ರಿವೀಲ್ ಆಯ್ತು ಅಮಿತಾಭ್ ಬಚ್ಚನ್ ಬ್ಯಾಂಕ್ ಬ್ಯಾಲೆನ್ಸ್; ಲೆಕ್ಕ ಮಾಡೋಕೆ ಎರಡು ಕೈ ಬೇಕು
Amitabh Bachchan Net Worth: ಅಮಿತಾಭ್ ಬಚ್ಚನ್ ಬಳಿ 54 ಕೋಟಿ ರೂಪಾಯಿಯ ಜ್ಯುವೆಲರಿ ಇದೆ. ಜಯಾ ಬಚ್ಚನ್ ಅವರ ಬಳಿ 40.97 ಕೋಟಿ ರೂಪಾಯಿ ಜ್ಯುವೆಲರಿ ಇದೆ. ಇಬ್ಬರಿಂದ 849 ಕೋಟಿ ರೂಪಾಯಿ ಚರಾಸ್ತಿ ಇದೆ. ಜಯಾ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10 ಕೋಟಿ ರೂಪಾಯಿ ಇದೆ.
ಬಾಲಿವುಡ್ ಸೆಲೆಬ್ರಿಟಿಗಳ ಆಸ್ತಿಗಳ ಬಗ್ಗೆ ಎಲ್ಲರಿಗೂ ಒಂದು ಕುತೂಹಲ ಇರುತ್ತದೆ. ಯಾರ ಆಸ್ತಿ ಎಷ್ಟಿದೆ ಎಂದು ತಿಳಿದುಕೊಳ್ಳಲು ಫ್ಯಾನ್ಸ್ ಉತ್ಸುಕರಾಗಿರುತ್ತಾರೆ. ಈಗ ಬಾಲಿವುಡ್ನ ಅಮಿತಾಭ್ ಬಚ್ಚನ್ (Amitabh Bachchan) ಹಾಗೂ ಜಯಾ ಬಚ್ಚನ್ ಅವರ ಆಸ್ತಿ ವಿವರ ಲಭ್ಯವಾಗಿದೆ. ಜಯಾ ಬಚ್ಚನ್ ನಟನೆಯ ಜೊತೆಗೆ ರಾಜಕೀಯದಲ್ಲೂ ಬ್ಯುಸಿ ಇದ್ದಾರೆ. ಅವರು ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಸಮಾಜವಾದಿ ಪಾರ್ಟಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವೇಳೆ ಅವರು ತಮ್ಮ ಆಸ್ತಿ ವಿವರ ನೀಡಿದ್ದಾರೆ. ನಾಮನಿರ್ದೇಶನದ ವೇಳೆ ನೀಡಿರುವ ಆಸ್ತಿ ವಿವರ ಪ್ರಕಾರ, ಬಚ್ಚನ್ ಕುಟುಂಬ 1,578 ಕೋಟಿ ರೂಪಾಯಿ ಸ್ವತ್ತುಗಳನ್ನು ಹೊಂದಿದ್ದಾರೆ. 2022-23ರ ಅವಧಿಯಲ್ಲಿ ವೈಯಕ್ತಿವಾಗಿ ಅವರು 1.63 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರ ವೈಯಕ್ತಿಕ ನೆಟ್ವರ್ತ್ 273 ಕೋಟಿ ರೂಪಾಯಿ ಇದೆ. ಅವರ ಬಳಿ 54 ಕೋಟಿ ರೂಪಾಯಿಯ ಜ್ಯುವೆಲರಿ ಇದೆ. 16 ವಾಹನಗಳು ಇದ್ದು ಇದರಬೆಲೆ 17.66 ಕೋಟಿ ರೂಪಾಯಿ ಆಗಿದೆ.
ಜಯಾ ಬಚ್ಚನ್ ಅವರ ಬಳಿ 40.97 ಕೋಟಿ ರೂಪಾಯಿ ಜ್ಯುವೆಲರಿ ಇದೆ. ಅವರ ಬಳಿ ವಾಹನಗಳ ಸಂಖ್ಯೆ ಕಡಿಮೆ. ಇಬ್ಬರಿಂದ 849 ಕೋಟಿ ರೂಪಾಯಿ ಚರಾಸ್ತಿ ಇದೆ. ಜಯಾ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10 ಕೋಟಿ ರೂಪಾಯಿ ಇದೆ. ಅಮಿತಾಭ್ ಬಚ್ಚನ್ ಬಳಿ 120 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇದೆ! ವಿವರವಾಗಿ ಹೇಳಬೇಕು ಎಂದರೆ ಅವರ ಖಾತೆಯಲ್ಲಿ 120,45,62,083 ರೂಪಾಯಿ ಇದೆ. ಜಯಾ ಬಚ್ಚನ್ ಅವರಿಗೆ ಬೇರೆ ಬೇರೆ ಮೂಲಗಳಿಂದ ಹಣ ಬರುತ್ತದೆ. ಬ್ರ್ಯಾಂಡ್ಗಳ ಪ್ರಚಾರ, ಎಂಪಿ ಸ್ಯಾಲರಿ ಹಾಗೂ ಸಿನಿಮಾಗಳಿಂದ ಹಣ ಬರುತ್ತದೆ. ಅಮಿತಾಭ್ ಬಚ್ಚನ್ ಅವರಿಗೆ ಬಡ್ಡಿ, ಬಾಡಿಗೆ, ಡಿವಿಡಂಟ್, ಸೋಲಾರ್ ಪ್ಲ್ಯಾಂಟ್ ಮೊದಲಾದ ಕಡೆಗಳಿಂದ ಹಣ ಬರುತ್ತದೆ ಎಂದು ತಿಳಿಸಿದ್ದಾರೆ.
