#ಮುನ್ನುಡಿ...
1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ.

#ಬಿ_ರೇಣುಕೇಶ್, ಪತ್ರಕರ್ತರು.

#I have been working in the field of journalism for the last 26 - 27 years. I started @UdayaSaakshi YouTube news channel and www.udayasaakshi.com news website. Please support...

#B_Renukesha, Journalist


Udaya Saakshi

ಅಪರಿಚಿತರಿಗೆ ಮನೆ ಬಾಡಿಗೆ ನೀಡುವಾಗ ಎಚ್ಚರವಹಿಸಿ : ಪಿಎಸ್ಐ ತಿರುಮಲೇಶ್ ಜಿ ನಾಯಕ್
ಶಿವಮೊಗ್ಗ, ಜುಲೈ 11: ‘ಅಪರಿಚಿತರಿಗೆ ಮನೆ ಬಾಡಿಗೆ ನೀಡುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಬಾಡಿಗೆದಾರರ ವಿಳಾಸ ಮಾಹಿತಿ, ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆ ಸಂಗ್ರಹಿಸಬೇಕು. ಸಾಧ್ಯವಾದರೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಬಾಡಿಗೆದಾರರ ಪೂರ್ವಾಪರ ಪರಿಶೀಲಿಸಬೇಕು’ ಎಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಜಿ ನಾಯಕ್ ಸಲಹೆ ನೀಡಿದ್ದಾರೆ.
11/07/2026 ರಂದು ಶಿವಮೊಗ್ಗದ ಆದರ್ಶ ನಗರದಲ್ಲಿ ವಿನೋಬನಗರ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ನಾಗರಿಕರು ಜಾಗೃತರಾಗಬೇಕು. ಮೊಬೈಲ್ ಪೋನ್ ಗೆ ಬರುವ ‘ಎಪಿಕೆ ಫೈಲ್’ ಗಳನ್ನು ತೆರೆಯಬಾರದು. ವಿವಿಧ ಆಮಿಷಗಳನ್ನೊಡುವ ಲಿಂಕ್ ಗಳನ್ನು ಕೂಡ ತೆರೆಯಬಾರದು. ಬೆದರಿಕೆ ಕರೆಗಳು, ಸಂದೇಶಗಳನ್ನು ಸ್ವೀಕರಿಸಿದ ವೇಳೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ನಿಮ್ಮ ಏರಿಯಾಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಬೇಕು. ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿ. ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿಡಲಾಗುವುದು. ನಾಗರಿಕರ ಸಹಕಾರವಿದ್ದರೆ, ಕಾನೂನು – ಸುವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವಾಸಿಗಳ ಅಹವಾಲು : ಬಡಾವಣೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದ್ಯ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪೊಲೀಸ್ ಗಸ್ತು ಹೆಚ್ಚಿಸಬೇಕು. ಬೀಟ್ ಪಾಯಿಂಟ್ ಗಳನ್ನು ಮಾಡಬೇಕು ಎಂಬುವುದು ಸೇರಿದಂತೆ ವಿವಿಧ ಅಹವಾಲುಗಳನ್ನು ನಾಗರಿಕರು ಸಭೆಯ ಮುಂದಿಟ್ಟರು. ಸದರಿ ಸಮಸ್ಯೆಗಳ ಪರಿಹಾರಕ್ಕೆ ಕಾಲಮಿತಿಯೊಳಗೆ ಕ್ರಮಕೈಗೊಳ್ಳಲಾಗುವುದು ಎಂದು ಸಬ್ ಇನ್ಸ್’ಪೆಕ್ಟರ್ ತಿರುಮಲೇಶ್ ಜಿ ನಾಯಕ್ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತ ಬಿ ರೇಣುಕೇಶ್, ಪೊಲೀಸ್ ಬೀಟ್ ಸಿಬ್ಬಂದಿ ಆಕಾಶ್, ಆದರ್ಶ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಉಮೇಶ್ ಹಿರೇಮಠ, ಕಾರ್ಯದರ್ಶಿ ಸಂತೋಷ್, ಖಜಾಂಚಿ ತಿಪ್ಪೇಸ್ವಾಮಿ, ಸ್ಥಳೀಯ ಪ್ರಮುಖರಾದ ಪೊಲೀಸ್ ಶಿವಪ್ಪ, ವೇದಾಂತ್ ಆಚಾರ್ಯ, ಶ್ರೀನಿವಾಸ್, ಮೋಹನ್, ಮಂಜುನಾಥ್, ಶೃತಿ ಸಂತೋಷ್, ಸಿಂಚನ, ನೀಲಮ್ಮ, ನವ್ಯಾ ನಾಗೇಶ್ ಸೇರಿದಂತೆ ಮೊದಲಾದವರಿದ್ದರು.

