ಸಾಮರಸ್ಯದ ನೀತಿಗೆ *" ಅರ್ಥ ಕೋಡುವುದೇ ಇದ್ದಲ್ಲಿ ಅದು ಕಂಬಳ ಆಚರಣೆ ಮಾತ್ರ"* *" ಕಂಬಳದ ಸುಮಧುರ ಭಾಂದವ್ಯ"*

ಆ ಸತ್ಯ ಸೂರ್ಯ ಚಂದ್ರೇ ಉಪ್ಪುನ ಮುಟ್ಟ ಈ ನಿತ್ಯ ಕಿರ್ತೀದ ಮಣ್ಣ್ ದ್ *ಕಂಬುಳ_ಶಾಶ್ವತ*🐃🐃*

#nammakambala #isupportkambala

For any suggestions dm me on Instagram @namma_kambala


Namma Kambala

Aikala Bava Kambala Final Race👇
👉 https://youtu.be/gP8nPPRusl0

3 years ago | [YT] | 98

Namma Kambala

ಕಂಬಳ ಕ್ಷೇತ್ರದಲ್ಲಿ ವಿಶಿಷ್ಠ ಸಾಧಕ ಕೆದುಬರಿ ಗುರುವಪ್ಪ ಪೂಜಾರಿ ಗುರುಪುರ:

ತುಳುನಾಡಿನ ಜಾನಪದ ಕ್ರೀಡೆ `ಕಂಬುಲ-ಕಂಬಳ’.
ಆಳುಪ ಅರಸರ ಕಾದಲ್ಲೂ ಕಂಬಳ ನಡೆಯುತ್ತಿತ್ತು ಎಂದು
ತುಳು ಅಧ್ಯಯನಕಾರರು ಹೇಳುತ್ತಾರೆ. ಹಿಂದಿನ ಕಾಲದ
`ಕಂಬುಲ’ ಹಲವು ಮಜಲು ದಾಟಿ ಬಂದಿರುವ `ಕಂಬಳ’ ಇಂದು ತನ್ನದೇ ವಿಶಿಷ್ಠತೆ ಮೈಗೂಡಿಸಿಕೊಂಡಿದೆ.

ಈ ಕ್ರೀಡಾಕ್ಷೇತ್ರದಲ್ಲಿ ಗುರುಪುರ ಕೆದುಬರಿ
ಗುರುವಪ್ಪ ಪೂಜಾರಿಯ ಹೆಸರು ಕೇಳದವರು ವಿರಳ. ಇವರು ಕಳೆದ 47 ವರ್ಷದಿಂದ ಕಂಬಳ ಕೋಣಗಳ ಮೂಲಕ ಜನಪ್ರಿಯರಾಗಿದ್ದಾರೆ.

ಒಂದಷ್ಟು ಕೃಷಿಭೂಮಿ ಹೊಂದಿರುವ ಗುರುವಪ್ಪನವರು ಬಾಲ್ಯದ ದಿನಗಳಿಂದಲೇ ಕಂಬಳದ ಮೇಲೆ ಆಸಕ್ತರಾಗಿದ್ದರು.
ತನ್ನ ಗದ್ದೆ ಉಳಲೆಂದು ಉತ್ತಮ ಜಾತಿಯ ಕೋಣಗಳನ್ನು ತಂದು, ಕೃಷಿ ಕೆಲಸ ಮುಗಿದ ಬಳಿಕ ಕಂಬಳ ಗದ್ದೆಗಳಲ್ಲಿ ಓಡಿಸಿ ಖುಷಿ ಪಡೆಯುತ್ತಿದ್ದರು. ಮುಂದೆ, ದೂರದ ಊರುಗಳಲ್ಲಿ ನಡೆಯುವ ಕಂಬಳಗಳತ್ತ ಗಮನ ಕೇಂದ್ರೀಕರಿಸಿದ ಇವರು ಕಂಬಳಕ್ಕಾಗಿಯೇ ಹುಬ್ಬಳ್ಳಿ, ಕೋಟಾ ಮೊದಲಾದ ಕಡೆಯಿಂದ ಉತ್ತಮ ಜಾತಿಯ ಕೋಣಗಳನ್ನು ತಂದು, ಪಳಗಿಸುವುದರಲ್ಲಿ ಎತ್ತಿದ ಕೈ. ಇವರು ಹಿರಿಕಿರಿಯ ಕಂಬಳಾಸಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.