ತಪ್ಪಿಸಿಕೊಂಡ ಹರಕೆ ಕುರಿ ಮರಳಿದೆ ಮಾರಿಯಾಗಿ, ಮಾಸ್ಟರ್ ಕ್ಲಾಸ್ಗೆ ತಯಾರಾಗಿರಿ ಬರ್ತಿದ್ದಾನೆ ‘ಟೋಬಿ’ | Just News
ಟ್ರೈಲರ್ನಲ್ಲಿ ಕತೆಯ ಸಣ್ಣ ಎಳೆಗಳನ್ನಷ್ಟೆ ಬಿಟ್ಟುಕೊಟ್ಟು ಸಿನಿಮಾ ಬಗ್ಗೆ ಕುತೂಹಲ ಮೂಡುವಂತೆ ಮಾಡಿದ್ದಾರೆ ರಾಜ್ ಬಿ ಶೆಟ್ಟಿ ಮತ್ತು ತಂಡ. ತೀರ ಅಮಾಯಕನೊಬ್ಬ ತನ್ನ ‘ಒಡೆಯರ’ ಕುತ್ಸಿತ ಕೃತ್ಯಗಳಿಗೆ ತನ್ನವರನ್ನು ಕಳೆದುಕೊಂಡು, ತನ್ನನ್ನೂ ಬಲಿ ತೆಗೆದುಕೊಳ್ಳಲು ಹವಣಿಸಿದಾಗ ಅದರಿಂದ ತಪ್ಪಿಸಿಕೊಂಡು ದುಷ್ಟರ ಸಂಹಾರಕ್ಕೆ ಸಿದ್ಧನಾಗಿ ಬರುವ ಕತೆಯನ್ನು ಈ ಸಿನಿಮಾ ಒಳಗೊಂಡಿರುವ ಅನುಮಾನವನ್ನು ಟ್ರೈಲರ್ ಮೂಡಿಸುತ್ತಿದೆ.
Nandini Milk Brand: ಟಾಪ್ 10 ಬ್ರ್ಯಾಂಡ್ ರ‍್ಯಾಂಕಿಂಗ್‌ನಲ್ಲಿ ನಮ್ಮ ಕರ್ನಾಟಕದ ಹೆಮ್ಮೆಯ ನಂದಿನಿ | Just News
ನಂದಿನಿ(Nandini Brand) ಬ್ರ್ಯಾಂಡ್ ಒಂದು ಸ್ಥಾನ ಮೇಲಕ್ಕೇರಿದೆ. ಈ ಮೊದಲ 6ನೇ ಸ್ಥಾನದಲ್ಲಿದ್ದ ನಂದಿನ 5ನೇ ಸ್ಥಾನಕ್ಕೆ ಜಿಗಿದೆ. ಇದರೊಂದಿಗೆ ಹಲವಾರು ವಿವಾದಗಳ ನಡುವೆಯೂ ನಂದಿನಿ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಸ್ಥಾನ ಕಾಪಾಡಿಕೊಂಡಿದೆ. ಅಮುಲ್ ಹೊರತುಪಡಿಸಿ ಟಾಪ್ 10 ಬ್ರಾಂಡ್‌ಗಳ ಪಟ್ಟಿಯಲ್ಲಿ ನಂದಿನಿ ಏಕೈಕ ಡೈರಿ ಬ್ರ್ಯಾಂಡ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಇನ್ನು ನಂದಿನಿಗೆ ಪೈಪೋಟಿ ನೀಡುತ್ತಿರುವ ಅಮುಲ್ 3ನೇ ಸ್ಥಾನಕ್ಕೆ ಕುಸಿದಿದ್ದರೆ.,ಪಾರ್ಲೆ ಬಿಸ್ಕೆಟ್ ಮೊದಲ ಸ್ಥಾನದಲ್ಲಿದೆ.
Viral Updates IN Just News : ಚಲಿಸುತ್ತಿರುವ ಗೂಡ್ಸ್ ರೈಲಿನಲ್ಲಿ ಮಕ್ಕಳ ಆಟವಾಡುತ್ತಿರುವ ದೃಶ್ಯ | Just News
ಚಲಿಸುತ್ತಿರುವ ಗೂಡ್ಸ್ ರೈಲಿನಲ್ಲಿ ಮಕ್ಕಳು ಅಪಾಯಕಾರಿ ಸಾಹಸ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚಲಿಸುತ್ತಿರುವ ಗೂಡ್ಸ್ ರೈಲಿನ ಕೆಳಗೆ ಮಕ್ಕಳು ಆಟವಾಡುತ್ತಿರುವ ದೃಶ್ಯ
ಚಲಿಸುತ್ತಿರುವ ಗೂಡ್ಸ್ ರೈಲಿನ ಕೆಳಗೆ ಮಕ್ಕಳು ಆಟವಾಡುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿದೆ. ಇದು ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ರೈಲಿನ ಕಬ್ಬಿಣದ ಪ್ಲೇಟ್‌ಗಳ ನಡುವಿನ ಜಾಗದಲ್ಲಿ ನಾಲ್ವರು ಮಕ್ಕಳು ಕುಳಿತಿರುವುದು ಕಂಡುಬಂದಿದೆ. ಮಕ್ಕಳು ಟೊಳ್ಳಾದ ಜಾಗದಲ್ಲಿ ಹೊಕ್ಕು ಆಟವಾಡುತ್ತಿದ್ದರು
ರೈಲು ನಿಂತಿದ್ದಾಗ ಸರಕುಗಳನ್ನು ಪರಿಶೀಲಿಸುತ್ತಿದ್ದಾಗ ಕೂಲಿ ಕಾರ್ಮಿಕರೊಬ್ಬರು ಮಕ್ಕಳನ್ನು ಅಧಿಕಾರಿಗಳು ಕಂಡಿದ್ದಾರೆ. ಅವರು ರೈಲ್ವೆ ಮತ್ತು ಗಣಿಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಮತ್ತು ರೈಲಿನ ಕೆಳಗೆ ಮಕ್ಕಳು ಇರುವ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಿದ್ದರು.