17 hours ago | [YT] | 2

Udaya Saakshi

ಶಿವಮೊಗ್ಗದ ಎಸ್.ಆರ್.ಎನ್.ಎಂ : ಪ್ರಥಮ ವರ್ಷದ ವಿದ್ಯಾರ್ಥಿಗಳಿ ಅಭಿವಿನ್ಯಾಸ 'ಪರಿಚಯ-2026'

ವಿಭಿನ್ನ ಚಿಂತನೆ ಸಾಧನೆಯ ಉತ್ತುಂಗದ ದಾರಿ : ಉದ್ಯಮಿ ನಿವೇದನ್ ನೆಂಪೆ

ಶಿವಮೊಗ್ಗ: ಭವಿಷ್ಯವನ್ನು ರೂಪಿಸುವ ಶಕ್ತಿ ವಿಭಿನ್ನ ಚಿಂತನೆಯಲ್ಲಿದ್ದು, ಸಾಧನೆಯ ಉತ್ತುಂಗದ ದಾರಿಯಾಗಿ ತೆರೆದುಕೊಳ್ಳಲಿದೆ ಎಂದು ಖ್ಯಾತ ಉದ್ಯಮಿ ನಿವೇದನ್ ನೆಂಪೆ ಹೇಳಿದರು.
ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ಅನ್ವಯಿಕ ವಿಜ್ಞಾನ ಕಾಲೇಜಿನ (ಎಸ್.ಆರ್.ಎನ್.ಎಂ) ವತಿಯಿಂದ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ 'ಪರಿಚಯ-2026' ಉದ್ಘಾಟಿಸಿ ಮಾತನಾಡಿದರು.
ಜನರು ನಿಮ್ಮ ಆಲೋಚನೆಯನ್ನು ನೋಡಿ ನಗುತ್ತಿದ್ದರೆ ಬೇಸರಪಡಬೇಡಿ. ಏಕೆಂದರೆ ನಿಮ್ಮ ಆಲೋಚನೆಯ ಅಲೆ, ಸಾಮಾನ್ಯರಿಗಿಂತ ಎತ್ತರದಲ್ಲಿದೆ ಎಂಬುದು ಅದರ ಸಂಕೇತ. ಇತಿಹಾಸದಲ್ಲಿ ಸಮಾಜವನ್ನು ಬದಲಿಸಿದ ಪ್ರತಿಯೊಂದು ವಿಭಿನ್ನ ಆಲೋಚನೆಗಳು ಆರಂಭದಲ್ಲಿ ಟೀಕೆ, ಹಾಸ್ಯ ಮತ್ತು ಅನುಮಾನಗಳಿಗೆ ಗುರಿಯಾಗಿದ್ದವು ಎಂಬುದು ನೆನಪಿಡಿ.
ಇಂದಿನ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಸಾಕಾಗುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ತಂತ್ರಜ್ಞಾನದ ಅರಿವು, ಸಂವಹನ ಕೌಶಲ್ಯತೆ ಮತ್ತು ನವೋದ್ಯಮದ ಮನೋಭಾವವು ಬೇಕಾಗಿದೆ. ಆದ್ದರಿಂದ ಯುವ ಸಮೂಹ ಪ್ರತಿದಿನ ಹೊಸ ಕೌಶಲ್ಯಗಳನ್ನು ಕಲಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಸಂಪ್ರದಾಯಬದ್ಧ ಚೌಕಟ್ಟಿನಿಂದ ಹೊರಬಂದು ವಾಸ್ತವತೆಗೆ ಬೇಕಾದಂತೆ, ಸೃಜನಶೀಲವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಿ. ಉದ್ಯೋಗವನ್ನು ಹುಡುಕುವವರಾಗುವುದಕ್ಕಿಂತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವವರಾಗಿ. ಪೋಷಕರು ಅನಗತ್ಯ ಒತ್ತಡ ಹೇರದೆ, ಮಕ್ಕಳ ಆಸಕ್ತಿಗಳಿಗೆ ತಕ್ಕಂತೆ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಯುವ ಸಮೂಹವು ವಾಸ್ತವ ಜಗತ್ತಿನ ಅರಿವನ್ನು ಬೆಳೆಸಿಕೊಳ್ಳಲು ದಿನಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು.
ಮೊಬೈಲ್ಗಳ ಅತಿಯಾದ ಬಳಕೆಯ ಮೋಹಕ್ಕೆ ಒಳಗಾಗಬೇಡಿ. ದಿನಪತ್ರಿಕೆಗಳು, ಪುಸ್ತಕಗಳು ಮತ್ತು ವಿಶ್ವಾಸಾರ್ಹ ಮಾಹಿತಿಯ ಮೂಲಗಳ ಮೂಲಕ ಜ್ಞಾನವನ್ನು ವಿಸ್ತರಿಸಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ಓದುವ ಅಭ್ಯಾಸವು ಉತ್ತಮ ಚಿಂತನೆ, ಸ್ಪಷ್ಟತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಬಿಸಿಎ, ಬಿಎಸ್ಸಿ ವಿಭಾಗದಲ್ಲಿ ಕುವೆಂಪು ವಿವಿಯ ರ್ಯಾಂಕ್ ಪಡೆದ 7 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ಲೇಸ್ಮೆಂಟ್ ಅಧಿಕಾರಿ ಪ್ರದೀಪ್.ಜಿ.ಎಸ್ ಉದ್ಯೋಗವಕಾಶಗಳ ಬಗ್ಗೆ ಹಾಗೂ ಆಯಿಶಾ ರೆಹಮಾನ್ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕರಾದ ಡಾ.ಮುಕುಂದ ಸ್ವಾಗತಿಸಿ, ರೇಖಾ ವಂದಿಸಿ, ಲಕ್ಷ್ಮಣ್ ನಿರೂಪಿಸಿದರು.