ಕುಟುಂಬದಲ್ಲಿ ಕಂಬಳಾಸಕ್ತರಿಲ್ಲದಿದ್ದರೂ ತನ್ನ ಸ್ವ-ಹಣಕಾಸಿನ ಬಲದಿಂದಲೇ ಕಂಬಳಕ್ಕೆ ಮುಂದಡಿ ಇಟ್ಟಿರುವ ಇವರು ಪ್ರಥಮ ಬಾರಿಗೆ ಬಾರಾಡಿ ಕಂಬಳದಲ್ಲಿ ಗುರುತಿಸಲ್ಪಟ್ಟಿದ್ದರು. ಇದಕ್ಕಿಂತ ಮುಂಚೆ ಪೂಕರೆ ಕಂಬಳಗಳಲ್ಲಿ ಪಾಲ್ಗೊಂಡಿದ್ದರು. ಆರಂಭದ ದಿನಗಳಲ್ಲಿ ಕೋಣ ಓಡಿಸಿದ್ದರು. ಬಳಿಕ ಜೋಡಿ ಕೋಣ ಸಾಕಿ, ಅವುಗಳನ್ನು ಕಂಬಳಕ್ಕೆ ಕೊಂಡೊಯ್ಯುವ ಗೀಳು
ಬೆಳೆಸಿಕೊಂಡಿದ್ದಾರೆ. ಈಗಿನವರಂತೆ ತಾನು ಕಂಬಳಕ್ಕಾಗಿ ತರಬೇತಿ ಪಡೆದುಕೊಂಡಿಲ್ಲ ಎನ್ನುವ 60 ದಾಟಿರುವ ಗುರುವಪ್ಪನವರು, ಇದುವರೆಗೆ ದ ಕ ಜಿಲ್ಲೆ ಮತ್ತು ನೆರೆಯ ಉಡುಪಿ ಜಿಲ್ಲೆಯಲ್ಲಿ ನಡೆಯುವ ಎಲ್ಲ ಕಂಬಳಗಳಲ್ಲಿ ಕೋಣ ಇಳಿಸಿದ್ದಾರೆ. ಬಹುತೇಕ ಕಡೆಗಳಲ್ಲಿ ಇವರಿಗೆ ಮೆಡಲ್ ಸಿಕ್ಕಿದೆ. ಕದ್ರಿ, ಮೂಲ್ಕಿ, ಮಿಜಾರು, ಬಜಗೋಳಿ,
ಪುತ್ತೂರು, ಕಾವಳಕಟ್ಟೆ-ಮೂಡೂರು ಪಡು, ಉಪ್ಪಿನಂಗಡಿ,
ಜೆಪ್ಪು, ಕಟಪಾಡಿ, ಮೂಡಬಿದ್ರೆ, ವೇಣೂರು, ಕಾಜೂರು,
ಬೋಳಿಯಾರು, ಪಡುಬಿದ್ರಿ, ಐಕಳ ಬಾವ, ತಿರುವೈಲು,
ಬೊಳ್ಳೂರು (ಗುರುಪುರ), ಸುರತ್ಕಲ್, ಪಿಲಿಕುಲ,
ಹೊಸಬೆಟ್ಟು ಹೀಗೆ ಎಲ್ಲೆಲ್ಲಿ ಕಂಬಳ ನಡೆಯುತ್ತಿದೆಯೋ ಅಲ್ಲಿ
ಕೆದುಬರಿ ಗುರುವಪ್ಪನವರ ಕೋಣಗಳು ಹಾಜರಾಗುತ್ತಿದ್ದವು.
“ಗುರುವಪ್ಪನವರ ಕೋಣಗಳು ಬಂದಿದೆಯಾ ?” ಎಂದು
ಕೇಳುವವವರೆಗೂ ಅವರಿಂದೂ ಕಂಬಳ ಕ್ಷೇತ್ರದಲ್ಲಿ
ಜನಪ್ರಿಯರಾಗಿದ್ದಾರೆ.

ಇವರು ಅಡ್ಡ ಹಲಗೆ, ಹಗ್ಗದ ಹಿರಿ-ಕಿರಿ ವಿಭಾಗ, ನೇಗಿಲಿನ ಹಿರಿ-ಕಿರಿ ವಿಭಾಗ, ದೊಡ್ಡ ವಿಭಾಗ ಹಾಗೂ ಕಣೆಹಲಗೆ ವಿಭಾಗದ ಕೋಣಗಳ ಸ್ಪರ್ಧೆಯಲ್ಲಿ ಪಳಗಿದವರು. ಕಣೆಹಲಗೆಯಲ್ಲಿ ಯಾರ ಕೋಣಗಳು `ಸೈ’ ಎನಿಸುತ್ತದೋ ಅಂತಹವರು ಕಂಬಳದ ಎಲ್ಲ ವಿಭಾಗ ದಾಟಿ ಬಂದವರು ಎಂಬ ಹೆಗ್ಗಳಿಕೆಯೊಂದಿದೆ. ಗುರುವಪ್ಪನವರು ಅಂತಹ ಕೀತರ್ಿಗೆ ಪಾತ್ರರಾಗಿದ್ದಾರೆ. ಇವರು ಗಳಿಸಿದ ಚಿನ್ನದ ಮೆಡಲ್, ನಗದು ಬಹುಮಾನ ಒಂದೆರಡಲ್ಲ. ಮನೆಯ ತುಂಬೆಲ್ಲ ಪ್ರಶಸ್ತಿ ಪತ್ರಗಳು ಹಾಗೂ ಒಪ್ಪ ಓರಣವಾಗಿಟ್ಟ ಕಂಬಳ ಪರಿಕರಗಳು ಕಂಡು ಬರುತ್ತವೆ. ಆಡಂಬರವಿಲ್ಲದೆ ಸೂಕ್ಷ್ಮ ಖಚರ್ಿನೊಂದಿಗೆ ಇಂದಿನ ಕಂಬಳಗಳಲ್ಲೂ ಪಾಲ್ಗೊಳ್ಳಬಹುದು ಎಂಬುದನ್ನು ಇವರು ಸಾಧಿಸಿ ತೋರಿಸಿಕೊಟ್ಟಿದ್ದಾರೆ.