ಕರ್ನಾಟಕದಲ್ಲಿ ಆಡಳಿತವೆಂಬುದು ತಮಾಷೆಯಾಗಿದೆ; ಬಿಜೆಪಿ ವ್ಯಂಗ್ಯ, ಕಾರಣ ಇಲ್ಲಿದೆ
| Just News
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಕರ್ನಾಟಕದಲ್ಲಿ ಆಡಳಿತವೆಂಬುದು ತಮಾಷೆಯಾಗಿದೆ ಎಂದು ಹೇಳಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kausalya Supraja Rama: ಪತ್ನಿ ಮಿಲನಾರ ಪಾತ್ರದ ಬಗ್ಗೆ ಡಾರ್ಲಿಂಗ್ ಕೃಷ್ಣ ಹೆಮ್ಮೆಯ ಮಾತು
Darling Krishna: ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಪತ್ನಿ ಮಿಲನಾ ನಾಗರಾಜ್ ಅವರ ನಟನೆಯನ್ನು ಪತಿ ಡಾರ್ಲಿಂಗ್ ಕೃಷ್ಣ ಕೊಂಡಾಡಿದ್ದಾರೆ.
‘ಲವ್ ಮಾಕ್ಟೆಲ್’ ಸಿನಿಮಾ ಅವರಿಗೆ ಬೇರೆಯದ್ದೇ ರೀತಿಯ ಇಮೇಜು ನೀಡಿತ್ತು, ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಮಿಲನಾಗೆ ತುಸು ಮಾಸ್ ಇಮೇಜು ಕೊಡಲಿದೆ. ಬಹಳ ಚೆನ್ನಾಗಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೋಡಿದವರಿಗೆಲ್ಲ ಮಿಲನಾ ಅವರ ಪಾತ್ರ ಬಹಳ ಇಷ್ಟವಾಗುತ್ತಿದೆ. ಜನರಿಗೂ ಸಹ ಆ ಪಾತ್ರ ಬಹಳ ಇಷ್ಟವಾಗಲಿದೆ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಗ್ಗೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಬಹಳ ಮುಖ್ಯವಾದ ಹಾಗೂ ಜನಜನಿತವಾದ ವಿಷಯವೊಂದನ್ನು ಹಾಸ್ಯ ಮತ್ತು ಭಾವುಕ ನೆಲೆಯಲ್ಲಿ ಈ ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ. ಕುಟುಂಬವೆಲ್ಲ ಕೂತು ನೋಡಬಹುದಾದ ಸಿನಿಮಾ. ಈ ದಶಕದಲ್ಲಿ ಇಂಥಹಾ ಒಳ್ಳೆಯ ಕೌಟುಂಬಿಕ ಸಿನಿಮಾ ಬಂದಿಲ್ಲ ಎಂದೇ ಹೇಳಬಹುದು ಎಂದರು.