Different thinking is the path to peak achievement: Entrepreneur Nivedan Nempe | Shivamogga: The power to shape the future lies in different thinking, which will open up as the path to peak achievement, said renowned entrepreneur Nivedan Nempe.

He was speaking while inaugurating the orientation program 'Parichaya-2026' for first-year BCA and BSC students organized by the city's S.R. Nagappashetty Memorial College of Applied Sciences (SRNM) at the Kuvempu Theatre on Friday. #shimoga #shivamogga #news #NewsUpdate #ಶಿವಮೊಗ್ಗ

17 hours ago | [YT] | 7

Udaya Saakshi

ರಸ್ತೆಯಲ್ಲಿ ಸಿಕ್ಕಿದ ತಾಳಿ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಹೊಳೆಹೊನ್ನೂರಿನ ರಾಮಪ್ಪ
ಶಿವಮೊಗ್ಗ, ಜುಲೈ 11: ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಮಾಂಗಲ್ಯ ಸರವನ್ನು, ವ್ಯಕ್ತಿಯೋರ್ವರು ಪೊಲೀಸರ ಮೂಲಕ ಮಹಿಳೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದು, ಜನಮೆಚ್ಚುಗೆಗೆ ಪಾತ್ರರಾದ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ನಡೆದಿದೆ.
9/07/2026 ರಂದು ಹೊಳೆಹೊನ್ನೂರು ಪಟ್ಟಣದಲ್ಲಿ ಮಂಜಮ್ಮ ಎಂಬುವರು ಆಕಸ್ಮಿಕವಾಗಿ 14 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ಎಲ್ಲೆಡೆ ಹುಡಿಕಿದರೂ ಸರ ಸಿಕ್ಕಿರಲಿಲ್ಲ.
ಈ ನಡುವೆ ಸದರಿ ಸರವು ಎನ್.ಟಿ. ಸರ್ಕಲ್ ನಲ್ಲಿ ರಾಮಪ್ಪ ಎಂಬುವರಿಗೆ ಸಿಕ್ಕಿತ್ತು. ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ, ರಾಮಪ್ಪರವರು ಮಾಂಗಲ್ಯ ಸರ ಸಿಕ್ಕಿರುವ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಈ ನಡುವೆ ಮಂಜಮ್ಮ ಅವರು ಸರ ಕಳೆದು ಹೋಗಿರುವ ಕುರಿತಂತೆ ದೂರು ನೀಡಲು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಸರ ಸಿಕ್ಕಿರುವ ಕುರಿತಂತೆ ಮಂಜಮ್ಮರಿಗೆ ಪೊಲೀಸರು ಮಾಹಿತಿ ನೀಡಿ, ರಾಮಪ್ಪರ ಮೂಲಕವೇ ತಾಳಿ ಸರ ಹಿಂದಿರುಗಿಸಿದ್ದಾರೆ. ರಾಮಪ್ಪರವರ ಪ್ರಾಮಾಣಿಕತೆಗೆ ಸ್ಥಳೀಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Ramappa of Holehonnur showed his honesty by returning a necklace found on the road