ನನ್ನ ಪ್ರಕಾರ ಓಡುವ ಕೋಣಗಳಿಗೆ ಹೆಚ್ಚು ಹೊಡೆಯಬೇಕಾಗಿಲ್ಲ. ಓಡುವ ಕೋಣಗಳಿಗೆ ಕೋಣ ಓಡಿಸುವವನ ಧ್ವನಿಯೇ ಏಟಾಗಿ ಪರಿಣಮಿಸುತ್ತದೆ. ಯಾಕೆಂದರೆ ಅವು ಅಂತಹ ತರಬೇತಿ ಪಡೆದಿರುತ್ತವೆ. ಮಕ್ಕಳನ್ನು ತಿದ್ದಿ- ತೀಡುವಾಗ ಒಂದೆರಡು ಹೊಡೆಯುವಂತೆ, ಸಾಕಿದ ಕೋಣಗಳಿಗೆ ಪ್ರೀತಿಯಿಂದ ಒಂದೆರಡು ಹೊಡೆಯುವುದು ತಪ್ಪಲ್ಲ.
“ಗುರುವಪ್ಪನವರು ನಿಜವಾದ ಕಂಬಳ ಪ್ರೇಮಿ. ಅತಿ ಕಡಿಮೆ ಕೃಷಿ ಹೊಂದಿರುವ ಹಾಗೂ ಆರ್ಥಿಕವಾಗಿ ಸಬಲರಲ್ಲದ ಇವರು ಕಂಬಳಕ್ಕೆ ಕೋಣಗಳನ್ನು ಅಣಿಗೊಳಿಸುವ ಆಸಕ್ತಿ ನಿಜಕ್ಕೂ ಮೆಚ್ಚತಕ್ಕದ್ದು”. ಏನೇ ಇದ್ದರೂ ಇವರು ಈ ಜಾನಪದ ಕ್ರೀಡೆ ಕಂಬಳದಲ್ಲಿ ಅಪೂರ್ವ ಗನಿಯಂತಿದ್ದು, ಕಂಬಳ ಅಧ್ಯಯನಾಸಕ್ತರಿಗೆ
ಮಾರ್ಗದರ್ಶಿಯಾಗಿದ್ದರು.

4 years ago | [YT] | 449

Namma Kambala

ನಮ್ಮ ಚಾನೆಲ್ SUBSCRIBE ಮಲ್ದಿನ ಮಾತೆರೆಗ್ಲಾ ಉಡಲ್ ದಿಂಜಿ ಸೊಲ್ಮೆಲು 🙏, ನಿಕ್ಲೆನ ಮೋಕೆ, ಆಶೀರ್ವಾದ ಇಂಚನೇ ಇಪ್ಪಡ್ 😍🙏, #3k_family #keep_supporting #thank_you_all❤️❤️️