ಸಿನಿಮಾದಲ್ಲಿ ಸುಧಾ ಬೆಳವಾಡಿ ಅವರ ಪಾತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಡಾರ್ಲಿಂಗ್ ಕೃಷ್ಣ, ನಾಯಕನ ತಾಯಿಯ ಪಾತ್ರದಲ್ಲಿ ಸುಧಾ ನಟಿಸಿದ್ದಾರೆ. ಬಹಳ ಇನ್ನೋಸೆಂಟ್ ಆದ ಜೊತೆಗೆ ಪೆದ್ದಿಯ ರೀತಿ ವರ್ತಿಸುವ ಪಾತ್ರ ಅದು. ಎಲ್ಲರಿಗೂ ಗೊತ್ತಿರುವಂತೆ ಸುಧಾ ಬೆಳವಾಡಿ ಅವರ ಮುಖದಲ್ಲಿ ಬಹಳ ಮುಗ್ಧತೆ ಇದೆ. ಮತ್ತು ಅದ್ಬುತವಾದ ನಟಿ ಸಹ ಅವರು. ಹಾಗಾಗಿ ಅವರನ್ನೇ ಪಾತ್ರಕ್ಕೆ ಆಯ್ಕೆ ಮಾಡಿಕೊಂಡೆವು. ಅದ್ಭುತವಾಗಿ ಅವರು ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾ ನೋಡಿದವರು ಅವರ ಪಾತ್ರ ನೋಡಿ ಕಣ್ಣೀರು ಹಾಕಿದ್ದನ್ನು ನಾನು ನೋಡಿದ್ದೇನೆ ಎಂದರು. ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಲಿದೆ.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಎಣ್ಣೆ ಹಾಡು ಬೇಕಿತ್ತಾ ಎಂದವರಿಗೆ ಶಶಾಂಕ್ ಉತ್ತರ
ಡಾರ್ಲಿಂಗ್ ಕೃಷ್ಣ (Darling Krishna)-ಮಿಲನಾ ನಾಗರಾಜ್ (Milana Nagaraj)-ಬೃಂದಾ ಆಚಾರ್ಯ ಅವರುಗಳು ಒಟ್ಟಿಗೆ ನಟಿಸಿರುವ ಮಹಿಳಾಪರ ಸಂದೇಶವುಳ್ಳ ಸಿನಿಮಾ ‘ಕೌಸಲ್ಯ ಸುಪ್ರಜಾ ರಾಮ’ ಜುಲೈ 28ಕ್ಕೆ ಬಿಡುಗಡೆ ಆಗುತ್ತಿದೆ. ಸಿನಿಮಾದ ಬಗ್ಗೆ ಉತ್ತಮ ನಿರೀಕ್ಷೆಗಳಿವೆ. ‘ಮೊಗ್ಗಿನ ಮನಸ್ಸು’, ‘ಕೃಷ್ಣನ್ ಲವ್ ಸ್ಟೋರಿ’, ‘ಬಚ್ಚನ್’ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶಶಾಂಕ್ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿ ಹಿಟ್ ಆಗಿದೆ. ಅದರಲ್ಲಿಯೂ ಮಿಲನಾ ನಾಗರಾಜ್ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿರುವ ಎಣ್ಣೆ ಹಾಡು ಸಖತ್ ವೈರಲ್ ಆಗಿದೆ. ಅದರ ಬೆನ್ನಲ್ಲೆ ‘ಕೌಸಲ್ಯ ಸುಪ್ರಜಾ ರಾಮ’ ಎಂಬುವ ಧಾರ್ಮಿಕ, ಭಕ್ತಿಪೂರ್ವಕ ಹೆಸರುಳ್ಳ ಸಿನಿಮಾದಲ್ಲಿ ಇಂಥಹಾ ಎಣ್ಣೆ ಹಾಡು ಬೇಕಿತ್ತಾ ಎಂದು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗಳಿಗೆ ಸ್ವತಃ ಶಶಾಂಕ್ ಉತ್ತರ ನೀಡಿದ್ದಾರೆ.
”ನಮ್ಮ ಸಿನಿಮಾಕ್ಕೂ ರಾಮಾಯಣಕ್ಕೂ ಅಥವಾ ಶ್ರೀರಾಮನಿಗೂ ಯಾವುದೇ ಸಂಬಂಧ ಹೊಂದಿಲ್ಲ. ನಾವು ‘ಕೌಸಲ್ಯ ಸುಪ್ರಜಾ ರಾಮ’ ಎಂಬ ಹೆಸರು ಆಯ್ದುಕೊಂಡಿದ್ದು, ಅಮ್ಮ-ಮಗನ ಸಂಬಂಧದ ಕತೆಯನ್ನು ಸಿನಿಮಾ ಹೊಂದಿರುವ ಕಾರಣಕ್ಕಾಗಿ ಮಾತ್ರ. ‘ಕೌಸಲ್ಯ ಸುಪ್ರಜಾ ರಾಮ’ ಎಂದರೆ ಕೌಸಲ್ಯಯೆಯ ಒಳ್ಳೆಯ ಮಗನೇ ರಾಮ ಎಂದು ಅರ್ಥ” ಎಂದು ವಿವರಿಸಿದ್ದಾರೆ ಶಶಾಂಕ್.
Udupi News: ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು
ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ಹೌದು..ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ, (ಜುಲೈ 24): ಕರ್ನಾಟಕದ ವಿವಿಧ ಭಾಗಗಳ ಭಾರೀ ಮಳೆಯಾಗುತ್ತಿದ್ದು (rain), ನದಿ-ಹಳ್ಳಗಳು ತುಂಬಿಹರಿಯುತ್ತಿವೆ. ಇದರಿಂದ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ. ಅದ್ಯಾವುದಕ್ಕೂ ಕ್ಯಾರೇ ಎನ್ನದ ಯುವಕನೋರ್ವ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ಹೌದು…ರೀಲ್ಸ್ (Reels) ಮಾಡಲು ಹೋಗಿ ಜಾರಿ ಜಲಪಾತಕ್ಕೆ (Water Falls) ಬಿದ್ದು ಯುವಕ ಮೃತಪಟ್ಟಿದ್ದಾನೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತದಲ್ಲಿ (Arsinagundi Falls) ಈ ಘಟನೆ ನಡೆದಿದೆ.
JUST NEWS KANNADA
ರಿವೀಲ್ ಆಯ್ತು ಅಮಿತಾಭ್ ಬಚ್ಚನ್ ಬ್ಯಾಂಕ್ ಬ್ಯಾಲೆನ್ಸ್; ಲೆಕ್ಕ ಮಾಡೋಕೆ ಎರಡು ಕೈ ಬೇಕು
Amitabh Bachchan Net Worth: ಅಮಿತಾಭ್ ಬಚ್ಚನ್ ಬಳಿ 54 ಕೋಟಿ ರೂಪಾಯಿಯ ಜ್ಯುವೆಲರಿ ಇದೆ. ಜಯಾ ಬಚ್ಚನ್ ಅವರ ಬಳಿ 40.97 ಕೋಟಿ ರೂಪಾಯಿ ಜ್ಯುವೆಲರಿ ಇದೆ. ಇಬ್ಬರಿಂದ 849 ಕೋಟಿ ರೂಪಾಯಿ ಚರಾಸ್ತಿ ಇದೆ. ಜಯಾ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10 ಕೋಟಿ ರೂಪಾಯಿ ಇದೆ.