18 hours ago | [YT] | 3

Udaya Saakshi

ಶಿಕಾರಿಪುರ ತಾಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳ 281 ಕೆರೆಗಳಿಗೆ ಹರಿಯಲಿದೆ ತುಂಗಭದ್ರಾ ನದಿ ನೀರು!
ಶಿಕಾರಿಪುರ, ಜುಲೈ 10: ಶಿಕಾರಿಪುರ ತಾಲೂಕಿನ ಹಲವು ವರ್ಷಗಳ ಬೇಡಿಕೆಯಾಗಿದ್ದ ಉಡುಗಣಿ, ತಾಳಗುಂದ ಹಾಗೂ ಹೊಸೂರು ಹೋಬಳಿಗಳ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸುವ ಏತ ನೀರಾವರಿ ಯೋಜನೆ ಕೊನೆಗೂ ಕಾರ್ಯಗತಗೊಂಡಿದೆ.
ಹಿರೇಕೆರೂರು ತಾಲೂಕಿನ ಚಟ್ನಹಳ್ಳಿ ಗ್ರಾಮದ ಸಮೀಪ ಹಾದು ಹೋಗಿರುವ ತುಂಗಭದ್ರಾ ನದಿಯಿಂದ ಶಿಕಾರಿಪುರ ತಾಲೂಕಿನ 281 ಕೆರೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಜುಲೈ 10 ರಿಂದ ವಿಧ್ಯುಕ್ತ ಚಾಲನೆ ದೊರಕಿದೆ.
ಶಿಕಾರಿಪುರ ತಾಲೂಕಿನ ಕಡೇ ನಂದಿಹಳ್ಳಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಯಲಾರಂಭಿಸಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರರವರು ಕಡೇ ನಂದಿಹಳ್ಳಿ ಕೆರೆಗೆ ಭೇಟಿಯಿತ್ತು, ತುಂಗಭದ್ರಾ ನದಿ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸ್ಥಳೀಯ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪರವರ ಇಚ್ಛಶಾಕ್ತಿಯ ಫಲವಾಗಿ ಸುಮಾರು 850 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಕಾರ್ಯಗತಗೊಂಡಿದೆ. ಸದರಿ ಯೋಜನೆಯಡಿ ಶಿಕಾರಿಪುರ ತಾಲೂಕಿನ 281 ಹಾಗೂ ಹಿರೇಕೆರೂರು ತಾಲೂಕಿನ 9 ಕೆರೆಗಳು ಸೇರಿದಂತೆ ಒಟ್ಟಾರೆ 290 ಕೆರೆಗಳಿಗೆ ನೀರು ಹರಿಯಲಿದೆ.
ಪ್ರಸ್ತುತ ಮುಂಗಾರು ಮಳೆ ಕೊರತೆಯಿಂದ ಕೆರೆಗಳಲ್ಲಿ ನೀರಿನ ಸಂಗ್ರಹ ಸಂಪೂರ್ಣ ಕಡಿಮೆಯಾಗಿದೆ. ಈ ವೇಳೆ ತುಂಗಭದ್ರಾ ನದಿಯಿಂದ ನೀರು ಹರಿಯುತ್ತಿರುವುದು ಶಿಕಾರಿಪುರ ತಾಲೂಕಿನ ಮೂರು ಹೋಬಳಿಗಳ ಗ್ರಾಮಸ್ಥರು, ರೈತರಲ್ಲಿ ಸಂತಸ ಉಂಟು ಮಾಡಿದೆ.
udayasaakshi.com/archives/19889
https://youtu.be/GEonaFAxvDE