5 years ago | [YT] | 249

Namma Kambala

...ಚಿರಾಯು ಕಂಬಳದ ಜಿಂಕೆ...
*ಕುಕ್ಕಂದೂರ ಕಾಟಿ*
ಕಂಬಳದಲ್ಲಿ ಕಂಬಳದ ಕೋಣಗಳೇ ಯಜಮಾನರ ಆಧಾರ,ಮಾನ,ಧನ,ಅಭಿಮಾನದ ಸಂಕೇತ.
ಅವರಿಗೆ ಮಾನ ಸಮ್ಮಾನ ತಂದುಕೊಡುವುದು ಕೋಣಗಳೆ..
ಹಾಗಾಗಿ ಕಂಬಳದ ಕೋಣಗಳಿಗೂ ಯಜಮಾನರಿಗೂ ಅವಿನಭಾವ ಸಂಬಂಧ..
ಕಂಬಳದ ಇತಿಹಾಸದಲ್ಲಿಯೇ ದಾಖಲೆಯ ಚಿನ್ನದ ಪದಕಗಳನ್ನು ಧನಿಗೆ ತಂದಿತ್ತ ಸಾಧನೆಯ ಕೋಣಗಳ ಸಾಲಿನಲ್ಲಿ *ಕುಕ್ಕಂದೂರು ಕಾಟಿ* ಯದ್ದು ದೊಡ್ಡ ಪಾಲು...
ಕುಕ್ಕಂದೂರು ಶಂಕರಬೆಟ್ಟು ರವೀಂದ್ರ ಕುಮಾರ್ ಮತ್ತು ಸಹೋದರ ಸುರೇಶ್ ಅವರಿಗೆ 2003-04 ರಿಂದ 2007ರ ವರೆಗೂ ಮೂರು ವರ್ಷಗಳ ಕಾಲ ಚಾಂಪಿಯನ್ ಆಗಿ ಕಂಬಳಕ್ಷೇತ್ರದಲ್ಲಿ ಅತಿ ದೊಡ್ಡ ಹೆಸರು ತಂದಿತ್ತ ಕೋಣ ಅದು..
2012-13ರ ಕಂಬಳ ಋತು ಆರಂಭವಾಗುವ ಮೊದಲು ವೈದ್ಯರ ಉಪಚಾರದ ನಡುವೆಯೂ ಅನಾರೋಗ್ಯ ಕಾಡಿ 16 ರ ಕಾಟಿ ಇಹಲೋಕದ ಪಯಣ ಮುಗಿಸಿ ಕಂಬಳ ಲೋಕಕ್ಕೆ ವಿದಾಯ ಹಾಡಿತು...
ಕಂಬಳ ಲೋಕದಲ್ಲಿ ಮಂಜೋಟ್ಟಿಯಾಗಲಿ ಗಂತಿನಲ್ಲಿಯಾಗಲಿ ಒಂದೇ ಒಂದು ಪೆಟ್ಟು ತಿನ್ನದ ಕೋಣ ಎಂಬ ಪ್ರಶಂಸೆಗೆ ಪಾತ್ರವಾದ ಜಾಣ ಕೋಣ *ಕಂಬಳದ ಜಿಂಕೆ* *ಓಟದ ಚಿರತೆ* ಎಂಬೆಲ್ಲಾ ಕೀರ್ತಿಗೆ ಪಾತ್ರವಾಯಿತು ಕಾಟಿ..
ತನ್ನ ಜೀವಿತ ಅವಧಿಯಲ್ಲಿ 38 ಚಿನ್ನದ ಪದಕಗಳನ್ನು ಬೇಟೆಯಾಡಿದ ಕೋಣ *ಕುಕ್ಕಂದೂರ ಕಾಟಿ*
""'':ಕಾಟಿಯ ಚಿನ್ನದ ಬೇಟೆ:''''''
2001-02ರಲ್ಲಿ ಮಾರ್ನಾಡು -ವಾರಾಡಿ ವಾಸು ಶೆಟ್ಟಿ ಮತ್ತು ರಾಜೀವ ಬೂಬ ಶೆಟ್ಟಿಯವರು ಖರೀದಿಸಿದ ಐದರ ಹರೆಯದ ಕಾಟಿ 2002ರಿಂದಲೇ ಚಿನ್ನದ ಬೇಟೆಗೆ ಶುರು ಮಾಡಿತು...
❤️ 2002-03ರಲ್ಲಿ 5 ಪ್ರಥಮ
ಮಾಹಿತಿ : ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ್ ಶೆಟ್ರು

5 years ago | [YT] | 233

Namma Kambala

Video Link :- https://youtu.be/b36G97hEBn0

Like, Share, Subscribe & Support 🙏

5 years ago | [YT] | 84

Namma Kambala

#ಹೊಕ್ಕಾಡಿಗೋಳಿ_ಹಕ್ಕೇರಿ_ಸುರೇಶ್_ಎಂ_ಶೆಟ್ಟಿ

#ಕಂಬಳ ಕ್ಷೇತ್ರದಲ್ಲಿ ದಾಖಲೆ ಬರೆದ ಮಿಂಚಿನ #ಓಟಗಾರ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.ಎಮ್ ಶೆಟ್ಟಿ.