ಬಾಲಿವುಡ್ ಸೆಲೆಬ್ರಿಟಿಗಳ ಆಸ್ತಿಗಳ ಬಗ್ಗೆ ಎಲ್ಲರಿಗೂ ಒಂದು ಕುತೂಹಲ ಇರುತ್ತದೆ. ಯಾರ ಆಸ್ತಿ ಎಷ್ಟಿದೆ ಎಂದು ತಿಳಿದುಕೊಳ್ಳಲು ಫ್ಯಾನ್ಸ್ ಉತ್ಸುಕರಾಗಿರುತ್ತಾರೆ. ಈಗ ಬಾಲಿವುಡ್ನ ಅಮಿತಾಭ್ ಬಚ್ಚನ್ (Amitabh Bachchan) ಹಾಗೂ ಜಯಾ ಬಚ್ಚನ್ ಅವರ ಆಸ್ತಿ ವಿವರ ಲಭ್ಯವಾಗಿದೆ. ಜಯಾ ಬಚ್ಚನ್ ನಟನೆಯ ಜೊತೆಗೆ ರಾಜಕೀಯದಲ್ಲೂ ಬ್ಯುಸಿ ಇದ್ದಾರೆ. ಅವರು ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಸಮಾಜವಾದಿ ಪಾರ್ಟಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವೇಳೆ ಅವರು ತಮ್ಮ ಆಸ್ತಿ ವಿವರ ನೀಡಿದ್ದಾರೆ.
ನಾಮನಿರ್ದೇಶನದ ವೇಳೆ ನೀಡಿರುವ ಆಸ್ತಿ ವಿವರ ಪ್ರಕಾರ, ಬಚ್ಚನ್ ಕುಟುಂಬ 1,578 ಕೋಟಿ ರೂಪಾಯಿ ಸ್ವತ್ತುಗಳನ್ನು ಹೊಂದಿದ್ದಾರೆ. 2022-23ರ ಅವಧಿಯಲ್ಲಿ ವೈಯಕ್ತಿವಾಗಿ ಅವರು 1.63 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರ ವೈಯಕ್ತಿಕ ನೆಟ್ವರ್ತ್ 273 ಕೋಟಿ ರೂಪಾಯಿ ಇದೆ. ಅವರ ಬಳಿ 54 ಕೋಟಿ ರೂಪಾಯಿಯ ಜ್ಯುವೆಲರಿ ಇದೆ. 16 ವಾಹನಗಳು ಇದ್ದು ಇದರಬೆಲೆ 17.66 ಕೋಟಿ ರೂಪಾಯಿ ಆಗಿದೆ.
ಜಯಾ ಬಚ್ಚನ್ ಅವರ ಬಳಿ 40.97 ಕೋಟಿ ರೂಪಾಯಿ ಜ್ಯುವೆಲರಿ ಇದೆ. ಅವರ ಬಳಿ ವಾಹನಗಳ ಸಂಖ್ಯೆ ಕಡಿಮೆ. ಇಬ್ಬರಿಂದ 849 ಕೋಟಿ ರೂಪಾಯಿ ಚರಾಸ್ತಿ ಇದೆ. ಜಯಾ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10 ಕೋಟಿ ರೂಪಾಯಿ ಇದೆ. ಅಮಿತಾಭ್ ಬಚ್ಚನ್ ಬಳಿ 120 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇದೆ! ವಿವರವಾಗಿ ಹೇಳಬೇಕು ಎಂದರೆ ಅವರ ಖಾತೆಯಲ್ಲಿ 120,45,62,083 ರೂಪಾಯಿ ಇದೆ.
ಜಯಾ ಬಚ್ಚನ್ ಅವರಿಗೆ ಬೇರೆ ಬೇರೆ ಮೂಲಗಳಿಂದ ಹಣ ಬರುತ್ತದೆ. ಬ್ರ್ಯಾಂಡ್ಗಳ ಪ್ರಚಾರ, ಎಂಪಿ ಸ್ಯಾಲರಿ ಹಾಗೂ ಸಿನಿಮಾಗಳಿಂದ ಹಣ ಬರುತ್ತದೆ. ಅಮಿತಾಭ್ ಬಚ್ಚನ್ ಅವರಿಗೆ ಬಡ್ಡಿ, ಬಾಡಿಗೆ, ಡಿವಿಡಂಟ್, ಸೋಲಾರ್ ಪ್ಲ್ಯಾಂಟ್ ಮೊದಲಾದ ಕಡೆಗಳಿಂದ ಹಣ ಬರುತ್ತದೆ ಎಂದು ತಿಳಿಸಿದ್ದಾರೆ.