1 day ago (edited) | [YT] | 12

Udaya Saakshi

ಆಗುಂಬೆ ಘಾಟಿ ಸುರಂಗ ಮಾರ್ಗ ಯೋಜನೆ : ಎಂಜಿನಿಯರ್ ಬಿ ಎಸ್ ಬಾಲಕೃಷ್ಣ ಸಲಹೆಯೇನು?udayasaakshi.com/archives/19884

#agumbe #agumbeghat #malnad #shimoga #thirthahalli

1 day ago | [YT] | 0

Udaya Saakshi

ಆಗುಂಬೆ ಘಾಟಿ ಸುರಂಗ ಮಾರ್ಗ ಯೋಜನೆ : ಎಂಜಿನಿಯರ್ ಬಿ ಎಸ್ ಬಾಲಕೃಷ್ಣ ಸಲಹೆಯೇನು?
ಶಿವಮೊಗ್ಗ, ಜುಲೈ 10: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ನಿರ್ಮಾಣ ಯೋಜನೆ ಬದಲಿಗೆ, ಹಾಲಿ ರಸ್ತೆಯನ್ನೇ ಬಲವರ್ಧನೆಗೊಳಿಸಿ ಅಭಿವೃದ್ದಿಗೊಳಿಸುವುದು ಸೂಕ್ತವಾಗಿದೆ ಎಂದು ಹಿರಿಯ ಎಂಜಿನಿಯರ್ ಬಿ ಎಸ್ ಬಾಲಕೃಷ್ಣರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಅವರು ಫೇಸ್’ಬುಕ್ ತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈಗಿರುವ ಘಾಟಿ ರಸ್ತೆಯನ್ನೇ ಉತ್ತಮ ರೀತಿಯಲ್ಲಿ ಪುನರ್ ನಿರ್ಮಾಣಗೊಳಿಸಿದರೆ, ಎಲ್ಲ ಹವಾಮಾನದಲ್ಲಿಯೂ ಬಳಕೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಘಾಟಿ ರಸ್ತೆಯಲ್ಲಿ ಇಳಿಜಾರು ಕುಸಿತಕ್ಕೆ ಸಮರ್ಪಕ ನಿರ್ವಹಣೆಯ ಕೊರತೆ ಕಾರಣವಾಗಿದೆ. ನಿಯಮಿತವಾಗಿ ಇಳಿಜಾರು ಸ್ಥಿರೀಕರಣ ಕ್ರಮಗಳನ್ನು ಕೈಗೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಸದರಿ ಹೆದ್ದಾರಿಯಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಬೇಕಾಗಿಲ್ಲ. ಭಾರೀ ವಾಹನ ಹಾಗೂ ಉದ್ದವಾದ ವಾಹನಗಳನ್ನು ಬೇರೆ ರಸ್ತೆಗಳಲ್ಲಿ ಸಂಚರಿಸಲು ಅವಕಾಶ ನೀಡಬೇಕು. ಸದ್ಯ ಆಗುಂಬೆ ಘಾಟಿ ರಸ್ತೆಯಲ್ಲಿ ಅಂದಾಜು ಮಾಡಲಾಗಿರುವ ವಾಹನಗಳ ಸಂಚಾರ ದಟ್ಟಣೆ, ವಾಸ್ತವ ಸಂಚಾರ ದಟ್ಟಣೆಗಿಂತ ಹೆಚ್ಚಿಗೆ ತೋರಿಸಲಾಗಿದೆ. ಇದು ಸರಿಯಲ್ಲವೆಂದು ಎಂದು ಹೇಳಿದ್ದಾರೆ.
ಆಗುಂಬೆ ಘಾಟಿಯಲ್ಲಿ ಸುರಂಗ ನಿರ್ಮಾಣ ಯೋಜನೆಯು ದೀರ್ಘಾವಧಿಯದ್ದಾಗಿದೆ. 2000 ಕೋಟಿ ರೂ. ಮೀಸಲಿಡಲಾಗುತ್ತಿದೆ. ಯೋಜನೆ ಪೂರ್ಣಗೊಳ್ಳಬೇಕಾದರೆ ಹಲವು ವರ್ಷಗಳೇ ಬೇಕಾಗುತ್ತದೆ. ಇದರಿಂದ ನಾಗರಿಕರಿಗೆ ತೊಂದರೆಯಾಗಲಿದೆ.
ಈ ಕಾರಣದಿಂದ ಪ್ರಸ್ತುತ 30 ಕೋಟಿ ರೂ. ವೆಚ್ಚ ಮಾಡಿದರೆ, ಘಾಟಿ ರಸ್ತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಲವರ್ಧನೆ ಮಾಡಬಹುದಾಗಿದೆ ಎಂದು ಬಿ ಎಸ್ ಬಾಲಕೃಷ್ಣರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Agumbe Ghati Tunnel Project: What is Engineer B S Balakrishna's suggestion?
Shivamogga, July 10: Senior Engineer B S Balakrishna has expressed the opinion that instead of the tunnel construction project on the Agumbe Ghati National Highway in Thirthahalli taluk, it would be appropriate to strengthen and develop the existing road.