ಪುರಾತನ ಜನಪದ ಕ್ರೀಡೆಯಾದ ಕಂಬಳವು #ತುಳುನಾಡಿನಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ.#ಮುಲ್ಕಿ_ಸೀಮೆಯ_ಅರಸು ಕಂಬಳವು ಸಾಂಪ್ರದಾಯಿಕ ಕಂಬಳವಾಗಿದ್ದು ಆಧುನಿಕ ವ್ಯವಸ್ಥೆಗಳನ್ನು ಸಾರಿಸಿಕೊಂಡರೂ ಸಂಪ್ರದಾಯವನ್ನು ಉಳಿಸಿಕೊಂಡೇ ಬಂದಿದೆ.ಕಹಳೆ,ವಾಲಗದೊಂದಿಗೆ ಓಟಕ್ಕಿಳಿಯುವ ಕೋಣಗಳು,ಅಷ್ಟೇ ವೇಗವಾಗಿ ಹಿಡಿತ ಸಾಧಿಸಿಕೊಂಡು ಓಟಕ್ಕಿಳಿಯುವ ಓಟಗಾರನ ವೇಗ ಎಂತವರನ್ನೂ ಮೈ ರೋಮಾಂಚನಗೊಳಿಸುತ್ತದೆ‌.ಇಂತಹ ವಿಶಿಷ್ಟ ಜನಪದ ಕ್ರೀಡೆ ಕಂಬಳದಲ್ಲಿ ತಮ್ಮ ಮಿಂಚಿನ ಓಟದಿಂದ ದಾಖಲೆಯ ವೀರನೆಂದೇ ಹೆಸರು ಗಳಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.ಎಮ್ ಶೆಟ್ಟಿ.
24-03-1986 ರಂದು #ದಕ್ಷಿಣ_ಕನ್ನಡ_ಜಿಲ್ಲೆಯ_ಬೆಳ್ತಂಗಡಿ_ತಾಲೂಕಿನ ಹೊಕ್ಕಾಡಿಗೋಳಿ ಹಕ್ಕೇರಿಯಲ್ಲಿ ಮಧು ಶೆಟ್ಟಿ ಹಾಗೂ ಶಾರದ ಶೆಟ್ಟಿ ದಂಪತಿಗಳ ಪುತ್ರನಾಗಿ ಜನಿಸಿದ ಸುರೇಶ್ ಶೆಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ #ಆರಂಬೋಡಿಯಲ್ಲಿ ಪೂರ್ಣಗೊಳಿಸಿ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು #ಸಿದ್ಧಕಟ್ಟೆ_ಬಂಟ್ವಾಳದಲ್ಲಿ ಪೂರ್ಣಗೊಳಿಸಿದರು.ಶಾಲಾ ದಿನಗಳಲ್ಲೇ ಆಟೋಟಗಳಲ್ಲಿ ಮುಂಚೂಣಿಯಲ್ಲಿದ್ದ ಸುರೇಶ್ ಓಟದಲ್ಲಿ ಜಿಲ್ಲಾಮಟ್ಟವನ್ನು ಪ್ರತಿನಿಧಿಸಿದ್ದರು.
ಬಾಲ್ಯದಲ್ಲಿ ತಮ್ಮ ಮನೆಯಲ್ಲಿದ್ದ ಕಂಬಳದ ಕೋಣಗಳನ್ನು ನೋಡಿ ಕಂಬಳಾಸಕ್ತಿ ಬೆಳೆದು ಇಪ್ಪತ್ತರ ಹರೆಯದಲ್ಲೇ ದೊಡ್ಡಪ್ಪನವರಾದ ರಾಮಣ್ಣ ಶೆಟ್ಟಿಯವರ ಕೋಣಗಳಲ್ಲಿ ಅಭ್ಯಸಿಸತೊಡಗಿದರು.
ನಂತರ 2007ರಲ್ಲಿ ತಮ್ಮ ಗುರುಗಳಾದ ವೇಣೂರು ಗುಂಡೂರಿ ಓಬಯ್ಯ ಪೂಜಾರಿಯವರ ಕೋಣಗಳನ್ನು ಓಡಿಸುವ ಮೂಲಕ ಕಂಬಳ ಕ್ಷೇತ್ರಕ್ಕೆ ಲಗ್ಗೆಯಿಟ್ಟರು.2013ರಲ್ಲಿ #ಬೋಳಾದಗುತ್ತು ಸತೀಶ್ ಶೆಟ್ಟಿಯವರ ತಂಡಕ್ಕೆ ಓಟಗಾರನಾಗಿ ಸೇರ್ಪಡೆಗೊಂಡು ತಮ್ಮ ಮಿಂಚಿನ ಓಟದಿಂದ ಕಂಬಳ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಾ ಬಂದರು.ನೇಗಿಲಿನ ಹಿರಿಯ,ಕಿರಿಯ ಮತ್ತು ಹಗ್ಗ ಹಿರಿಯ,ಕಿರಿಯ ವಿಭಾಗದಲ್ಲಿ ಕೋಣಗಳನ್ನು ಓಡಿಸಿ ಅನುಭವ ಪಡೆದ ಸುರೇಶ್ ನೇಗಿಲಿನ ಹಿರಿಯ ವಿಭಾಗದಲ್ಲಿ ಬೋಳಾದಗುತ್ತಿನ ಧೋನಿ,ಬೊಲ್ಲ,ಕಾಳ,ರಾಜ ಎಂಬ ಕೋಣಗಳನ್ನು ಓಡಿಸಿ ಅತೀ ಹೆಚ್ಚು ಚಿನ್ನದ ಪದಕ ಮತ್ತು ಬೆಳ್ಳಿ ಪದಕ ಗಳಿಸಿದವರಿಗೆ ನೀಡಲ್ಪಡುವ #ಚಾಂಪಿಯನ್_ಶಿಪ್ ಪ್ರಶಸ್ತಿಯನ್ನು ಕಳೆದ ಆರು ವರ್ಷಗಳಿಂದ ತಮ್ಮದಾಗಿಸಿಕೊಂಡು ಕಂಬಳ ಕ್ಷೇತ್ರದಲ್ಲೊಂದು ಇತಿಹಾಸವನ್ನೇ ಸೃಷ್ಟಿಸಿದ್ದಾರೆ.
#ನೇಗಿಲಿನ ಕಿರಿಯ ವಿಭಾಗದಲ್ಲಿ ಎರಡು ವರ್ಷಗಳ ಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
2013-14ರಿಂದ ಈವರೆಗಿನ #ಕಂಬಳ ಕ್ರೀಡೋತ್ಸವದಲ್ಲಿ ಒಟ್ಟು 82ಚಿನ್ನದ ಪದಕ ಹಾಗೂ 62 ಬೆಳ್ಳಿ ಪದಕವನ್ನು ಪಡೆದುಕೊಂಡಿರುವುದು ಸಂತಸದಾಯಕ ಹಾಗೂ ಹೆಮ್ಮೆಯ ವಿಚಾರ.

