಆಶೀರ್ವಾದ ಎಲ್ಲರದಾಗಲಿ.
ಕ್ರಿಸ್ಮಸ್ ಹಾಗು ಹೊಸವರ್ಷದ ಶುಭಾಶಯಗಳು
6 years ago | [YT] | 229
View 14 replies
Keerthy Sam
ಅತ್ಯಂತ ಕರುಣಾಳುವಾದ ತಂದೆಯೇ, ಕರುಣೆಯ ಮಹಾಸಾಗರನೇ, ಮಳೆಯಿಂದ, ಪ್ರವಾಹದಿಂದ, ಹಾನಿಗೊಳಗಾದ ನಮ್ಮೆಲ್ಲಾ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸುತ್ತೇವೆ, ನಿನ್ನ ಕರುಣೆಯ ಹಸ್ತದಿಂದ ಇವರೆಲ್ಲರನ್ನು ಕಟಾಕ್ಷಿಸು. ಹಸಿವಿನಿಂದ ನರಳುತ್ತಿರುವವರ ಮೇಲೆ ದಯವಾಗಿರು, ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಎಲ್ಲರನ್ನು ಆಶೀರ್ವದಿಸು, ದಾನಿಗಳನ್ನು ಹರಸು, ನಮ್ಮ ಮೇಲೂ ಇಡೀ ಭೂಲೋಕದ ಮೇಲೂ ಕರುಣೆಯ ಮಳೆಯನ್ನು ಸುರಿಸು. ನಮ್ಮ ಪ್ರಭು ಯೇಸುಕ್ರಿಸ್ತರ ಪವಿತ್ರ ನಾಮದಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಮೆನ್.
6 years ago (edited) | [YT] | 224
View 57 replies
Keerthy Sam
ನಮ್ಮ ಪ್ರಭುವಿನ ಪುನರುತ್ಥಾನ ಮಹೋತ್ಸವದ ಶುಭಾಶಯಗಳು.
ಪ್ರಭು ಯೇಸುವಿನ ಕೃಪೆಯೂ, ಶಾಂತಿಯೂ, ನಿಮ್ಮೆಲ್ಲರ ಮನ, ಮನೆಗಳಲ್ಲಿ ನೆಲೆಸಲಿ.
7 years ago | [YT] | 119
View 15 replies
Keerthy Sam
ಪ್ರಖ್ಯಾತ ಸಂಗೀತ ವಿದ್ವಾಂಸರೂ, ಕ್ರೈಸ್ತ ಧಾರ್ಮಿಕ ವಿದ್ವಾಂಸರೂ, ೬೦ರ ದಶಕದಲ್ಲಿನ ವ್ಯಾಟಿಕನ್ ಸುಧಾರಣೆಯನ್ವಯ ಲತೀನ್ ಭಾಷೆಯಿಂದ ಕನ್ನಡಕ್ಕೆ ಬದಲಾದ ಕಥೋಲಿಕ ಪೂಜಾವಿಧಿಯಲ್ಲಿ ಬಳಸಲಾಗುವಂತೆ ಅಸಂಖ್ಯಾತ ಕನ್ನಡ ಭಕ್ತಿಗೀತೆಗಳನ್ನು ರಚಿಸಿ ಹಾಡಿ ಪ್ರಚುರಗೊಳಿಸಿ ಶೂನ್ಯ ತುಂಬಿದ ಮಹಾನ್ ಕ್ರೈಸ್ತಯಾಜಕ ಮೊನ್ಸಿನೊರ್ ಡಾ. ಎನ್ ಎಸ್ ಮರಿಜೋಸೆಫ್ ನವರು ಇಂದು ಮುಂಜಾನೆ (ಫೆಬ್ರವರಿ ೫, ೨೦೧೯) ಸ್ವರ್ಗಸಾಮ್ರಾಜ್ಯ ಸೇರಿದರು.
ಓ ಕರ್ತರೇ ಮೃತರಿಗೆ ನಿತ್ಯ ವಿಶ್ರಾಂತಿಯ ದಯಪಾಲಿಸಿರಿ , ಓ ಎಂಥಾ ದಿವ್ಯ ಸಂಸ್ಕಾರ, ಕಂಡಿತೀ ಮ್ಹಾಚಿಹ್ನೆ ಗಗನದೊಳು, ಮುಂತಾದ ಜನಪ್ರಿಯ ಗೀತೆಗಳನ್ನು ಪರಿಚಯಿಸಿದ ಇವರು ನಮ್ಮೆಲ್ಲರ ಹೃದಯಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಓ ಕರ್ತರೇ ಮೃತರಿಗೆ ನಿತ್ಯ ವಿಶ್ರಾಂತಿಯ ದಯಪಾಲಿಸಿರಿ,
ನಿತ್ಯ ಜ್ಯೋತಿಯು ಅವರ ಮೇಲೆ ಪ್ರಕಾಶಿಸಲಿ.
7 years ago | [YT] | 53
View 10 replies
Load more