1 day ago | [YT] | 2

Udaya Saakshi

SHIMOGA | ಗೃಹಜ್ಯೋತಿ ಮಾಹಿತಿ ಭರ್ತಿಗೆ ಸರ್ವರ್ ಡೌನ್ ಸಮಸ್ಯೆ!

#shimoga #shivamogga #news #gruhajyothischeme #gruhajyothi

1 day ago | [YT] | 1

Udaya Saakshi

ಉದ್ಯೋಗಾವಕಾಶ : ಶಿವಮೊಗ್ಗ ನಗರದಲ್ಲಿ ಜುಲೈ 13 ರಂದು ನೇರ ಸಂದರ್ಶನದ ಮೂಲಕ ನೇಮಕ

ಶಿವಮೊಗ್ಗ, ಜುಲೈ 10 : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜು.13 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಶನದಲ್ಲಿ ಸ್ವತಂತ್ರ ಮೈಕ್ರೋಫಿನ್ ಪ್ರೈ.ಲಿ. ಸಂಸ್ಥೆ ಭಾಗವಹಿಸುತ್ತಿದೆ. ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ ಎಂದು ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಮತ್ತು ಯಾವುದೇ ಡಿಗ್ರಿ ಪೂರೈಸಿದ, 18 ರಿಂದ 30 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ನೇರ ಸಂದರ್ಶನಕ್ಕೆ ಪ್ರವೇಶ ಉಚಿತವಾಗಿದೆ.
ಸಂದರ್ಶನಕ್ಕೆ ಬರುವವರು ತಮ್ಮ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಶಿವಮೊಗ್ಗ ನಗರದ ಸಾಗರ ರಸ್ತೆಯ ಗುತ್ಯಪ್ಪ ಕಾಲೋನಿ ಪಂಪಾ ನಗರ 2 ನೇ ಕ್ರಾಸ್ ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಗಮಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Job Opportunity: Direct Interview Recruitment in Shivamogga City on July 13
Shivamogga, July 10: The District Employment Exchange Office has organized a direct interview for job seekers on July 13 at 10 am.
Independent Microfin Pvt. Ltd. is participating in this interview. The candidates for the vacant posts in the organization will be selected through direct interview, the Employment Exchange Office said in a release.
Male candidates between the ages of 18 to 30 who have completed SSLC, PUC, ITI, Diploma and any degree can participate. Admission to the direct interview is free.
Those who come for the interview should come to the District Employment Exchange Office at Guthyappa Colony Pampa Nagar 2nd Cross, Sagar Road, Shivamogga City with their biodata and Aadhaar card copies.
For more information, the employment officers said in the release.

2 days ago | [YT] | 5

Udaya Saakshi

ಮಲೆನಾಡಲ್ಲಿ ಮುಂಗಾರು ಮಳೆ ಇಳಿಕೆ : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಗಣನೀಯ ಕುಸಿತ!