ಕಂಬಳ ಕ್ಷೇತ್ರದಲ್ಲಿ ಈವರೆಗೆ ಇವರು ಬೋಳಾದಗುತ್ತು ಸತೀಶ್ ಶೆಟ್ಟಿ,ವೇಣೂರು ಗುಂಡೂರಿ ಓಬಯ್ಯ ಪೂಜಾರಿ,ಪರಂಗಿಪೇಟೆ ಕಿದೆಬೆಟ್ಟು ಧರ್ಮಣ್ಣ ಮಡಿವಾಳ್,ಚಿತ್ರಾಪು ಬೈಲುಗುತ್ತು ರಾಮ ದೇವಾಡಿಗ,ಸಾಣೂರು ಸುಂದರ.ಕೆ ಆಚಾರ್ಯ,ಉಡುಪಿ ಹಿರೇಬೆಟ್ಟು ಶಿವ ಪಾಣಾರ,ಕೊಳಚ್ಚೂರ್ ಕೊಂಡೊಟ್ಟು ಸುಕುಮಾರ್ ಶೆಟ್ಟಿ,ಕಾರ್ಕಳ ಜೀವನ್ ದಾಸ್ ಅಡ್ಯಂತಾಯ,ಕರಿಂಜೆ ವಿಶ್ವನಾಥ ಶೆಟ್ಟಿ,ನಂದಳಿಕೆ ಶ್ರೀಕಾಂತ್ ಭಟ್,ಇರುವೈಲ್ ಕೆಂಪುಗುಡ್ಡೆ ಗುಲಾಬಿ ಚಂದು ಪೂಜಾರಿ,ಕೆರ್ವಾಶೆ ಅರುಣ್ ಕುಮಾರ್ ಜೈನ್,ಕೊಮೊರೊಟ್ಟು ಸೀತರಾಮ ಶೆಟ್ಟಿ,ಅತ್ತೂರು ಗುಂಡ್ಯಡ್ಕ ಬೋಳ ಶ್ರೀನಿವಾಸ್ ಕಾಮತ್,ಕಾಂತಾವರ ಅಂಬೊಡಿಮಾರ್ ರಘುನಾಥ್ ದೇವಾಡಿಗ,ನೀರೇಭದ್ರಗುತ್ತು ಸುಂದರ ಶೆಟ್ಟಿ,ಮರೋಡಿ ಕೆಳಗಿನ ಮನೆ ಕೃತೇಶ್ ಅಣ್ಣಿ ಪೂಜಾರಿ,ಮಾಲ ಆನಂದ ನಿಲಯ ಶೇಖರ್ ಆನಂದ ಶೆಟ್ಟಿ,ಕಾರಿಂಜೆ ಕೊಂಬೆಲ್ ಗುತ್ತು ಪ್ರಶಾಂತ್ ಪೂಜಾರಿ,ಸಿದ್ಧಕಟ್ಟೆ ಪೊಡುಂಬ ಸಂದೀಪ್ ಶೆಟ್ಟಿ ಮುಂತಾದವರ ಕೋಣಗಳನ್ನು ಓಡಿಸಿ ಎಲ್ಲರಿಗೂ ಪ್ರಶಸ್ತಿ ಗೆದ್ದು ಕೊಟ್ಟಿದ್ದಾರೆ.
ಇವರ ಈ ಕಂಬಳ ಕ್ಷೇತ್ರದ ಸಾಧನೆಯನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.ಹುಟ್ಟು ಕೃಷಿಕನಾಗಿ,ಕಂಬಳ ಪ್ರೇಮಿಯಾಗಿ ಸಮರ್ಥ ಓಟಗಾರನಾಗಿರುವ ಸುರೇಶ್ ಶೆಟ್ಟಿ ತಮ್ಮ ತಂದೆ ತಾಯಿ ಹಾಗೂ ಪತ್ನಿ ರೇಣುಕಾ ಶೆಟ್ಟಿ ಮಕ್ಕಳಾದ ಆರಾಧ್ಯ ಮತ್ತು ಅನ್ವಿಕಾರ ಜೊತೆ ಸುಖಮಯ ಜೀವನ ಸಾಗಿಸುತ್ತಿದ್ದಾರೆ.
ಇವರ ಈ ಕಂಬಳ ಕ್ಷೇತ್ರದ ಸಾಧನೆ ಹೀಗೆ ಮುಂದುವರಿಯಲಿ.ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲಿ.ಇವರ ಸಾಧನೆಯ ಹಾದಿಗೆ ಇನ್ನಷ್ಟು ಪ್ರಶಸ್ತಿಗಳು ಅರಸಿ ಬರಲೆನ್ನುವುದೇ ನಮ್ಮೆಲ್ಲರ ಆಶಯ..