2 years ago | [YT] | 7
View 0 replies
JUST NEWS KANNADA
Chandrayaan-3 Moon Mission Successful | ಚಂದ್ರಯಾನ ಯಶಸ್ವಿ, ಇತಿಹಾಸ ನಿರ್ಮಿಸಿದ ಭಾರತ ! | ISRO
#Chandrayaana
2 years ago | [YT] | 5
View 0 replies
JUST NEWS KANNADA
ತಪ್ಪಿಸಿಕೊಂಡ ಹರಕೆ ಕುರಿ ಮರಳಿದೆ ಮಾರಿಯಾಗಿ, ಮಾಸ್ಟರ್ ಕ್ಲಾಸ್ಗೆ ತಯಾರಾಗಿರಿ ಬರ್ತಿದ್ದಾನೆ ‘ಟೋಬಿ’ | Just News
ಟ್ರೈಲರ್ನಲ್ಲಿ ಕತೆಯ ಸಣ್ಣ ಎಳೆಗಳನ್ನಷ್ಟೆ ಬಿಟ್ಟುಕೊಟ್ಟು ಸಿನಿಮಾ ಬಗ್ಗೆ ಕುತೂಹಲ ಮೂಡುವಂತೆ ಮಾಡಿದ್ದಾರೆ ರಾಜ್ ಬಿ ಶೆಟ್ಟಿ ಮತ್ತು ತಂಡ. ತೀರ ಅಮಾಯಕನೊಬ್ಬ ತನ್ನ ‘ಒಡೆಯರ’ ಕುತ್ಸಿತ ಕೃತ್ಯಗಳಿಗೆ ತನ್ನವರನ್ನು ಕಳೆದುಕೊಂಡು, ತನ್ನನ್ನೂ ಬಲಿ ತೆಗೆದುಕೊಳ್ಳಲು ಹವಣಿಸಿದಾಗ ಅದರಿಂದ ತಪ್ಪಿಸಿಕೊಂಡು ದುಷ್ಟರ ಸಂಹಾರಕ್ಕೆ ಸಿದ್ಧನಾಗಿ ಬರುವ ಕತೆಯನ್ನು ಈ ಸಿನಿಮಾ ಒಳಗೊಂಡಿರುವ ಅನುಮಾನವನ್ನು ಟ್ರೈಲರ್ ಮೂಡಿಸುತ್ತಿದೆ.
2 years ago | [YT] | 9
View 0 replies
JUST NEWS KANNADA
Nandini Milk Brand: ಟಾಪ್ 10 ಬ್ರ್ಯಾಂಡ್ ರ‍್ಯಾಂಕಿಂಗ್‌ನಲ್ಲಿ ನಮ್ಮ ಕರ್ನಾಟಕದ ಹೆಮ್ಮೆಯ ನಂದಿನಿ | Just News
ನಂದಿನಿ(Nandini Brand) ಬ್ರ್ಯಾಂಡ್ ಒಂದು ಸ್ಥಾನ ಮೇಲಕ್ಕೇರಿದೆ. ಈ ಮೊದಲ 6ನೇ ಸ್ಥಾನದಲ್ಲಿದ್ದ ನಂದಿನ 5ನೇ ಸ್ಥಾನಕ್ಕೆ ಜಿಗಿದೆ. ಇದರೊಂದಿಗೆ ಹಲವಾರು ವಿವಾದಗಳ ನಡುವೆಯೂ ನಂದಿನಿ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಸ್ಥಾನ ಕಾಪಾಡಿಕೊಂಡಿದೆ. ಅಮುಲ್ ಹೊರತುಪಡಿಸಿ ಟಾಪ್ 10 ಬ್ರಾಂಡ್‌ಗಳ ಪಟ್ಟಿಯಲ್ಲಿ ನಂದಿನಿ ಏಕೈಕ ಡೈರಿ ಬ್ರ್ಯಾಂಡ್ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ. ಇನ್ನು ನಂದಿನಿಗೆ ಪೈಪೋಟಿ ನೀಡುತ್ತಿರುವ ಅಮುಲ್ 3ನೇ ಸ್ಥಾನಕ್ಕೆ ಕುಸಿದಿದ್ದರೆ.,ಪಾರ್ಲೆ ಬಿಸ್ಕೆಟ್ ಮೊದಲ ಸ್ಥಾನದಲ್ಲಿದೆ.
2 years ago (edited) | [YT] | 9
View 0 replies
JUST NEWS KANNADA
Viral Updates IN Just News : ಚಲಿಸುತ್ತಿರುವ ಗೂಡ್ಸ್ ರೈಲಿನಲ್ಲಿ ಮಕ್ಕಳ ಆಟವಾಡುತ್ತಿರುವ ದೃಶ್ಯ | Just News
ಚಲಿಸುತ್ತಿರುವ ಗೂಡ್ಸ್ ರೈಲಿನಲ್ಲಿ ಮಕ್ಕಳು ಅಪಾಯಕಾರಿ ಸಾಹಸ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚಲಿಸುತ್ತಿರುವ ಗೂಡ್ಸ್ ರೈಲಿನ ಕೆಳಗೆ ಮಕ್ಕಳು ಆಟವಾಡುತ್ತಿರುವ ದೃಶ್ಯ
ಚಲಿಸುತ್ತಿರುವ ಗೂಡ್ಸ್ ರೈಲಿನ ಕೆಳಗೆ ಮಕ್ಕಳು ಆಟವಾಡುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿದೆ. ಇದು ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ರೈಲಿನ ಕಬ್ಬಿಣದ ಪ್ಲೇಟ್‌ಗಳ ನಡುವಿನ ಜಾಗದಲ್ಲಿ ನಾಲ್ವರು ಮಕ್ಕಳು ಕುಳಿತಿರುವುದು ಕಂಡುಬಂದಿದೆ. ಮಕ್ಕಳು ಟೊಳ್ಳಾದ ಜಾಗದಲ್ಲಿ ಹೊಕ್ಕು ಆಟವಾಡುತ್ತಿದ್ದರು
ರೈಲು ನಿಂತಿದ್ದಾಗ ಸರಕುಗಳನ್ನು ಪರಿಶೀಲಿಸುತ್ತಿದ್ದಾಗ ಕೂಲಿ ಕಾರ್ಮಿಕರೊಬ್ಬರು ಮಕ್ಕಳನ್ನು ಅಧಿಕಾರಿಗಳು ಕಂಡಿದ್ದಾರೆ. ಅವರು ರೈಲ್ವೆ ಮತ್ತು ಗಣಿಗಾರಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಮತ್ತು ರೈಲಿನ ಕೆಳಗೆ ಮಕ್ಕಳು ಇರುವ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಿದ್ದರು.