ಶಿವಮೊಗ್ಗ, ಜುಲೈ 10: ಮಲೆನಾಡಿನಲ್ಲಿ ಮುಂಗಾರು ಮಳೆಯ ತೀವ್ರತೆ ಮತ್ತಷ್ಟು ಇಳಿಕೆಯಾಗಿದೆ. ಇದರಿಂದ ಪ್ರಮುಖ ಡ್ಯಾಂಗಳಾದ ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಮತ್ತಷ್ಟು ಇಳಿಕೆ ಕಂಡುಬಂದಿದೆ.
10/07/2026 ರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವು 19,496 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಡ್ಯಾಂನ ನೀರಿನ ಮಟ್ಟ 1762.05 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು 1797. 05 ಅಡಿಯಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಸರಿಸುಮಾರು 35 ಅಡಿಯಷ್ಟು ಕಡಿಮೆ ನೀರು ಸಂಗ್ರಹವಾಗಿದೆ.
ಮಧ್ಯ ಕರ್ನಾಟಕದ ಪ್ರಮುಖ ಜಲಾಶಯವಾದ ಭದ್ರಾ ಡ್ಯಾಂನ ಒಳಹರಿವು 13,123 ಕ್ಯೂಸೆಕ್ ಒಳಹರಿವಿದ್ದು, 218 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 146 ಅಡಿ 1 ಇಂಚು (ಗರಿಷ್ಠ ಮಟ್ಟ : 186) ಇದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 173 ಅಡಿ 7 ಇಂಚು ಇತ್ತು.
ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿರುವುದರಿಂದ, ತುಂಗಾ ಡ್ಯಾಂನ ಒಳಹರಿವಿನಲ್ಲಿಯೂ ಕುಸಿತವಾಗಿದೆ. ಪ್ರಸ್ತುತ 22,058 ಕ್ಯೂಸೆಕ್ ಇದ್ದು, ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ಹೊರ ಹರಿಸಲಾಗುತ್ತಿದೆ.
ಮಳೆ ವಿವರ : 10/7/2026 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿದ್ದ ಮಳೆ ವಿವರ ಈ ಮುಂದಿನಂತಿದೆ. ಮಾಣಿ 45 ಮಿಲಿ ಮೀಟರ್ (ಮಿ.ಮೀ.), ಯಡೂರು 42 ಮಿ.ಮೀ., ಹುಲಿಕಲ್ 45 ಮಿ.ಮೀ., ಮಾಸ್ತಿಕಟ್ಟೆ 58 ಮಿ.ಮೀ., ಚಕ್ರಾ 52 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 52 ಮಿ.ಮೀ. ಮಳೆಯಾಗಿದೆ.

Monsoon rains decrease in Malnad: Significant drop in inflow of Linganamakki, Tunga, Bhadra dams!
Shivamogga, July 10: The intensity of monsoon rains has further decreased in Malnad. Due to this, there has been a further decrease in the inflow of major dams such as Linganamakki, Tunga and Bhadra dams.
As of 8 am on 10/07/2026, the inflow of Linganamakki dam, the major hydroelectric power generation center of the state, has decreased to 19,496 cusecs. The outflow has been completely stopped.
The water level of the dam is 1762.05 feet (maximum level: 1819). Last year, it was 1797. 05 feet on the same day. Compared to last year, the current year has accumulated approximately 35 feet less water.
The inflow of Bhadra Dam, the main reservoir of Central Karnataka, is 13,123 cusecs and 218 cusecs of water is being released. The water level in the dam is 146 feet 1 inch (maximum level: 186). Last year on the same day, the water level in the dam was 173 feet 7 inches.
Due to the complete reduction in the rainfall in the catchment area, the inflow of Tunga Dam has also declined. Currently, it is 22,058 cusecs and since the dam has already reached its maximum level, only the inflow is being released.
Rainfall details: The rainfall details of the areas under the Western Ghats in the district during the last 24 hours ending at 8 am on 10/7/2026 are as follows. Mani received 45 millimeters (mm), Yadoor received 42 mm, Hulikal received 45 mm, Mastikatte received 58 mm, Chakra received 52 mm and Savehaklu received 52 mm.