5 years ago | [YT] | 226

Namma Kambala

Video Link :- https://youtu.be/SERH_x0SuoE

Like, Share,Subscribe & Support 🙏

5 years ago | [YT] | 145

Namma Kambala

*" ಕಕ್ಯಪದವು ಪೆರ0ಗಾಲ್ ಮನೆತನ "*
ಪೆರಂಗಾಲ್ ಮನೆತನ *" ಅವಿಭಕ್ತ ಕುಟುಂಬ "* ಗ್ ಒಂಜಿ ಸ್ಪಷ್ಟ ಉದಾಹರಣೆ.
ಅವಿಭಾಜಿತ ದಕ್ಷಿಣಕನ್ನಡ ಜೆಲ್ಲೆಡ್ ಮಸ್ತ್ ಈ ರೀತಿದ ಕೂಡು ಕುಟುಂಬ ಇತ್ತಿನ ವಿಚಾರ ಮಾತೆರೆಗ್ಲಾ ಗೊತ್ತು.
ಆಂಡ ಇನಿತ ದಿನೊಕ್ಲೆಡ್ ಈ ಪರಂಪರೆ ಒರಿದಿನ ಒಂಜಿ ಮನೆತನ ಉಂಡುಡ , ಅವು *" ಕಕ್ಯಪದವು ಪೇರಂಗಾಲ್ ದ ಕೃಷಿ ಪ್ರಧಾನ ಮನೆತನ "*
ಶ್ರೀ ವೆಂಕಪ್ಪ ಗೌಡೆರ್ ಬೊಕ್ಕ ಅರೆನ ಧರ್ಮ ಪತ್ನಿ ಶ್ರೀಮತಿ ಶಿವಮ್ಮ ದಂಪತಿಗ್ 7 ಜನ ಜೋಕುಲು.
4 ಆನ್, 3 ಪೊಣ್ಣು.
ಬಾಬು ಗೌಡೆರ್
ತನಿಯಪ್ಪ ಗೌಡೆರ್
ಮುಂಡಪ್ಪ ಗೌಡೆರ್
ಎಲ್ಯಣ್ಣ ಗೌಡೆರ್.
ಮಲ್ಲ ಭೂಮಿ., ಮಲ್ಲ ಕೃಷಿ.
ಅವಿರತ ಶ್ರಮ, ನಿರಂತರ ದುಡಿಮೆದ ರೈತಾಪಿ ಕುಟುಂಬ ಅವ್ವು ಪೇರಂಗಾಲ್ ಗೌಡೆರೆನ ಕೂಡು ಕುಟುಂಬ.
ಕಂಬಳ ಕ್ಷೇತ್ರೊಡು ಮಲ್ಲ ಪುದರ್ ಪೇರಂಗಾಲ್ ದ
70 ನೇ ದಶಕಡ್ಡ್ , ರಡ್ಡ್ ಜಿಲ್ಲೆದ ಮಾತಾ ಹೆಚ್ಚಿನ ಕಂಬುಲಡ್ ಪಾಲ್ ಪಡೆಯಿನ ಎರ್ಲು ಪೇರಂಗಾಲ್ ದ
1978, 1982 ಡು,
ಈ ರಡ್ಡ್ ವರ್ಸ ಪೆರಂಗಲ್ ದ ಸ್ವಂತ ಜಾಗಡ್,
*" ಕಂಬುಲ ಆಯೋಜನೆ ಮಲ್ತ್ ಯಶಸ್ಸು ಪಡೆಯಿನ ಕೀರ್ತಿ ಪೆರಂಗಲ್ ಮನೆತನ ಗ್ "*
ನಾಯೆರ್ ಮಲ್ಲ ವಿಭಾಗೊಡು ಸುಮಾರು 40 ವರ್ಷ ನಿರಂತರ ಪಾಲ್ ಪಡೆದ್ ಅತೀ ಹೆಚ್ಚು ಬಹುಮಾನ ಪಡೆದಿನ ಸಾರ್ಥಕತೆ ಪೆರಂಗಲ್ ದ ಮನೆತನ g.
ಇನಿ 3 ತಲೆಮಾರು ಡ್ಡ್ ಕಂಬುಲ ಕ್ಷೇತ್ರೊಡು ಪಾಲ್ ಪಡೆಪುನ ಉಭಯ ಜಿಲ್ಲೆದ ಕೆಲವೇ ಕೆಲವು ಕುಟುಂಬಲೆಡ್ ,
*" ನಮ್ಮ ಪೆರಂಗಲ್ ದ ಗೌಡೆರೆನ ಕುಟುಂಬಲಾ ಒಂಜಿ ಪಂಡ್ದ್ ಪನ್ಪುನ ವಿಚಾರ , ಅವ್ವು ನಮ್ಮ ಕಕ್ಯಪದವು ಗ್ರಾಮ, ಅಂಚೆನೇ ಬಂಟವಾಳ ತಾಲೂಕು ದ ಮಾತಾ ಕಂಬಳದ ಅಭಿಮಾನಿಲೆಗ್ ಗೌರವದ ವಿಚಾರ "*