2 years ago | [YT] | 11
View 0 replies
JUST NEWS KANNADA
ಕರ್ನಾಟಕದಲ್ಲಿ ಆಡಳಿತವೆಂಬುದು ತಮಾಷೆಯಾಗಿದೆ; ಬಿಜೆಪಿ ವ್ಯಂಗ್ಯ, ಕಾರಣ ಇಲ್ಲಿದೆ | Just News
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಕರ್ನಾಟಕದಲ್ಲಿ ಆಡಳಿತವೆಂಬುದು ತಮಾಷೆಯಾಗಿದೆ ಎಂದು ಹೇಳಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2 years ago (edited) | [YT] | 11
View 0 replies
JUST NEWS KANNADA
Kausalya Supraja Rama: ಪತ್ನಿ ಮಿಲನಾರ ಪಾತ್ರದ ಬಗ್ಗೆ ಡಾರ್ಲಿಂಗ್ ಕೃಷ್ಣ ಹೆಮ್ಮೆಯ ಮಾತು
Darling Krishna: ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಪತ್ನಿ ಮಿಲನಾ ನಾಗರಾಜ್ ಅವರ ನಟನೆಯನ್ನು ಪತಿ ಡಾರ್ಲಿಂಗ್ ಕೃಷ್ಣ ಕೊಂಡಾಡಿದ್ದಾರೆ.
‘ಲವ್ ಮಾಕ್ಟೆಲ್’ ಸಿನಿಮಾ ಅವರಿಗೆ ಬೇರೆಯದ್ದೇ ರೀತಿಯ ಇಮೇಜು ನೀಡಿತ್ತು, ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಮಿಲನಾಗೆ ತುಸು ಮಾಸ್ ಇಮೇಜು ಕೊಡಲಿದೆ. ಬಹಳ ಚೆನ್ನಾಗಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೋಡಿದವರಿಗೆಲ್ಲ ಮಿಲನಾ ಅವರ ಪಾತ್ರ ಬಹಳ ಇಷ್ಟವಾಗುತ್ತಿದೆ. ಜನರಿಗೂ ಸಹ ಆ ಪಾತ್ರ ಬಹಳ ಇಷ್ಟವಾಗಲಿದೆ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಗ್ಗೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಬಹಳ ಮುಖ್ಯವಾದ ಹಾಗೂ ಜನಜನಿತವಾದ ವಿಷಯವೊಂದನ್ನು ಹಾಸ್ಯ ಮತ್ತು ಭಾವುಕ ನೆಲೆಯಲ್ಲಿ ಈ ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ. ಕುಟುಂಬವೆಲ್ಲ ಕೂತು ನೋಡಬಹುದಾದ ಸಿನಿಮಾ. ಈ ದಶಕದಲ್ಲಿ ಇಂಥಹಾ ಒಳ್ಳೆಯ ಕೌಟುಂಬಿಕ ಸಿನಿಮಾ ಬಂದಿಲ್ಲ ಎಂದೇ ಹೇಳಬಹುದು ಎಂದರು.
ಸಿನಿಮಾದಲ್ಲಿ ಸುಧಾ ಬೆಳವಾಡಿ ಅವರ ಪಾತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಡಾರ್ಲಿಂಗ್ ಕೃಷ್ಣ, ನಾಯಕನ ತಾಯಿಯ ಪಾತ್ರದಲ್ಲಿ ಸುಧಾ ನಟಿಸಿದ್ದಾರೆ. ಬಹಳ ಇನ್ನೋಸೆಂಟ್ ಆದ ಜೊತೆಗೆ ಪೆದ್ದಿಯ ರೀತಿ ವರ್ತಿಸುವ ಪಾತ್ರ ಅದು. ಎಲ್ಲರಿಗೂ ಗೊತ್ತಿರುವಂತೆ ಸುಧಾ ಬೆಳವಾಡಿ ಅವರ ಮುಖದಲ್ಲಿ ಬಹಳ ಮುಗ್ಧತೆ ಇದೆ. ಮತ್ತು ಅದ್ಬುತವಾದ ನಟಿ ಸಹ ಅವರು. ಹಾಗಾಗಿ ಅವರನ್ನೇ ಪಾತ್ರಕ್ಕೆ ಆಯ್ಕೆ ಮಾಡಿಕೊಂಡೆವು. ಅದ್ಭುತವಾಗಿ ಅವರು ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾ ನೋಡಿದವರು ಅವರ ಪಾತ್ರ ನೋಡಿ ಕಣ್ಣೀರು ಹಾಕಿದ್ದನ್ನು ನಾನು ನೋಡಿದ್ದೇನೆ ಎಂದರು. ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಜುಲೈ 28ರಂದು ಬಿಡುಗಡೆ ಆಗಲಿದೆ.