#rain #shimoga #shivamogga #monsoon #MalnadNews

2 days ago | [YT] | 4

Udaya Saakshi

ಸಿಎಂ ಕಚೇರಿ ಮಾಧ್ಯಮ ತಂಡದ ಗಮನಕ್ಕೆ…

ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯಿದ್ದ ‘ಸಿಎಂ ಕಚೇರಿ ಮಾಧ್ಯಮ ತಂಡ’ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಸಿಎಂ ಅವರ ಕಾರ್ಯಕ್ರಮದ ದೈನಂದಿನ ವಿಡಿಯೋ – ಪೋಟೋ - ವರದಿಗಳನ್ನು ಕೇವಲ ಬೆಂಗಳೂರು ಮಾಧ್ಯಮಗಳಿಗೆ ಮಾತ್ರವಲ್ಲದೆ, ರಾಜ್ಯದ ಎಲ್ಲ ಜಿಲ್ಲೆಗಳ ಪ್ರಮುಖ ಪತ್ರಕರ್ತರನ್ನೊಳಗೊಂಡ ವ್ಯಾಟ್ಸಾಪ್ ಗ್ರೂಪ್ ರಚಿಸಿ ತಲುಪಿಸುವ ಕಾರ್ಯ ಮಾಡುತ್ತಿತ್ತು.
ಇದರಿಂದ ಸಿದ್ದರಾಮಯ್ಯರವರ ಪ್ರತಿಯೊಂದು ಕಾರ್ಯಕ್ರಮಗಳಿಗೂ ಜಿಲ್ಲಾ ಹಂತಗಳ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚಿನ ಪ್ರಚಾರ ಸಿಗುತ್ತಿತ್ತು. ರಾಜ್ಯದ ಮೂಲೆಮೂಲೆಗೂ ತಲುಪುತ್ತಿತ್ತು. ಸೋಶಿಯಲ್ ಮೀಡಿಯಾ ಬಳಸದ ಸಿದ್ದರಾಮಯ್ಯರವರು, ‘ಸಿಎಂ ಕಚೇರಿ ಮಾಧ್ಯಮ ತಂಡ’ದ ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಜನಪ್ರಿಯ ವ್ಯಕ್ತಿಯಾಗುವಂತಾಗಿತ್ತು!
ಸಿಎಂ ಡಿ ಕೆ ಶಿವಕುಮಾರ್ ರವರ ‘ಸಿಎಂ ಕಚೇರಿ ಮಾಧ್ಯಮ ತಂಡ’ ಕೂಡ ಈ ವ್ಯವಸ್ಥೆಯನ್ನು ಆರಂಭಿಸಬೇಕಾಗಿದೆ. ಸದ್ಯ ಸಿಎಂ ಕಚೇರಿಗೆ ಮೂವರು ಮಾಧ್ಯಮ ಕಾರ್ಯದರ್ಶಿಗಳ ನೇಮಕವಾಗಿದೆ. ಸಿಎಂ ಅವರ ದೈನಂದಿನ ಕಾರ್ಯಕ್ರಮದ ವಿಡಿಯೋ – ಪೋಟೋ - ವರದಿಗಳನ್ನು ಕೇವಲ ಬೆಂಗಳೂರು ಮಾಧ್ಯಮಗಳಿಗೆ ಸೀಮಿತಗೊಳಿಸಬಾರದು.
ಸಿದ್ದರಾಮಯ್ಯ ಅವಧಿಯಲ್ಲಿದ್ದಂತೆ, ಎಲ್ಲ ಜಿಲ್ಲೆಗಳ ಪತ್ರಕರ್ತರಿಗೂ ವ್ಯಾಟ್ಸಾಪ್ ಗ್ರೂಪ್ ಮೂಲಕ ರವಾನಿಸುವ ಕಾರ್ಯ ನಡೆಸಬೇಕಾಗಿದೆ. ಇದರಿಂದ ಸಿಎಂ ಡಿ ಕೆ ಶಿವಕುಮಾರ್ ಅವರ ದೈನಂದಿನ ಕಾರ್ಯಕ್ರಮಗಳು ಸ್ಥಳೀಯ ಪತ್ರಿಕೆಗಳು, ಕೇಬಲ್ ಚಾನಲ್, ನ್ಯೂಸ್ ವೆಬ್’ಸೈಟ್, ಯೂಟ್ಯೂಬ್ ನ್ಯೂಸ್ ಚಾನಲ್, ಫೇಸ್’ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ರಾಜ್ಯದ ಮೂಲೆಮೂಲೆಗೆ ತಲುಪುವಂತಾಗುತ್ತದೆ.
****** ಬಿ ರೇಣುಕೇಶ್, ಪತ್ರಕರ್ತರು, ಶಿವಮೊಗ್ಗ.
Chief Minister of Karnataka DK Shivakumar
#CMOffice #DKShivakumar #cmmedia #karnataka #siddaramiaha

2 days ago | [YT] | 125