ಕಾರ್ತೆಲ್ ತಿಂಗೋಲ್ದ ಕುದಿ.
*" ಕಕ್ಯಪದವು ಸತ್ಯ - ಧರ್ಮ ಕಂಬಳ ಕ್ರೀಡಾಂಗಣಡ್"*
*" ಕಕ್ಯಪದವು ಪೆರಂಗಾಲ್ "*👆👆
*" ಮುಗ್ಧತೆಗ್ ಉದಾಹರಣೆ ಕೋರೋಡಾಂಡ ಅವು ಕಕ್ಯಪದವು ಪೆರಂಗಾಲ್ ದ ಯಜಮಾನೆರ್"*
*" + ಪೆರಂಗಾಲ್ ದ ಕಂಬುಲ ಟೀಂ"*
*" ಅಪ್ಪಟ ಕ್ರಷಿಕ ಸಮುದಾಯದ ಕಂಬುಲ ಟೀಂ"*
7 ಎಕ್ರೆ ಗುಡ್ಡೆನ್ ಗರ್ತ್ ದ್, ಬೆನ್ನಿದ ಕಂಡ ಮಲ್ದಿನ ಸಾಮರ್ಥ್ಯದ ಪೆರಂಗಾಲ್ ಸಹೋದರೆರ್,
ಜೆಸಿಬಿ ಇಜ್ಜಂದಿನ ಆ 1979 ಡ್ದು 1982ದ ಕಾಲೋಡು.
ಪಿಕ್ಕಾಸ್, ಕುಂಟನಿಡ್ ಮಣ್ಣ್ ಗರ್ತ್ ದ್, ಬಟ್ಟಿಡ್ ತುಂಬುದು 7 ಎಕ್ರೆ ಕಂಡ ಮಲ್ದಿನ ಆ ಸಹೋದರೆರ್.
ಅಗಲೆನ ಸಾಧನೆಗ್ ನಮ 🙏🙏 ಕೈ ಮುಗಿಪೋಡು.
ಈ ಕಂಡೋಡೇ ಒಂಜಿ ಮಲ್ಲ ಕಂಬುಲ ಮಲ್ದ್ ಉದ್ಘಾಟನೆ ಮಲ್ದಿನಗುಲು ಲಾ,
1982 ಡು ಪೆರಂಗಾಲ್ ಸಹೋದರೆರ್.
ಕಂಬುಲ ಕ್ಷೇತ್ರೋಡು ಇನಿಕ್ಲ್ ಮಾ ಮಲ್ಲ ಪುದರ್,
ಪೆರಂಗಾಲ್ ದಗಲೆನ, ನಾಯೆರ್ ಮಲ್ಲ ವಿಭಾಗೋಡು
ನಾಯೆರ್ ದ ವಿಭಾಗೋಡು ಸೀನಿಯರ್ ಮೋಸ್ಟ್ ಯಜಮಾನೆರ್ ಪಂಡ್ದ್ ನಮ ಪನೋಡಾಂಡ,
*" ಅವು ರಡ್ಡ್ ಪಾಲ್ದಗುಲು, 1. ಸಾಣೂರು 2 . ಪೆರಂಗಾಲ್"*
*" ಕಂಬುಲ ಕ್ಷೇತ್ರದ ಭಗೀರಥೆರ್ 👆👆"*
: *ವೂವ್ವೇ ಪ್ರಶಸ್ತಿ ಪುರಸ್ಕಾರ ನಿಜವಾದ್ ಕೋರೋಡಾಯಿನಿ 👆👆👆 ಈ ರಡ್ಡ್ ಕಂಬುಲದ ಭೀಷ್ಮೆರೆಗ್*.

5 years ago | [YT] | 224

Namma Kambala

ನೆತ್ತಿಬಲ್ಲ್ : ನೆತ್ತಿಯ ಮೇಲೆ ಕೋಡಿಗೆ ಕಟ್ಟಿದ ಮರ ಜಾರದಂತೆ ಎಳೆದು ಹಿಡಿಯುತ್ತದೆ. ಗೊಂಡೆ, ಬೆಳ್ಳಿ ಪದಕದೊಂದಿಗೆ ಸಿಂಗಾರಕ್ಕೂ ಕೋಣಗಳಿಗೆ ಕಿರೀಟವಿಟ್ಟಂತೆ ಕಾಣುತ್ತದೆ. ಇದಕ್ಕೆ ಕಾಸರಕನ ಸೊಪ್ಪು, ಹೂವಿನ ಗಿಡದ ಸೊಪ್ಪು ಗೊಂಡೆ ಕಟ್ಟುತ್ತಾರೆ. ದೃಷ್ಟಿ ತಾಗದಂತೆ ಕಾಸರಕನ ಸೊಪ್ಪು ಬಳಸುತ್ತಾರೆ.

5 years ago | [YT] | 158