2 years ago | [YT] | 9
View 0 replies
JUST NEWS KANNADA
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಎಣ್ಣೆ ಹಾಡು ಬೇಕಿತ್ತಾ ಎಂದವರಿಗೆ ಶಶಾಂಕ್ ಉತ್ತರ
ಡಾರ್ಲಿಂಗ್ ಕೃಷ್ಣ (Darling Krishna)-ಮಿಲನಾ ನಾಗರಾಜ್ (Milana Nagaraj)-ಬೃಂದಾ ಆಚಾರ್ಯ ಅವರುಗಳು ಒಟ್ಟಿಗೆ ನಟಿಸಿರುವ ಮಹಿಳಾಪರ ಸಂದೇಶವುಳ್ಳ ಸಿನಿಮಾ ‘ಕೌಸಲ್ಯ ಸುಪ್ರಜಾ ರಾಮ’ ಜುಲೈ 28ಕ್ಕೆ ಬಿಡುಗಡೆ ಆಗುತ್ತಿದೆ. ಸಿನಿಮಾದ ಬಗ್ಗೆ ಉತ್ತಮ ನಿರೀಕ್ಷೆಗಳಿವೆ. ‘ಮೊಗ್ಗಿನ ಮನಸ್ಸು’, ‘ಕೃಷ್ಣನ್ ಲವ್ ಸ್ಟೋರಿ’, ‘ಬಚ್ಚನ್’ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶಶಾಂಕ್ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿ ಹಿಟ್ ಆಗಿದೆ. ಅದರಲ್ಲಿಯೂ ಮಿಲನಾ ನಾಗರಾಜ್ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿರುವ ಎಣ್ಣೆ ಹಾಡು ಸಖತ್ ವೈರಲ್ ಆಗಿದೆ. ಅದರ ಬೆನ್ನಲ್ಲೆ ‘ಕೌಸಲ್ಯ ಸುಪ್ರಜಾ ರಾಮ’ ಎಂಬುವ ಧಾರ್ಮಿಕ, ಭಕ್ತಿಪೂರ್ವಕ ಹೆಸರುಳ್ಳ ಸಿನಿಮಾದಲ್ಲಿ ಇಂಥಹಾ ಎಣ್ಣೆ ಹಾಡು ಬೇಕಿತ್ತಾ ಎಂದು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗಳಿಗೆ ಸ್ವತಃ ಶಶಾಂಕ್ ಉತ್ತರ ನೀಡಿದ್ದಾರೆ.
”ನಮ್ಮ ಸಿನಿಮಾಕ್ಕೂ ರಾಮಾಯಣಕ್ಕೂ ಅಥವಾ ಶ್ರೀರಾಮನಿಗೂ ಯಾವುದೇ ಸಂಬಂಧ ಹೊಂದಿಲ್ಲ. ನಾವು ‘ಕೌಸಲ್ಯ ಸುಪ್ರಜಾ ರಾಮ’ ಎಂಬ ಹೆಸರು ಆಯ್ದುಕೊಂಡಿದ್ದು, ಅಮ್ಮ-ಮಗನ ಸಂಬಂಧದ ಕತೆಯನ್ನು ಸಿನಿಮಾ ಹೊಂದಿರುವ ಕಾರಣಕ್ಕಾಗಿ ಮಾತ್ರ. ‘ಕೌಸಲ್ಯ ಸುಪ್ರಜಾ ರಾಮ’ ಎಂದರೆ ಕೌಸಲ್ಯಯೆಯ ಒಳ್ಳೆಯ ಮಗನೇ ರಾಮ ಎಂದು ಅರ್ಥ” ಎಂದು ವಿವರಿಸಿದ್ದಾರೆ ಶಶಾಂಕ್.
2 years ago | [YT] | 9
View 0 replies
JUST NEWS KANNADA
Udupi News: ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು
ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ಹೌದು..ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ, (ಜುಲೈ 24): ಕರ್ನಾಟಕದ ವಿವಿಧ ಭಾಗಗಳ ಭಾರೀ ಮಳೆಯಾಗುತ್ತಿದ್ದು (rain), ನದಿ-ಹಳ್ಳಗಳು ತುಂಬಿಹರಿಯುತ್ತಿವೆ. ಇದರಿಂದ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ. ಅದ್ಯಾವುದಕ್ಕೂ ಕ್ಯಾರೇ ಎನ್ನದ ಯುವಕನೋರ್ವ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ಹೌದು…ರೀಲ್ಸ್ (Reels) ಮಾಡಲು ಹೋಗಿ ಜಾರಿ ಜಲಪಾತಕ್ಕೆ (Water Falls) ಬಿದ್ದು ಯುವಕ ಮೃತಪಟ್ಟಿದ್ದಾನೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತದಲ್ಲಿ (Arsinagundi Falls) ಈ ಘಟನೆ ನಡೆದಿದೆ.
2 years ago (edited) | [YT] | 14
View 0 replies